MUDA – ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಎ1 ಆರೋಪಿಯಾಗಿದ್ದಾರೆ. ಈ ಹಗರಣ ಬೆಳಕಿಗೆ ಬಂದ ಬಳಿಕ ರಾಜ್ಯದಲ್ಲಿ ಸಿಎಂ ರಾಜೀನಾಮೆಯ ಸುದ್ದಿ ಸಹ ಜೋರಾಗಿ ಕೇಳಿಬರುತ್ತಲೇ ಇದೆ. ಈ ಹಗರಣದಲ್ಲಿ ತನ್ನ ಪಾತ್ರವೇನು ಇಲ್ಲ ಅಂತಾ ಸಿಎಂ ಹೇಳುತ್ತಲೇ ಇದ್ದಾರೆ. ಜೊತೆಗೆ ಇ.ಡಿ (ED) ಯನ್ನು ಸಹ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ಚೂ ಬಿಟ್ಟಿದೆ ಎಂದೂ ಸಹ ಹೇಳುತ್ತಿದ್ದಾರೆ. ಇದೀಗ ಈ ಕುರಿತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಮಾತನಾಡಿದ್ದು, ಮುಡಾ (MUDA) ಕೇಸ್ ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

Muda ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಮುಡಾ ಕೇಸ್ ಕುರಿತು ಇಡಿ ಲೋಕಾಯುಕ್ತರಿಗೆ ಬರೆದ ಪತ್ರದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮುಡಾ ಕೇಸ್ ನಲ್ಲಿ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಸರ್ಕಾರ ಹಾಗೂ ಸಚಿವರು ಆಲಿಬಾಬಾ 40 ಕಳ್ಳರಿದ್ದಂತೆ. ಇಡಿ ಪತ್ರಕ್ಕೂ ಕೇಂದ್ರ ಸರ್ಕಾರಕ್ಕೂ ಏನು ಸಂಬಂಧ ಹೇಳಿ. ಮುಡಾ ಕೇಸ್ ಬಗ್ಗೆ ಹೈಕೋರ್ಟ್‌ನಲ್ಲಿ ತನಿಖೆಗೆ ಆದೇಶವಾಗಿದೆ. ಅದರಂತೆ ತನಿಖೆ ಸಹ ನಡೆಯುತ್ತಿದೆ. ಇಡಿಯವರಿಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿಲ್ಲ. ಮುಡಾ ಪ್ರಕರಣದಡಿ ರಾಜ್ಯಪಾಲರಿಗೆ ದೂರು ನೀಡಿರುವಂತಹವರೇ ED ಗೂ ದೂರು ನೀಡಿದ್ದಾರೆ. ಮುಡಾದಲ್ಲಿ ಹಣಕಾಸು ವ್ಯವಹಾರ ನಡೆದಿರೋ ಹಿನ್ನೆಲೆ ದೂರು ನೀಡಿದ್ದಾರೆ. ಈ ಕಾರಣದಿಂದ ಇಡಿ ತನಿಖೆ ನಡೆಸಿ, ಮಾಹಿತಿ ಕೊಟ್ಟಿದೆ ಎಂದಿದ್ದಾರೆ.
ಇನ್ನೂ ಕೃಷ್ಣಬೈರೇಗೌಡರು ಇಡಿಯನ್ನು ಸೀಳು ನಾಯಿ ಎಂದು ಹೇಳಿದ್ದಾರೆ. ಇಡಿ ಸೀಳು ನಾಯಿ ಆದ್ರೆ ನಿಮ್ಮ ಎಸ್.ಐ.ಟಿ ಏನು? ಎಸ್.ಐ.ಟಿ ಅವರು ಏನು ಮಾಡಿದ್ದಾರೆ. ಎಸ್.ಐ.ಟಿ ಮೂಲಕ ಸಹೋದರ ರೇವಣ್ಣನ ಕೇಸ್ ನಲ್ಲಿ ಯಾವ ರೀತಿ ನಡೆದುಕೊಂಡಿದ್ದೀರೀ? ಮಾಜಿ ಪ್ರಧಾನಿಗಳ ಮನೆಗೆ ಪೊಲೀಸರನ್ನು ಕಳುಹಿಸಿ ರೇವಣ್ಣನನ್ನು ಅರೆಸ್ಟ್ ಮಾಡಿಸಿದ್ರಿ, ನಿಮಗೆ ಯಾವ ನೈತಿಕತೆಯಿದೆ, ರೇವಣ್ಣ ನಿಮಗೆ ಏನು ಮಾಡಿದ್ದ, 5 ವರ್ಷ ಕೇಸನ್ನು ಯಾರಿಂದಲೋ ದೂರು ಪಡೆದು ಏನೇನೋ ನಡೆಸಿದ್ದೀರಾ ಎಲ್ಲವೂ ಗೊತ್ತಿದೆ ಎಂದು ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಇನ್ನೂ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಸಹ ಮುಡಾ ಹಗರಣದ ಬಗ್ಗೆ ಮಾತನಾಡಿದ್ದಾರೆ. ದೆಹಲಿಯಲ್ಲಿ ಪಕ್ಷದ ಬೆಳವಣಿಗೆಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J P Nadda) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸದ್ಯ ರಾಜ್ಯದಲ್ಲಿ ಮುಡಾ ಹಗರಣ ಪ್ರಚಲಿತದಲ್ಲಿದ್ದು, ಅದನ್ನು ಮುಚ್ಚಿಗಾಕಲು ಸಮಾವೇಶ ಮಾಡುತ್ತಿದ್ದಾರೆ. ಸ್ವಾಭಿಮಾನ ಸಮಾವೇಶ ಹೋಗಿ ಡಿ.ಕೆ.ಶಿವಕುಮಾರ್ ಸಮಾವೇಶವಾಗಿದೆ. ಅಗ್ರಿಮೆಂಟ್ ಬಗ್ಗೆ ಸಹ ಚರ್ಚೆ ನಡೆಯುತ್ತಿದೆ. ದೇವೇಗೌಡರಿಗೆ ಟಾಂಗ್ ಕೊಡಲು ಹೋದವರು, ಇದೀಗ ಪರಸ್ಪರ ಟಾಂಗ್ ಕೊಡುತ್ತಿದ್ದಾರೆ. ಮುಡಾ ಹಗರಣದಲ್ಲಿ ನಾಲ್ಕೈದು ಸಾವಿರ ಕೋಟಿ ಹಗರಣ ಆಗಿದೆ. ಈ ಸಂಬಂಧ ನಾನು ದಾಖಲೆ ಕೊಡುವಂತೆ ಮಾಹಿತಿ ಕೋರಿದ್ದೇನೆ ಆದರೆ ಇನ್ನೂ ಕೊಟ್ಟಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.