True Love – ಪ್ರೀತಿಯು ಎಲ್ಲದಕ್ಕಿಂತ ದೊಡ್ಡದು ಎಂಬುದಕ್ಕೆ ಇದೊಂದು ಕರಾಳ ಉದಾಹರಣೆ. ತನ್ನ ಗಂಡನ ಜೀವ ಉಳಿಸಲು ಯಕೃತ್ತು ದಾನ ಮಾಡಿದ ಮಹಿಳೆಯೊಬ್ಬರು, ಶಸ್ತ್ರಚಿಕಿತ್ಸೆ ವಿಫಲವಾಗಿ ಕೊನೆಗೆ ತಾವೂ ಸಾವನ್ನಪ್ಪಿದ ದುರಂತ ಘಟನೆಯೊಂದು ಪುಣೆಯಲ್ಲಿ ನಡೆದಿದೆ. ಇದು ವೈದ್ಯಕೀಯ ಜಗತ್ತಿನಲ್ಲಿ ಒಂದು ರೀತಿ ಆಘಾತ ಮೂಡಿಸಿದೆ. ಆಕೆಯ ಗಂಡ ಶಸ್ತ್ರಚಿಕಿತ್ಸೆ ನಂತರ ತಕ್ಷಣವೇ ನಿಧನರಾದರೆ, ಪತ್ನಿ ಕೆಲವು ದಿನಗಳ ನಂತರ ಕೊನೆಯುಸಿರೆಳೆದಿದ್ದಾರೆ. ಈ ಘಟನೆ ವೈದ್ಯಕೀಯ ನಿರ್ಲಕ್ಷ್ಯದ ಆರೋಪಕ್ಕೆ ಕಾರಣವಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.
True Love – ಯಕೃತ್ತು ದಾನ ಮಾಡಿದ ಪತ್ನಿ, ಆದರೆ ಉಳಿಯಲಿಲ್ಲ ಜೀವ
ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ತಮ್ಮ ಪತಿ ಬಾಪು ಕೋಮ್ಕರ್ ಅವರ ಜೀವ ಉಳಿಸಲು ಪತ್ನಿ ಕಾಮಿನಿ ಯಕೃತ್ತು ದಾನ ಮಾಡಲು ಧೈರ್ಯದಿಂದ ನಿರ್ಧರಿಸಿದರು. ಆಗಸ್ಟ್ 15 ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ಶಸ್ತ್ರಚಿಕಿತ್ಸೆಯ ನಂತರವೂ ಬಾಪು ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಆಗಸ್ಟ್ 17 ರಂದು ಅವರು ನಿಧನರಾದರು. ಇನ್ನು, ಪತಿಯ ಸಾವಿನಿಂದ ಕಂಗೆಟ್ಟಿದ್ದ ಕಾಮಿನಿ, ಶಸ್ತ್ರಚಿಕಿತ್ಸೆಯಿಂದ ಸೋಂಕಿಗೆ ಒಳಗಾಗಿದ್ದರು ಎನ್ನಲಾಗಿದೆ. ಅವರೂ ಸಹ ಆಗಸ್ಟ್ 21 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
True Love – ವೈದ್ಯರ ನಿರ್ಲಕ್ಷ್ಯವೇ ಕಾರಣ? ತನಿಖೆಗೆ ಒತ್ತಾಯ
ಈ ಘಟನೆ ವೈದ್ಯಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಮಿನಿ ಕುಟುಂಬ ಸದಸ್ಯರು ಇದು ವೈದ್ಯರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ತಕ್ಷಣವೇ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ಕುರಿತು ಮಹಾರಾಷ್ಟ್ರ ಆರೋಗ್ಯ ಇಲಾಖೆಯು ಸಹ್ಯಾದ್ರಿ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ. Read this also : ಇನ್ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ, ಪ್ರಿಯತಮೆ 3 ಮಕ್ಕಳ ತಾಯಿ ಎಂದಾಗ ಪ್ರೇಮಿ ಶಾಕ್! ಆದರೂ ಮದುವೆಯಾಗಲು ನಿರ್ಧಾರ….!
ಆಸ್ಪತ್ರೆಯಿಂದ ಸ್ಪಷ್ಟೀಕರಣ ಮತ್ತು ಸರ್ಕಾರಕ್ಕೆ ಮಾಹಿತಿ
ಈ ವಿಷಯದ ಕುರಿತು ಮಹಾರಾಷ್ಟ್ರ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಡಾ. ನಾಗನಾಥ್ ಯೆಂಪಲ್ಲೆ ಅವರು, ಸಹ್ಯಾದ್ರಿ ಆಸ್ಪತ್ರೆಯು ಸೋಮವಾರದೊಳಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ನೋಟಿಸ್ ನೀಡಲಾಗಿದೆ ಎಂದಿದ್ದಾರೆ. ಆಸ್ಪತ್ರೆ ತನ್ನ ಕಡೆಯಿಂದ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ಹೇಳಿದೆ. ಆಪರೇಷನ್‌ಗೆ ಮುನ್ನವೇ ರೋಗಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಹಾಗೂ ಶಸ್ತ್ರಚಿಕಿತ್ಸೆಯಿಂದಾಗಬಹುದಾದ ಅಪಾಯಗಳ ಬಗ್ಗೆ ಕುಟುಂಬ ಸದಸ್ಯರು ಹಾಗೂ ದಾನಿಗಳಿಗೆ ಸಂಪೂರ್ಣವಾಗಿ ವಿವರಿಸಲಾಗಿತ್ತು ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ. ಜೊತೆಗೆ, ಅವರು ಒಪ್ಪಿಗೆ ನೀಡಿದ ನಂತರವೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿಕೊಂಡಿದೆ.