Saturday, August 30, 2025
HomeStateಕೋರ್ಟ್ ಆದೇಶ ಪ್ರತಿ ಕೇಳಿದರೇ ಪಬ್ಲಿಕ್ ಪ್ರಾಸಿಕ್ಯೂಟರ್ ಕಕ್ಷಿದಾರಳನ್ನು ಮಂಚಕ್ಕೆ ಕರೆದನಂತೆ, ಮುಂದೆ ಏನಾಯ್ತು ಗೊತ್ತಾ?

ಕೋರ್ಟ್ ಆದೇಶ ಪ್ರತಿ ಕೇಳಿದರೇ ಪಬ್ಲಿಕ್ ಪ್ರಾಸಿಕ್ಯೂಟರ್ ಕಕ್ಷಿದಾರಳನ್ನು ಮಂಚಕ್ಕೆ ಕರೆದನಂತೆ, ಮುಂದೆ ಏನಾಯ್ತು ಗೊತ್ತಾ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾದ ಪಬ್ಲಿಕ್ ಪ್ರಾಸಿಕ್ಯೂಟರ್‍ ನೆರವು ಕೇಳಿದ ಕಕ್ಷಿದಾರ ಮಹಿಳೆಯನ್ನೇ ಮಂಚಕ್ಕೆ ಕರೆದಿರುವ ಘಟನೆಯೊಂದು ನಡೆದಿದೆ. ಬೆಂಗಳೂರಿನ ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‍ ಆಗಿರುವ ವ್ಯಕ್ತಿ ನ್ಯಾಯ ಕೊಡಿಸುವಂತೆ ನೆರವು ಕೇಳಿದ ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದಿದ್ದಾನೆ. ಬಳಿಕ ಆಗಿದ್ದು ಸಿನೆಮಾ ಶೈಲಿಯ ಕಥೆ ಎನ್ನಬಹುದಾಗಿದೆ.

ಸರ್ಕಾರದಿಂದ ನೇಮಕ ಮಾಡಲಾದ ಪಬ್ಲಿಕ್ ಪ್ರಾಸಿಕ್ಯೂಟರ್‍ ಒಬ್ಬರು ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದ್ದು, ಆರೋಪಿಯನ್ನು ಬೆಂಗಳೂರಿನ ಪಬ್ಲಿಕ್ ಪ್ರಾಸಿಕ್ಯೂಟರ್‍ ಶ್ರೀರಾಮ್ ಎಂದು ಗುರ್ತಿಸಲಾಗಿದೆ. ಶ್ರೀರಾಮ್ ನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಸಂತ್ರಸ್ತ ಮಹಿಳೆ ನೀಡಿದ್ದ ಹಳೆಯ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಮಹಿಳೆ ಪಬ್ಲಿಕ್ ಪ್ರಾಸಿಕ್ಯೂಟರ್‍ ಬಳಿ ಪ್ರಕರಣದ ಆದೇಶ ಪ್ರತಿ ಕೇಳಿದ್ದಾಳೆ. ಬಳಿಕ ಆದೇಶ ಪ್ರತಿ ಕೊಡುವುದಾಗಿ ಆತ ಮಹಿಳೆಯನ್ನು ಕಾಟನ್ ಪೇಟೆ ಸ್ಥಳಕ್ಕೆ ಬರಲು ತಿಳಿಸಿದ್ದಾರೆ. ಬಳಿಕ ಮಹಿಳೆಯನ್ನು ತಮ್ಮ ಸ್ಥಳದಿಂದ ಪಕ್ಕದಲ್ಲಿದ್ದ ಲಾಡ್ಜ್ ಗೆ ಕರೆದುಕೊಂಡು ಹೋಗಿದ್ದಾನೆ.

Public prosicuter sexual harrasment 0

ಮಹಿಳೆ ಲಾಡ್ಜ್ ಗೆ ಹೋಗಲು ಬರುವುದಿಲ್ಲ ಎಂದು ಹೇಳಿದರೂ ಸಹ ಕೇಸ್ ಬಗ್ಗೆ ಮಾತನಾಡಬೇಕು ಎಂದು ಬಲವಂತವಾಗಿ ಆಕೆಯನ್ನು ಲಾಡ್ಜ್ ಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಸಹಕರಿಸಲು ಬೇಡಿಕೆಯಿಟ್ಟಿದ್ದಾನೆ. ಆದರೆ ಆತನ ವರ್ತನೆಗೆ ಪ್ರತಿರೋಧ ಒಡ್ಡಿದ ಮಹಿಳೆ ಕೂಡಲೇ ಗಂಡನಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾಳೆ. ಇನ್ನೂ ಮಹಿಳೆಯಿಂದ ಆಕೆಯ ಗಂಡ ದೂರವಿದ್ದ ಕಾರಣ ಗಂಡನ ಸ್ನೇಹಿತನನ್ನು ಲಾಡ್ಜ್ ಸ್ಥಳಕ್ಕೆ ಹೋಗಿ ಸಹಾಯ ಮಾಡಲು ಹೇಳಿದ್ದಾನೆ. ಗಂಡನ ಸ್ನೇಹಿತ ಲಾಡ್ಜ್ ಒಳಗೆ ಹೋಗಿ ಜಗಳ ಮಾಡುತ್ತಾ ಆತನನ್ನು ಕರೆದುಕೊಂಡು ಬಂದಿದ್ದಾನೆ. ಲಾಡ್ಜ್ ಹೊರಗೆ ಬಂದ ನಂತರ ಪ್ರಾಸಿಕ್ಯೂಟರ್‍ ವರ್ತನೆಯ ಬಗ್ಗೆ ಮಹಿಳೆಯ ಗಂಡನ ಸ್ನೇಹಿತ ವಿವರವಾಗಿ ವಿಡಿಯೋ ಮಾಡಿದ್ದು, ವಿಡಿಯೋ ಪೊಲೀಸರಿಗೆ ನೀಡಿದ್ದಾರೆ. ಸದ್ಯ ಲೈಂಗಿಕ ಕಿರುಕುಳ ಆರೋಪದಡಿ ಮಹಿಳೆ ದೂರು ನೀಡಿದ್ದು, ಅದರಂತೆ ಶ್ರೀರಾಮ ನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular