ಕಾನೂನು ಎಲ್ಲರಿಗೂ ಒಂದೇ, ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು ಅನ್ನೋದು ಸರಿ. ಆದರೆ ಕಾನೂನು ಪಾಲನೆ ಮಾಡುವ ಭರದಲ್ಲಿ ಪೊಲೀಸರು ಮನುಷ್ಯತ್ವವನ್ನೇ ಮರೆತುಬಿಟ್ರಾ? ಎನ್ನುವ ಪ್ರಶ್ನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬರುತ್ತಿದೆ. ಬಿಹಾರದ ಪಾಟ್ನಾದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಅಂಗಲಾಚುತ್ತಿರುವ ವಿಡಿಯೋ ನೋಡಿದರೆ ಎಂಥವರ ಮನಸ್ಸು ಕೂಡ ಕರಗದೇ ಇರಲ್ಲ.

Video – ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಪಾಟ್ನಾದ ಮರೈನ್ ಡ್ರೈವ್‌ನಲ್ಲಿ ಹೈ ವೋಲ್ಟೇಜ್ ಡ್ರಾಮಾ ಘಟನೆ ನಡೆದಿರುವುದು ಬಿಹಾರದ ಪಾಟ್ನಾದಲ್ಲಿರುವ ಮರೈನ್ ಡ್ರೈವ್ (Marine Drive) ಪ್ರದೇಶದಲ್ಲಿ. ಸೋಮವಾರ ಸಂಜೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದಂಪತಿಯೊಂದು ಸ್ಕೂಟಿಯಲ್ಲಿ ‘ರಾಂಗ್ ರೂಟ್’ನಲ್ಲಿ (Wrong Route) ಬಂದಿದ್ದಾರೆ. ಅವರನ್ನು ತಡೆದ ಪೊಲೀಸರು ವಾಹನ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಆ ಸ್ಕೂಟಿಯ ನಂಬರ್ ಪರಿಶೀಲಿಸಿದಾಗ, ಆ ವಾಹನದ ಮೇಲೆ ಈಗಾಗಲೇ ಬರೋಬ್ಬರಿ 12,000 ರೂಪಾಯಿಗಳಷ್ಟು ಟ್ರಾಫಿಕ್ ದಂಡ (Challan) ಬಾಕಿ ಇರುವುದು ಬೆಳಕಿಗೆ ಬಂದಿದೆ. ಹಳೆಯ ದಂಡ ಪಾವತಿಸದ ಕಾರಣ ಮತ್ತು ರಾಂಗ್ ರೂಟ್‌ನಲ್ಲಿ ಬಂದಿದ್ದರಿಂದ ಪೊಲೀಸರು ಸ್ಕೂಟಿಯನ್ನು ಸೀಜ್ (Seize) ಮಾಡಲು ಮುಂದಾಗಿದ್ದಾರೆ. ಇಲ್ಲಿಂದಲೇ ಅಸಲಿ ಡ್ರಾಮಾ ಶುರುವಾಗಿದೆ.
Video – “ನಾನು ಗರ್ಭಿಣಿ ಸಾರ್.. ಪ್ಲೀಸ್ ಬಿಟ್ಬಿಡಿ..”
ಪೊಲೀಸರು ವಾಹನ ಜಪ್ತಿ ಮಾಡಲು ಹೋದಾಗ, ಸ್ಕೂಟಿಯಲ್ಲಿದ್ದ ಮಹಿಳೆ ಅಕ್ಷರಶಃ ಪೊಲೀಸರ ಬಳಿ ಗೋಗರೆದಿದ್ದಾರೆ. “ಸರ್, ನಾನು ಗರ್ಭಿಣಿ (Pregnant), ದಯವಿಟ್ಟು ಹೀಗೆ ಮಾಡಬೇಡಿ, ನಮ್ಮನ್ನು ಹೋಗಲು ಬಿಡಿ ಪ್ಲೀಸ್” ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಆದರೆ, ಕರ್ತವ್ಯದ ಹೆಸರಿನಲ್ಲಿ ಕಠಿಣವಾಗಿದ್ದ ಪೊಲೀಸರು ಆಕೆಯ ಮಾತಿಗೆ ಕ್ಯಾರೇ ಎಂದಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಕೇಳದ ಪೊಲೀಸರು, ಸ್ಕೂಟಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಆ ಮಹಿಳೆ ಸ್ಕೂಟಿಗೆ ಅಡ್ಡವಾಗಿ ನಿಂತು ತಡೆಯಲು ಪ್ರಯತ್ನಿಸಿದ್ದಾರೆ. Read this also : ಟ್ರಾಫಿಕ್ ಜಾಮ್‌ನಲ್ಲಿ 5 ನಿಮಿಷ ಕಾಯಲು ಆಗದೆ ಇವನೇನು ಮಾಡಿದ ನೋಡಿ! ವಿಡಿಯೋ ವೈರಲ್…!
Video – ಗರ್ಭಿಣಿ ಎಂದು ನೋಡದೆ ದರ್ಪ ತೋರಿದ್ರಾ?
ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆ ಅಡ್ಡವಿದ್ದರೂ ಲೆಕ್ಕಿಸದೆ ಸ್ಕೂಟಿಯನ್ನು ಮುಂದಕ್ಕೆ ತಳ್ಳಿಕೊಂಡು ಹೋಗಿದ್ದಾರೆ. ಈ ನೂಕುನುಗ್ಗಲಿನಲ್ಲಿ ವಾಹನ ತಾಗಿ ತಮಗೆ ಗಾಯವಾಯಿತು ಎಂದು ಆ ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಒಬ್ಬ ಗರ್ಭಿಣಿ ಮಹಿಳೆ ಅಷ್ಟು ಕೇಳಿಕೊಂಡರೂ, ಕನಿಷ್ಠ ಮಾನವೀಯತೆ ತೋರಿಸದ ಪೊಲೀಸರ ವರ್ತನೆಗೆ ಸ್ಥಳಿಯರು ಸಾಕ್ಷಿಯಾಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ನೆಟ್ಟಿಗರ ಆಕ್ರೋಶ
ಇನ್ನೂ ಅಲ್ಲಿದ್ದವರು ಈ ಘಟನೆಯನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಪೊಲೀಸರ ವಿರುದ್ಧ ಕಿಡಿಕಾರುತ್ತಿದ್ದಾರೆ. “ತಪ್ಪು ಮಾಡಿದ್ದು ಹೌದು, ದಂಡ ಹಾಕಲಿ. ಆದರೆ ಗರ್ಭಿಣಿ ಸ್ತ್ರೀ ಎಂಬ ಕನಿಷ್ಠ ಪರಿಜ್ಞಾನವಿಲ್ಲದೆ ಹೀಗೆ ನೂಕುವುದು ಎಷ್ಟು ಸರಿ?” ಎಂದು ಜನ ಪ್ರಶ್ನಿಸುತ್ತಿದ್ದಾರೆ.
