ವಿಧಿಯ ಆಟವೇ ಬಲು ವಿಚಿತ್ರ ಅಲ್ವಾ? ಬದುಕಿನ ಹೊಸ ಅಧ್ಯಾಯ ಶುರು ಮಾಡಬೇಕಿದ್ದ ಜೋಡಿಯೊಂದು ಇನ್ನೇನು ಹಸೆಮಣೆ ಏರಬೇಕು ಅನ್ನುವಷ್ಟರಲ್ಲೇ ಮಸಣ ಸೇರಿದ ದಾರುಣ ಘಟನೆಯಿದು. ನೂರಾರು ಕನಸುಗಳನ್ನು ಹೊತ್ತು, ಪ್ರಿ-ವೆಡ್ಡಿಂಗ್ ಫೋಟೋಶೂಟ್ (Pre-wedding Photoshoot) ಮುಗಿಸಿಕೊಂಡು ಖುಷಿ ಖುಷಿಯಾಗಿ ಬರುತ್ತಿದ್ದ ಭಾವಿ ದಂಪತಿಗಳಿಬ್ಬರು ರಸ್ತೆ ಅಪಘಾತದಲ್ಲಿ ಪ್ರಾಣಬಿಟ್ಟಿದ್ದಾರೆ. ಈ ಸುದ್ದಿ ಕೇಳಿ ಇಡೀ ಕೊಪ್ಪಳ ಜಿಲ್ಲೆಯೇ ಮಮ್ಮಲ ಮರುಗಿದೆ.

Pre-Wedding – ಸಪ್ತಪದಿ ತುಳಿಯುವ ಮುನ್ನವೇ ಸಾವಿನ ಮನೆಗೆ..
ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸುಖ ಸಂಸಾರ ನಡೆಸಬೇಕಿದ್ದ ಜೋಡಿ, ರಸ್ತೆ ಅಪಘಾತದಲ್ಲಿ (Road Accident) ಕೊನೆಯುಸಿರೆಳೆದಿದೆ. ಮೃತಪಟ್ಟವರನ್ನು ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳ (26) ಮತ್ತು ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ (19) ಎಂದು ಗುರುತಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಈ ಜೋಡಿಯ ಮದುವೆ ಇದೇ ಡಿಸೆಂಬರ್ 20 ರಂದು ನಿಶ್ಚಯವಾಗಿತ್ತು. ಮದುವೆಗೂ ಮುನ್ನ ತಮ್ಮ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಪ್ರಿ-ವೆಡ್ಡಿಂಗ್ ಶೂಟ್ ಮಾಡಿಸಿಕೊಂಡು ಇವರಿಬ್ಬರು ಬೈಕ್‌ನಲ್ಲಿ ಮರಳುತ್ತಿದ್ದರು. ಈ ವೇಳೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ಎದುರಿನಿಂದ ಬರುತ್ತಿದ್ದ ಲಾರಿಗೆ (Pre-wedding Photoshoot) ಇವರ ಬೈಕ್ ಡಿಕ್ಕಿ ಹೊಡೆದಿದೆ.
ರಸ್ತೆಯಲ್ಲಿ ಪಂಚರ್ ಆಗಿ ನಿಂತಿದ್ದ ಲಾರಿಯೊಂದನ್ನು ಓವರ್ಟೇಕ್ ಮಾಡಲು ಹೋದಾಗ, ಎದುರಿನಿಂದ ಬಂದ ಮತ್ತೊಂದು ಲಾರಿಗೆ ಬೈಕ್ ಗುದ್ದಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಯುವತಿ ಕವಿತಾ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಕರಿಯಪ್ಪ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಪ್ರಾಣಬಿಟ್ಟಿದ್ದಾರೆ.
ಅನಾಥನ ಬಾಳಲ್ಲಿ ಅಗ್ನಿ ಬಿದ್ದಂತಾಯ್ತು!
ಈ ಘಟನೆಯ ಮತ್ತೊಂದು ಕರುಣಾಜನಕ ಸಂಗತಿ ಏನೆಂದರೆ, ಮೃತ ಕರಿಯಪ್ಪ ಚಿಕ್ಕವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು. ಸಂಬಂಧಿಕರೇ ಅವರನ್ನು ಪ್ರೀತಿಯಿಂದ ಸಾಕಿ ಬೆಳೆಸಿದ್ದರು. ಕಷ್ಟಪಟ್ಟು ಬೆಳೆದ ಹುಡುಗನಿಗೆ ಈಗಲಾದರೂ ಒಂದು ನೆಲೆ ಸಿಗಲಿ ಎಂದು ಸಂಬಂಧಿಕರು (Pre-wedding Photoshoot) ಮದುವೆ ನಿಶ್ಚಯ ಮಾಡಿದ್ದರು. Read this also : ಹೆತ್ತ ಕರುಳೇ ಬೀದಿಗೆ ಎಸೆದರೂ, ‘ಆ’ ಪ್ರಾಣಿಗಳು ಬಿಡಲಿಲ್ಲ! ಇಡೀ ರಾತ್ರಿ ಮಗುವನ್ನು ಕಾವಲು ಕಾಯ್ದ ಶ್ವಾನಗಳು!
ಸ್ವಗ್ರಾಮ ಹನುಮನಹಟ್ಟಿಯಲ್ಲಿ ಇದೇ ಡಿಸೆಂಬರ್ 20 ರಂದು ನಡೆಯಲಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಕರಿಯಪ್ಪ ಮತ್ತು ಕವಿತಾ ಹಸೆಮಣೆ ಏರಬೇಕಿತ್ತು. ಕರಿಯಪ್ಪನ ಜೊತೆಗೆ ಅವರ ಅಣ್ಣ ರಮೇಶ್ ಅವರ ಮದುವೆ ಕೂಡ ನಿಶ್ಚಯವಾಗಿತ್ತು. ಒಂದೇ ಮಂಟಪದಲ್ಲಿ ಅಣ್ಣ-ತಮ್ಮಂದಿರ ಮದುವೆ ಸಂಭ್ರಮ ನೋಡಲು ಕಾತುರರಾಗಿದ್ದ ಕುಟುಂಬಸ್ಥರಿಗೆ ಈಗ ಬರಸಿಡಿಲು ಬಡಿದಂತಾಗಿದೆ.

ಮದುವೆ ಮನೆ ಈಗ ಸ್ಮಶಾನ ಮೌನ
ಕಳೆದ ನಾಲ್ಕೈದು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲಾಗಿತ್ತು. ಇನ್ನೇನು ಮದುವೆಗೆ ಕೇವಲ 12 ದಿನಗಳು ಬಾಕಿ ಇದ್ದವು. ಮದುವೆ ತಯಾರಿ ಜೋರಾಗಿಯೇ ನಡೆದಿತ್ತು. ಆದರೆ, ಆ ಒಂದು ಕ್ಷಣದ ಅಜಾಗರೂಕತೆ ಅಥವಾ ವಿಧಿಯಾಟ, ಎರಡು ಕುಟುಂಬಗಳ ಕನಸನ್ನು ನುಚ್ಚುನೂರು ಮಾಡಿದೆ. (Pre-wedding Photoshoot) ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.
