Potato Crop – ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯಲಾದ ಆಲೂಗಡ್ಡೆ ಬೆಳೆಗೆ ಸೂಕ್ತ ಬೆಲೆ ಹಾಗೂ ಖರೀದಿಸುವವರಿಲ್ಲದೆ ತೋಟಗಳಲ್ಲಿ ಬಿದ್ದಿರುವ ರಾಶಿ ರಾಶಿ ಆಲೂಗಡ್ಡೆ ಫಸಲು ಬಿಸಿಲನಿನಿಂದಾಗಿ ಕೊಳೆಯುವಂತಾಗಿದೆ. ಇದರಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಹಾಕಿದ ಬಂಡವಾಳವೂ ವಾಪಸ್ ಬಾರದೆ ರೈತರು ಕಂಗಾಲಾಗಿದ್ದಾರೆ.
ಗುಡಿಬಂಡೆ ತಾಲ್ಲೂಕಿನಲ್ಲಿ ಸುಮಾರು 550-600 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗಿದೆ. ಉತ್ತಮ ಬೆಳೆ ಬಂದಿದ್ದರೂ, ಅದಕ್ಕೆ ಸೂಕ್ತ ಬೆಲೆ ಮಾತ್ರ ಸಿಗುತ್ತಿಲ್ಲ. ನವೆಂಬರ್ ಒಂದು ಮೂಟೆ ಬಿತ್ತನೆ ಆಲೂಗಡ್ಡೆಗೆ ₹2500-3000 ಕೊಟ್ಟು ಖರೀದಿಸಿ ಬಿತ್ತನೆ ಮಾಡಿದ್ದ ರೈತರು, ಇದೀಗ ಒಂದು ಮೂಟೆ ಆಲೂಗಡ್ಡೆಯನ್ನು ಕೇವಲ ₹400 ರಿಂದ ₹500ಕ್ಕೆ ಮಾರುವ ಅನಿವಾರ್ಯತೆಗೆ ಸಿಲುಕಿದ್ದಾರೆ.

Potato Crop – ಉತ್ತಮ ಫಸಲು, ಬೆಲೆ ಮಾತ್ರ ಇಲ್ಲ
ಈ ಬಾರಿ ಈಭಾಗದಲ್ಲಿ ದೊಡ್ಡಮಟ್ಟದ ಹೊಡೆತಕ್ಕೆ ಆಲೂಗಡ್ಡೆ ಬೆಳೆ ರೈತರು ಸಿಲುಕಿದ್ದಾರೆ. ಸಾವಿರಾರು ಎಕರೆಯಲ್ಲಿ ಆಲೂಗಡ್ಡೆ ಬೆಳೆ ಬೆಳೆದಿದ್ದಾರೆ. ಒಂದು ದಿನ ಗಂಡಸಿನ ಕೂಲಿ 600, ಗೆಂಗಸರಿಗೆ 400 ರೂ ಕೊಡಬೇಕಾದ ಪರಿಸ್ಥತಿ ಇದೆ. ಒಂದು ಎಕರೆಗೆ ಆಲೂಗಡ್ಡೆ ಬೆಳೆ ಬೆಳೆಯಲು 5 ಲೋಡ್ ಕೊಟ್ಟಿಗೆ ಗೊಬ್ಬರ ಹಾಕಬೇಕು, ಒಂದು ಲೋಡ್ ಕೊಟ್ಟಿಗೆ ಕೊಬ್ಬರ ಬೆಲೆ 6-7 ಸಾವಿರ ರೂಪಾಯಿ, 6 ಲೋಡ್ ಗೆ 35 ಸಾವಿರ ಗೊಬ್ಬರಕ್ಕೆ ಖರ್ಚಾಗುತ್ತದೆ. ಇದರ ಜೊತೆಗೆ ಉಳುಮೆ, ಔಷಧಿ ಸೇರಿದಂತೆ ಇತರೆ ಖರ್ಚು ಸೇರಿ ಒಟ್ಟಾರೆ ಎಕರೆಗೆ ಸುಮಾರು 1.30 ಲಕ್ಷ ಬಂಡವಾಳ ಬೇಕಾಗುತ್ತದೆ. 5 ಎಕರೆ ಭೂಮಿಯ ಪೈಕಿ ಮೂರು ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದ್ದೇನೆ. ಇದುವರೆಗೂ ಸುಮಾರು ₹4 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದೇನೆ. ಈಗ ಆಲೂಗಡ್ಡೆ ಅಗೆಯುವುದಕ್ಕೆ ಎಕರೆಗೆ ₹25,000 ಕೂಲಿ ಕೊಡಬೇಕು. ವ್ಯಾಪಾರಸ್ಥರಿಗೆ ಮಾರಾಟ ಮಾಡಲು ನಾವೇ ಚೀಲ ತಂದು, ಗಡ್ಡೆ ತುಂಬಿಸಿಕೊಟ್ಟರೆ ₹400 ರೂಪಾಯಿಗೆ ಖರೀದಿ ಮಾಡಿಕೊಂಡು ಹೋಗುತ್ತಾರೆ. ಒಂದು ಚೀಲಕ್ಕೆ ಹೆಚ್ಚುವರಿ ₹100 ಖರ್ಚಾಗುತ್ತದೆ ಎಂದು ನೋವು ತೋಡಿಕೊಂಡಿದ್ದಾರೆ.
Read this also : ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಬೆಸ್ಕಾಂ ಮುಂದೆ ರೈತರ ಪ್ರತಿಭಟನೆ….!
Potato Crop – ಸರ್ಕಾರಗಳು ಕ್ರಮ ವಹಿಸಬೇಕಿದೆ
ಭಿತ್ತನೆ ಬೀಜಗಳ ಬಗ್ಗೆ ಸರ್ಕಾರಗಳು ಗಮನ ಹರಿಸಬೇಕು, ನಿಯಂತ್ರಣಕ್ಕೆ ತೆಗೆಕೊಳ್ಳಬೇಕು, ರೈತರಿಗೆ ಸಬ್ಸಿಡಿ ಧರದಲ್ಲಿ ಭಿತ್ತನೆ ಬೀಜಗಳನ್ನು ಪೂರೈಕೆ ಮಾಡಬೇಕು, ಸಂಬಂಧಿಸಿದ ರಾಸಾಯಿನಿಕ ಗೊಬ್ಬರ, ಪರಿಕರಗಳನ್ನು ರೈತರಿಗೆ ಒದಗಿಸಬೇಕು. ಆದರೆ ಈಗಿನ ಸರ್ಕಾರಗಳು ಭಿತ್ತನೆ ಬೀಜಗಳ ಮೇಲೆ ನಿಯಂತ್ರಣ ಇಲ್ಲವಾಗಿದೆ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳ ಕೈಯಲ್ಲಿ ಏನು ಇರುವುದಿಲ್ಲ. ಇದರಲ್ಲಿ ದಳ್ಳಾಲಿಗಳು ಲೂಟಿ ಹೊಡೆಯುತ್ತಾರೆ. ದಳ್ಳಾಲಿಗಳು ಕೋಟ್ಯಾಧಿಪತಿಗಳಾಗುತ್ತಾರೆ. ಆದರೆ ರೈತ ಮಾತ್ರ ಬಡವನಾಗಿಯೇ ಇರುತ್ತಾನೆ. ತರಕಾರಿ ಬೆಳೆಯುವ ರೈತ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ರೈತರು ಹಂತ ಹಂತವಾಗಿ ಭೂಮಿಯಿಂದ ದೂರ ಸರಿಯುತ್ತಿದ್ದಾನೆ. ಅನ್ನದಾತ ಕೃಷಿಯನ್ನು ತೊರೆಯುತ್ತಿದ್ದಾನೆ. ಇದು ದೇಶಕ್ಕೆ ದೊಡ್ಡಗಂಡಾಂತರವಾಗುತ್ತದೆ ಎನ್ನಬಹುದಾಗಿದೆ.

Potato Crop – ಸರ್ಕಾರಗಳು ರೈತರ ಬೆಂಬಲಕ್ಕೆ ಬರಲಿ
ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರೈತರಿಗೆ ಯಾವ ರೀತಿಯಲ್ಲಿ ಸಹಾಯಮಾಡಬೇಕೆಂದು ಚಿಂತನೆ ಮಾಡಿ, ರೈತರಿಗೆ ಬೆನ್ನೆಲುಬಾಗಿ, ಬೆಂಬಲವಾಗಿ ನಿಲ್ಲಬೇಕು, ನಿಲ್ಲದಿದ್ದರೆ ರೈತರು ಕೃಷಿಕರಾಗಿ ನಿಲ್ಲುವುದಿಲ್ಲ, ರೈತರು ಉಳಿಸುವುದಿಲ್ಲ, ಕೊನೆಯ ದಾರಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈಗಾಗಲೇ ಅನೇಕ ರೈತರು ಆದಾರಿಯನ್ನು ಹಿಡಿದಿದ್ದಾರೆ. ಇದು ಮುಂದಿನ ಜನಾಂಗಕ್ಕೆ ಶಾಪವಾಗಿ ಪರಿಣಮಿಸುತ್ತದೆ. ಇದನ್ನು ತಡೆಗಟ್ಟಬೇಕು ಹಾಗೇ ಆಲೂಗಡ್ಡೆ ಬೆಲೆಗೆ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ರೈತರು ತಿಳಿಸಿದ್ದಾರೆ.
ಕೋಟ್-1
ಒಂದು ಮೂಟೆ ಆಲೂಗಡ್ಡೆ ₹800-900ಗೆ ಮಾರಾಟವಾದರೆ ಮಾತ್ರ, ನಮ್ಮ ಕಷ್ಟಕ್ಕೆ ಪ್ರತಿಫಲ ಸಿಗುತ್ತದೆ. ಇಲ್ಲವಾದರೆ ಹಾಕಿದ ಬಂಡವಾಳವೂ ಬರದೆ ನಾವು ಸಾಲಗಾರರಾಗಬೇಕಾಗುತ್ತದೆ. ಜುಲೈ ತಿಂಗಳವರೆಗೂ ಕಾಯಬೇಕಾಗುತ್ತದೆ
ರೈತ ಹಳೇ ಗುಡಿಬಂಡೆ ಎಚ್.ಪಿ. ಲಕ್ಷ್ಮಿನಾರಾಯಣ