Tuesday, July 1, 2025
HomeNationalCAA ಕಾಯ್ದೆ ಹಿಂಪಡೆಯುವಂತಹ ಇನ್ನೂ ದೇಶದಲ್ಲಿ ಹುಟ್ಟಿಲ್ಲ ಎಂದ ಪ್ರಧಾನಿ ಮೋದಿ….!

CAA ಕಾಯ್ದೆ ಹಿಂಪಡೆಯುವಂತಹ ಇನ್ನೂ ದೇಶದಲ್ಲಿ ಹುಟ್ಟಿಲ್ಲ ಎಂದ ಪ್ರಧಾನಿ ಮೋದಿ….!

ಲೋಕಸಭಾ ಚುನಾವಣೆಗೂ ಮುಂಚೆಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ (CAA) ದೇಶದಾದ್ಯಂತ ಭಾರಿ ಸದ್ದು ಮಾಡಿತ್ತು. ಸದ್ಯ ಲೋಕಸಭಾ ಚುನಾವಣೆ ಹಂತ ಹಂತವಾಗಿ ನಡೆಯುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೇ CAA Act(ಪೌರತ್ವ ತಿದ್ದುಪಡಿ ಕಾಯ್ದೆ) ರದ್ದು ಮಾಡುವುದಾಗಿ ಕಾಂಗ್ರೇಸ್ ಹಾಗೂ ಸಮಾಜವಾದಿ ಪಕ್ಷಗಳು ಹೇಳುತ್ತಿವೆ. ಆದರೆ ಅದನ್ನು ವಾಪಸ್ಸು ಪಡೆಯುವಂತಹ ಮಗ ಈ ದೇಶದಲ್ಲಿ ಹುಟ್ಟಿದ್ದಾನೇಯೇ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

Narendra modi comments about CAA 1

ಉತ್ತರ ಪ್ರದೇಶ ಲಾಲ್ ಗಂಜ್ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶವನ್ನು ನಾಶ ಮಾಡಲು ಆ ಎರಡೂ ಪಕ್ಷಗಳು ತಮ್ಮ ಶಕ್ತೀ ಮೀರಿ ಪ್ರಯತ್ನಿಸುತ್ತಿವೆ. ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಮುಂದೊಂದು ದಿನ ಸಿಎಎ ತೆಗೆದುಹಾಕುತ್ತೇವೆ ಎಂದು ಇಂಡಿ ಕೂಟದ ನಾಯಕರು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಅಂಥಹ ವ್ಯಕ್ತಿ ಹುಟ್ಟಿದ್ದಾನಾ ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ವಿದೇಶದಿಂದ ಬಂದಂತಹವರಿಗೆ ಮೊದಲ ಹಂತದಲ್ಲಿ ಪೌರತ್ವ ಪ್ರಮಾಣ ಪತ್ರ ನೀಡಿದ್ದೇವೆ. ಅದನ್ನು ತಡೆಯಲು ನಿಮ್ಮಲ್ಲಿ ಎಷ್ಟೆಲ್ಲಾ ಸಾಮರ್ಥ್ಯವಿದೆಯೋ ಅದನ್ನೆಲ್ಲಾ ಬಳಸಲಿ ಎಂದು ಮೋದಿ ಸವಾಲಾಕಿದ್ದಾರೆ.

Narendra modi comments about CAA 2

ಸದ್ಯ ಪೌರತ್ವ ಪಡೆದವರೆಲ್ಲಾ ಹಿಂದೂ, ಜೈನ, ಸಿಖ್ ಹಾಗೂ ಬೌದ್ದರು. ದೇಶ ವಿಭಜನೆಯ ಸಮಯದಲ್ಲಿ ಅವರೆಲ್ಲಾ ಧರ್ಮದ ಆಧಾರದಲ್ಲಿ ಸಂತ್ರಸ್ತರು. ಸುಮಾರು ಸಮಯದಿಂದ ನಿರಾಶ್ರಿತರಾಗಿ ಇಲ್ಲೇ ವಾಸ ಮಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ಮೆಟ್ಟಿಲುಗಳನ್ನು ಹತ್ತಲು ಮಾತ್ರ ಮಹಾತ್ಮ ಗಾಂಧಿಯವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಆದರೆ ಇದೀಗ ಅವರ ಮಾತನ್ನೆ ಕಾಂಗ್ರೆಸ್ ಮರೆತಿದೆ. ನೆರೆಯ ದೇಶಗಳಲ್ಲಿರುವ ಅಲ್ಪಸಂಖ್ಯಾತರು ತಾವು ಬಯಸಿದಾಗ ಭಾರತಕ್ಕೆ ಬರಬಹುದು ಎಂದು ಗಾಂಧಿಜೀಯವರು ಹೇಳಿದ್ದರು. ದೇಶದಲ್ಲಿ ಸಹಸ್ರಾರು ಕುಟುಂಬಗಳು ಸಂಸ್ಕೃತಿ ಹಾಗೂ ಧರ್ಮ ಉಳಿಸಿಕೊಳ್ಳಲು ಭಾರತದಲ್ಲಿ ಆಶ್ರಯ ಪಡೆದುಕೊಂಡಿದೆ. ಆದರೆ ಅವರ ಬಗ್ಗೆ ಕಾಂಗ್ರೇಸ್ ಎಂದಿಗೂ ಯೋಚನೆ ಮಾಡಿಲ್ಲ ಎಂದು ಟೀಕಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular