Saturday, January 31, 2026
HomeNationalPizza Delivery Boy : ಶಾಲೆಗೆ 'ರೋಲ್ ಮಾಡೆಲ್' ಆಗಿದ್ದವನು ಇಂದು ಪಿಜ್ಜಾ ಡೆಲಿವರಿ ಬಾಯ್,...

Pizza Delivery Boy : ಶಾಲೆಗೆ ‘ರೋಲ್ ಮಾಡೆಲ್’ ಆಗಿದ್ದವನು ಇಂದು ಪಿಜ್ಜಾ ಡೆಲಿವರಿ ಬಾಯ್, ವಿಡಿಯೊ ಮಾಡಿ ವ್ಯಂಗ್ಯವಾಡಿದ ಯುವತಿ, ನೆಟ್ಟಿಗರ ತರಾಟೆ..!

ಬದುಕು ಎಲ್ಲರಿಗೂ ಒಂದೇ ತಟ್ಟೆಯಲ್ಲಿ ಸುಖವನ್ನು ಬಡಿಸುವುದಿಲ್ಲ. ಶಾಲೆಯಲ್ಲಿ ಫಸ್ಟ್ ರ್ಯಾಂಕ್ ಬಂದವನು ಇಂದು ಬೀದಿಯಲ್ಲಿ ಕೆಲಸ ಮಾಡುತ್ತಿರಬಹುದು, ಸಾಧಾರಣ ವಿದ್ಯಾರ್ಥಿಯಾಗಿದ್ದವನು ಉನ್ನತ ಸ್ಥಾನದಲ್ಲಿರಬಹುದು. ಆದರೆ, ಯಶಸ್ಸಿನ ಏಣಿಯಲ್ಲಿ ಮೇಲೆ ಕುಳಿತ ಮಾತ್ರಕ್ಕೆ ಕೆಳಗಿರುವವರನ್ನು ಕೀಳಾಗಿ ನೋಡುವುದು ಎಷ್ಟು ಸರಿ? ಶಾಲೆಯಲ್ಲಿ ಎಲ್ಲರಿಗೂ ಸ್ಫೂರ್ತಿಯಾಗಿದ್ದ ಹಳೆಯ ಸ್ನೇಹಿತ ಪಿಜ್ಜಾ ಡೆಲಿವರಿ (Pizza Delivery Boy) ಮಾಡುತ್ತಿರುವುದನ್ನು ಕಂಡು ಮೆಚ್ಚುವ ಬದಲು, ಆತನ ಪರಿಸ್ಥಿತಿಯನ್ನು ವಿಡಿಯೊ ಮಾಡಿ ಅಪಹಾಸ್ಯ ಮಾಡಿದ ಯುವತಿಯ ವರ್ತನೆ ಈಗ ಇಂಟರ್ನೆಟ್‌ನಲ್ಲಿ ಭಾರಿ ಕಿಚ್ಚು ಹಚ್ಚಿದೆ.

pizza delivery boy mocked by woman in viral video, dignity of labour debate erupts online

Pizza Delivery Boy – ಏನಿದು ಘಟನೆ? ವೈರಲ್ ವಿಡಿಯೊದಲ್ಲೇನಿದೆ?

ವೈರಲ್ ಆಗಿರುವ ವಿಡಿಯೊದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತಿರುವ ತನ್ನ ಹಳೆಯ ಶಾಲಾ ಸ್ನೇಹಿತನನ್ನು ಭೇಟಿಯಾಗುತ್ತಾಳೆ. ಆತ ಕೆಲಸದ ಸಮವಸ್ತ್ರದಲ್ಲಿ (Uniform) ಇರುವುದನ್ನು ಕಂಡ ಕೂಡಲೇ ಆಕೆ ಮೊಬೈಲ್ ಕ್ಯಾಮರಾ ಆನ್ ಮಾಡಿ ಆತನ ಪರಿಸ್ಥಿತಿಯನ್ನು ಅಪಹಾಸ್ಯ ಮಾಡಲು ಶುರು ಮಾಡುತ್ತಾಳೆ.

“ನೋಡಿ, ಇವನು ನನ್ನ ಹಳೆಯ ಸ್ನೇಹಿತ. ಶಾಲೆಯಲ್ಲಿದ್ದಾಗ ನಮಗೆಲ್ಲರಿಗೂ ಸ್ಫೂರ್ತಿದಾಯಕ ಮಾತುಗಳನ್ನು ಹೇಳುತ್ತಿದ್ದ. ಈಗ ಈತನಿಗೆ 30 ವರ್ಷ, ಇಂದು ಪಿಜ್ಜಾ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದಾನೆ” ಎಂದು ಆಕೆ ವಿಡಿಯೊದಲ್ಲಿ ವ್ಯಂಗ್ಯವಾಗಿ ಹೇಳಿದ್ದಾಳೆ. ಅಷ್ಟಕ್ಕೇ ನಿಲ್ಲದ ಆಕೆ, “ನಿನಗೆ ಈ ಕೆಲಸ ಮಾಡುವುದು ಹೇಗನಿಸುತ್ತದೆ? ಶಾಲೆ ನೆನಪಿದೆಯೇ?” ಎಂದು ಕೇಳುತ್ತಾಳೆ. ಅದಕ್ಕೆ ಆ ಯುವಕ ನಗುತ್ತಲೇ “ಹೌದು, ನೆನಪಿದೆ” ಎಂದು ಸೌಜನ್ಯದಿಂದ ಉತ್ತರಿಸುತ್ತಾನೆ. ಆದರೆ ಆಕೆ ಮಾತ್ರ, “ಈ ವಿಡಿಯೊವನ್ನು ನಮ್ಮ ಹಳೆಯ ಫ್ರೆಂಡ್ಸ್ ಗ್ರೂಪ್‌ಗೆ ಕಳುಹಿಸುತ್ತೇನೆ” ಎಂದು ಜೋರಾಗಿ ನಗುತ್ತಾ ಆತನ ಮುಜುಗರಕ್ಕೆ ಕಾರಣವಾಗುತ್ತಾಳೆ.

ನೆಟ್ಟಿಗರ ಆಕ್ರೋಶ:

ಈ ವಿಡಿಯೊ ಎಕ್ಸ್ (ಟ್ವಿಟ್ಟರ್) ನಲ್ಲಿ ವೈರಲ್ ಆಗುತ್ತಿದ್ದಂತೆಯೇ (Pizza Delivery Boy)  ಯುವತಿಯ ಅಹಂಕಾರದ ವಿರುದ್ಧ ಜನರು ಕಿಡಿಕಾರಿದ್ದಾರೆ.

ವೈರಲ್ ವಿಡಿಯೊ ಇಲ್ಲಿದೆ ನೋಡಿ: Click Here 
  • ಪ್ರಾಮಾಣಿಕತೆ ಮುಖ್ಯ: “ಪ್ರಾಮಾಣಿಕವಾಗಿ ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯನ್ನು ಗೇಲಿ ಮಾಡುವುದು ಅನ್ಯಾಯ. ಆತ ಕಳ್ಳತನ ಮಾಡುತ್ತಿಲ್ಲ, ಬೆವರು ಸುರಿಸಿ ದುಡಿಯುತ್ತಿದ್ದಾನೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. Read this also : ಹ್ಯಾಟ್ಸಾಫ್ ಬ್ರೋ.. ರೀಲ್ಸ್ ಮಾಡಿದರೆ ಇವರಂತೆ ಇರಬೇಕು! ಈ ಮೂವರು ಗೆಳೆಯರ ಕೆಲಸಕ್ಕೆ ಸೋಶಿಯಲ್ ಮೀಡಿಯಾ ಫಿದಾ
  • ಟೈಮ್‌ಲೈನ್ ಬೇರೆ ಇರುತ್ತದೆ: “ಜೀವನವು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಬ್ಬರ ಯಶಸ್ಸಿನ ಸಮಯ ಬೇರೆ ಬೇರೆ ಇರುತ್ತದೆ. ಕಷ್ಟಪಟ್ಟು ಕೆಲಸ ಮಾಡುವುದು ಎಂದಿಗೂ ನಾಚಿಕೆಗೇಡಿನ ಸಂಗತಿಯಲ್ಲ” ಎಂದು ಮತ್ತೊಬ್ಬರು (Pizza Delivery Boy)  ಯುವಕನ ಪರವಾಗಿ ಬ್ಯಾಟ್ ಬೀಸಿದ್ದಾರೆ.
  • ರಿಯಲ್ ಹೀರೋ: ನೆಟ್ಟಿಗರು ಆ ಯುವಕನ ತಾಳ್ಮೆಯನ್ನು ಮೆಚ್ಚಿಕೊಂಡಿದ್ದು, ಆತನನ್ನೇ “ರಿಯಲ್ ಹೀರೋ” ಎಂದು ಕರೆದಿದ್ದಾರೆ.

ಮಾನವೀಯತೆ ಮರೆಯಾಗುತ್ತಿದೆಯೇ?

ಸೋಶಿಯಲ್ ಮೀಡಿಯಾ ಯುಗದಲ್ಲಿ ವ್ಯೂವ್ಸ್ ಮತ್ತು ಲೈಕ್ಸ್‌ಗಾಗಿ (Pizza Delivery Boy)  ಇತರರ ಕಷ್ಟವನ್ನು ಅಥವಾ ಪರಿಸ್ಥಿತಿಯನ್ನು ಹಾಸ್ಯ ಮಾಡುವುದು ಒಂದು ಕೆಟ್ಟ ಟ್ರೆಂಡ್ ಆಗಿ ಬದಲಾಗುತ್ತಿದೆ. ಈ ಘಟನೆಯು ಶಾಲಾ ದಿನಗಳ ಸ್ನೇಹ ಮತ್ತು ಮನುಷ್ಯತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಕೆಲಸ ಯಾವುದಾದರೂ ಇರಲಿ, ಅದಕ್ಕೆ ಅದರದ್ದೇ ಆದ ಗೌರವ ಇರುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಯುವತಿಯ ವರ್ತನೆಗೆ ಇಡೀ ಇಂಟರ್ನೆಟ್ ಆಕ್ರೋಶ ವ್ಯಕ್ತಪಡಿಸುತ್ತಿದೆ.

pizza delivery boy mocked by woman in viral video, dignity of labour debate erupts online

ಇದು ಸ್ಕ್ರಿಪ್ಟೆಡ್ ವಿಡಿಯೋ?

ಪಿಜ್ಜಾ ಡೆಲಿವರಿ ಬಾಯ್ ಒಬ್ಬರನ್ನು ಅವಮಾನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಇದು ಕೇವಲ ಪ್ರಚಾರಕ್ಕಾಗಿ ಸೃಷ್ಟಿಸಲಾದ ಸ್ಕ್ರಿಪ್ಟೆಡ್ ನಾಟಕ ಎಂಬುದು ಈಗ ಬಯಲಾಗಿದೆ. ಜನವರಿ 29 ರಂದು ಹೊರಬಂದ ಈ ವಿಡಿಯೋದಲ್ಲಿ, ಮಹಿಳೆಯು ತನ್ನ ಶಾಲಾ ದಿನಗಳ ಸ್ನೇಹಿತನನ್ನು ಪಿಜ್ಜಾ ಹಂಚುವ ಕೆಲಸಕ್ಕಾಗಿ ಲೇವಡಿ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಸುಮಾರು 44 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿತ್ತು.

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here

ಆದರೆ ತನಿಖೆಯ ನಂತರ, ಇದು ಕೇವಲ ವೀಕ್ಷಣೆಗಳನ್ನು ಪಡೆಯಲು ನಡೆಸಿದ “ರೇಜ್-ಬೈಟ್” ತಂತ್ರ ಎಂದು ತಿಳಿದುಬಂದಿದೆ. ಆಘಾತಕಾರಿ ವಿಷಯವೆಂದರೆ, ಅನೇಕ ಪ್ರಮುಖ ಮಾಧ್ಯಮ ಸಂಸ್ಥೆಗಳು ಕೂಡ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿಯನ್ನು ಬಿತ್ತರಿಸಿದ್ದವು. ಈ ಘಟನೆಯು ಇಂಟರ್ನೆಟ್‌ನಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಮತ್ತು ಸಾರ್ವಜನಿಕರ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುವ ವಿಧಾನದ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular