Thursday, December 4, 2025
HomeStateCrime : "ನನ್ನಕ್ಕಿಂತ ಯಾರೂ ಅಂದವಾಗಿರಬಾರದು!" - ಸೌಂದರ್ಯದ ವ್ಯಾಮೋಹಕ್ಕೆ ಬಲಿಯಾದರು 4 ಮಕ್ಕಳು; ಸ್ವಂತ...

Crime : “ನನ್ನಕ್ಕಿಂತ ಯಾರೂ ಅಂದವಾಗಿರಬಾರದು!” – ಸೌಂದರ್ಯದ ವ್ಯಾಮೋಹಕ್ಕೆ ಬಲಿಯಾದರು 4 ಮಕ್ಕಳು; ಸ್ವಂತ ಮಗನನ್ನೇ ಕೊಂದ ಕ್ರೂರಿ ತಾಯಿ!

ತಾಯಿಗಿಂತ ಮಿಗಿಲಾದ ದೇವರಿಲ್ಲ ಎನ್ನುತ್ತಾರೆ. ಹೆತ್ತ ಕರುಳಿಗಾಗಿ ಪ್ರಾಣವನ್ನೇ ನೀಡುವ ತಾಯಂದಿರನ್ನು ನಾವು ನೋಡಿದ್ದೇವೆ. ಆದರೆ, ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಘಟನೆಯೊಂದು ತಾಯ್ತನದ ಪಾವಿತ್ರ್ಯವನ್ನೇ ಪ್ರಶ್ನಿಸುವಂತಿದೆ. ಕೇವಲ ಸೌಂದರ್ಯದ ಮೇಲಿನ ಅಸೂಯೆಯಿಂದ ಮಹಿಳೆಯೊಬ್ಬಳು ‘ಸೈಕೋ ಕಿಲ್ಲರ್’ ಆಗಿ ಬದಲಾಗಿ, ತನ್ನ ಸ್ವಂತ ಮಗ ಸೇರಿದಂತೆ ನಾಲ್ವರು ಅಮಾಯಕ ಮಕ್ಕಳನ್ನು ಬಲಿ ಪಡೆದಿದ್ದಾಳೆ. ಪೊಲೀಸರ ತನಿಖೆಯಲ್ಲಿ ಬಯಲಾದ ಈಕೆಯ ಕರಾಳ ಮುಖವಾಡದ ಅಸಲಿ ಕಹಾನಿ ಇಲ್ಲಿದೆ.

Panipat horror: A woman driven by beauty jealousy kills four children, even her own son. Discover how police uncovered the disturbing truth behind this tragic crime.

Crime – ಅಂದವಾದ ಹುಡುಗಿಯರಂದ್ರೆ ದ್ವೇಷ

ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ (SP) ಭೂಪೇಂದ್ರ ಸಿಂಗ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿತ ಮಹಿಳೆಗೆ ಸುಂದರವಾದ ಹುಡುಗಿಯರಂದರೆ ಅತೀವ ದ್ವೇಷವಂತೆ. “ನನಗಿಂತ ಯಾರೂ ಅಂದವಾಗಿ ಕಾಣಬಾರದು, ಯಾವುದೇ ಹುಡುಗಿ ನನಗಿಂತ ಸುಂದರವಾಗಿ ಬೆಳೆಯಬಾರದು” ಎಂಬ ವಿಕೃತ ಮನಸ್ಥಿತಿ ಈಕೆಯದ್ದು. ಇದೇ ಕಾರಣಕ್ಕೆ ಈಕೆ ತನ್ನ ಕುಟುಂಬ ಮತ್ತು ಸಂಬಂಧಿಕರ ಮನೆಯ ಅಂದವಾದ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿದ್ದಳು.

Crime – ಅನುಮಾನ ಬಾರದಿರಲು ಸ್ವಂತ ಮಗನನ್ನೇ ಕೊಂದಳು

ಈಕೆಯ ಕ್ರೌರ್ಯ ಎಷ್ಟರಮಟ್ಟಿಗೆ ಇತ್ತೆಂದರೆ, 2023ರಲ್ಲೇ ಈಕೆ ತನ್ನ ನಾದಿನಿಯ ಮಗಳು ಸೇರಿದಂತೆ ಇಬ್ಬರು ಬಾಲಕಿಯರನ್ನು ಹತ್ಯೆ ಮಾಡಿದ್ದಳು. ಆದರೆ, ತಾನು ಬಾಲಕಿಯರನ್ನು ಮಾತ್ರ ಕೊಲ್ಲುತ್ತಿದ್ದರೆ ಎಲ್ಲರಿಗೂ ತನ್ನ ಮೇಲೆ ಅನುಮಾನ ಬರುತ್ತದೆ ಎಂದು ಯೋಚಿಸಿ, ಜನರ ದಿಕ್ಕು ತಪ್ಪಿಸಲು ತನ್ನ ಸ್ವಂತ ಮಗನನ್ನೇ ಕೊಲೆ ಮಾಡಿದ್ದಾಳೆ! ತಾನು ಸೇಫ್ ಆಗಲು ಹೆತ್ತ ಮಗನನ್ನೇ ಬಲಿಗೊಟ್ಟ ಈಕೆಯ ಬುದ್ಧಿವಂತಿಕೆಗೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

Crime – ಸಿಕ್ಕಿಬಿದ್ದಿದ್ದು ಹೇಗೆ?

ಇತ್ತೀಚೆಗೆ 6 ವರ್ಷದ ಬಾಲಕಿಯೊಬ್ಬಳು ನೀರಿನ ಟ್ಯಾಂಕ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಬಂತು. ಸ್ಥಳಕ್ಕೆ ಹೋದ ಪೊಲೀಸರಿಗೆ ಅನುಮಾನ ಶುರುವಾಗಿದೆ. ಏಕೆಂದರೆ, 6 ವರ್ಷದ ಮಗು ತಾನಾಗಿಯೇ ಟ್ಯಾಂಕ್‌ಗೆ ಬೀಳಲು ಸಾಧ್ಯವಿರಲಿಲ್ಲ ಮತ್ತು ಮನೆಯ ಎರಡನೇ ಗೇಟ್ ಹೊರಗಿನಿಂದ ಲಾಕ್ ಆಗಿತ್ತು. ಅಂದರೆ, ಯಾರೋ ಮಗುವನ್ನು ಎತ್ತಿಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂಬುದು ಸ್ಪಷ್ಟವಾಯಿತು. ತೀವ್ರ ವಿಚಾರಣೆ ನಡೆಸಿದಾಗ ಈ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. Read this also : ಕರವಸ್ತ್ರ ಇಟ್ಟು ಸೀಟ್ ‘ರಿಸರ್ವ್’: ಪ್ರಶ್ನಿಸಿದವನಿಗೆ ಬಿತ್ತು ಗೂಸಾ! ಜುಟ್ಟು ಹಿಡಿದು ಎಳೆದಾಡಿದ ಮಹಿಳೆಯರು – ವೈರಲ್ ವಿಡಿಯೋ

Panipat horror: A woman driven by beauty jealousy kills four children, even her own son. Discover how police uncovered the disturbing truth behind this tragic crime.

Crime – ಅಶಿಕ್ಷಿತೆ, ಆದರೂ ಪಕ್ಕಾ ಪ್ಲಾನ್!

ಆರೋಪಿಯನ್ನು ಪಾಣಿಪತ್‌ನ ಬವಾಡ್ ಗ್ರಾಮದ ನವೀನ್ ಎಂಬುವರ ಪತ್ನಿ ಪೂನಂ ಎಂದು ಗುರುತಿಸಲಾಗಿದೆ. ಈಕೆಗೆ ಹೇಳಿಕೊಳ್ಳುವಷ್ಟು ವಿದ್ಯಭ್ಯಾಸವಿಲ್ಲ, ಆದರೂ ಕೊಲೆ ಮಾಡಿ ಸಾಕ್ಷ್ಯ ಮುಚ್ಚಿಹಾಕುವುದರಲ್ಲಿ ಈಕೆ ಬಹಳ ಚಾಲಾಕಿ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 2025ರಲ್ಲಿ ಸಿವಾ ಗ್ರಾಮದ ಬಾಲಕಿಯೊಬ್ಬಳನ್ನು ಕೂಡ ಈಕೆ ಇದೇ ರೀತಿ ಹತ್ಯೆ ಮಾಡಿದ್ದಳು. ಒಟ್ಟಾರೆಯಾಗಿ ನಾಲ್ಕು ಮಕ್ಕಳ ಸಾವಿಗೆ ಈಕೆ ಕಾರಣವಾಗಿದ್ದಾಳೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular