ಇಡೀ ವಿಶ್ವವನ್ನೇ ಸುಮಾರು ತಿಂಗಳುಗಳ ಕಾಲ ಅಲ್ಲಕಲ್ಲೋಲ ಮಾಡಿದಂತಹ ಮಹಮಾರಿ ಕರೋನಾ ವೈರಸ್ ಎಂದರೇ ಈಗಲೂ ಸಹ ಅನೇಕರು ಒಮ್ಮೆಲೆ ಶಾಕ್ ಆಗುತ್ತಾರೆ. ಈ ವ್ಯಾಧಿ ಬಡವರು ಶ್ರೀಮಂತರು ಎನ್ನದೇ ಎಲ್ಲರನ್ನೂ ನಡುಗಿಸಿತ್ತು. ಕೆಲವು ದಿನಗಳ ಹಿಂದೆಯಷ್ಟೆ ಬ್ರಿಟನ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದ ಹಾಗೂ ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ್ದಂತಹ ಕೋವಿಶೀಲ್ಡ್ ಲಸಿಕೆಯಲ್ಲಿ ಕೆಲವೊಂದು ಅಪರೂಪದ ಅಡ್ಡಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಡಿತ್ತು. ಇದೀಗ ಸ್ವದೇಶಿ ಕೋವಿಡ್ ಲಸಿಕೆ ಎನ್ನಲಾದ ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮಗಳನ್ನು ಕಾಣುತ್ತಿವೆ ಎಂಬ ಕಳವಳಕಾರಿ ಸಂಗತಿಯೊಂದು ಕೇಳಿಬರುತ್ತಿದೆ.
ಕೋವಿಡ್ ನಿಯಂತ್ರಣ ಮಾಡುವಲ್ಲಿ ಕೋವ್ಯಾಕ್ಸಿನ್ ತುಂಬಾನೆ ಕೆಲಸ ಮಾಡಿತ್ತು. ಈ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪನಿ ಉತ್ಪಾದನೆ ಮಾಡಿತ್ತು. ಈ ಲಸಿಕೆಯನ್ನು ಸ್ವೀಕರಿಸಿದ ಶೇ..30ರಷ್ಟು ಮಂದಿಯಲ್ಲಿ ಅಪರೂಪದ ಅಡ್ಡಪರಿಣಾಮಗಳು ಕಂಡುಬಂದಿವೆ ಎಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಹೊರಬಂದಿದೆ. ಈ ತಂಡ ಸುಮಾರು ಒಂದು ವರ್ಷದ ಅಧ್ಯಯನ ನಡೆಸಿದೆ ಎನ್ನಲಾಗಿದೆ. ಈ ಅಧ್ಯಯನಲ್ಲಿ 926 ಮಂದಿ ಭಾಗಿಯಾಗಿದ್ದರು. ಈ ಪೈಕಿ ಶೇ.50 ರಷ್ಟು ಮಂದಿ ತಮಗೆ ವಿವಿಧ ಬಗೆಯ ಸೋಂಕುಗಳನ್ನು ಕಾಣಿಸಿಕೊಂಡಿದ್ದಾಗಿ ಹೇಳಿದ್ದಾರೆ. ಅದರಲ್ಲೂ ಹೆಚ್ಚಾಗಿ ಉಸಿರಾಟ ನಾಳದ ಸಮಸ್ಯೆಯನ್ನು ಎದುರಿಸಿದ್ದಾರಂತೆ.
ಗಂಭೀರವಾದ ಪಾರ್ಶ್ವವಾಯು ಹಾಘೂ ಗುಯಿಲೈನ್ ಬ್ಯಾರೆ ಸಿಂಡ್ರೋಮ್ ಶೇ.1 ರಷ್ಟು ಮಂದಿಯಲ್ಲಿ ಕಂಡುಬಂದಿದೆಯಂತೆ. ಈ ಅಧ್ಯಯನದ ವರದಿಯನ್ನು ಸ್ಟ್ರಿಂಗರ್ ನೇಷರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟ ಮಾಡಲಾಗಿದೆ. ಕೋವ್ಯಾಕ್ಸಿನ್ ಲಸಿಕೆ ಪಡೆದ ಮೂರನೇ ಒಂದರಷ್ಟು ಮಂದಿಯಲ್ಲಿ ವಿಶೇಷ ಹಿತಾಸಕ್ತಿಯ ಪ್ರತಿಕೂಲ ಘಟನಾವಳಿಗಳು ಕಾಣಿಸಿಕೊಂಡಿವೆ. ಚರ್ಮ ಸಮಸ್ಯೆ, ಸಾಮಾನ್ಯ ಸಮಸ್ಯೆಗಳು ಹಾಗೂ ನರಮಂಡಲದ ಸಮಸ್ಯೆಗಳು ಪ್ರಮುಖವಾಗಿ ಕಂಡುಬಂದಂತಹ ಮೂರು ಆರೋಗ್ಯ ಸಮಸ್ಯೆಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಕಳೆದ ಜನವರಿ 2022 ರಿಂದ 2023ರವರೆಗೆ ಈ ಅಧ್ಯಯನ ನಡೆದಿದೆ. ಅಧ್ಯಯನದಲ್ಲಿ 635 ಮಂದಿ ಹದಿಹರೆಯದವರು ಹಾಗೂ 291 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು. ಲಸಿಕೆ ಪಡೆದ ಒಂದು ವರ್ಷದ ಬಳಿಕ ಆದಂತಹ ಪ್ರತಿಕೂಲ ಪರಿಣಾಮಗಳ ಬಗ್ಗೆ ದೂರವಾಣಿ ಮೂಲಕ ಸಂದರ್ಶನ ಮಾಡಲಾಗಿದೆ. ಶೇ.10 ಮಂದಿಯಲ್ಲಿ ಹೊಸ ಚರ್ಮ ಸಮಸ್ಯೆ, ಶೇ.10.2 ಮಂದಿಯಲ್ಲಿ ಸಾಮಾನ್ಯ ಸಮಸ್ಯೆಗಳು ಹಾಗೂ ಶೇ.4.7 ಮಂದಿಯಲ್ಲಿ ನರಮಂಡಲ ಸಮಸ್ಯೆ ಸೇರಿದಂತೆ ಶೇ.4.6 ಮಹಿಳೆಯರಲ್ಲಿ ಋತುಚಕ್ರದ ಸಮಸ್ಯೆ ಕಾಣಿಸಿಕೊಂಡಿದ್ದು, ನಾಲ್ಕು ಮಂದಿ ಸತ್ತಿದ್ದಾರೆ. ಈ ಪೈಕಿ ಮೂರು ಮಹಿಳೆಯರು ಎಂದು ವರದಿಯಲ್ಲಿ ತಿಳಿಸಲಾಗಿದೆ.