Online Dhoka – ಇತ್ತೀಚಿಗೆ ಆನ್ ಲೈನ್ ಮೂಲಕ ನಡೆಯುವಂತಹ ವಂಚನೆಗಳು ಹೆಚ್ಚಾಗುತ್ತಿವೆ ಎನ್ನಬಹುದಾಗಿದೆ. ಸಂಬಂಧಪಟ್ಟವರು ಆನ್ ಲೈನ್ ಮೂಲಕ ನಡೆಯುವಂತಹ ಮೋಸದ ಜಾಲದ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಸಹ ಅಲ್ಲಲ್ಲಿ ಆನ್ ಲೈನ್ ಮೋಸಗಳು ನಡೆಯುತ್ತಲೇ (Online Dhoka) ಇದೆ. ಅಂತಹುದೇ ಘಟನೆಯೊಂದು ಮಂಡ್ಯದಲ್ಲಿ ನಡೆದಿದೆ. ಫೇಸ್ ಬುಕ್ ಮೂಲಕ ಪರಿಚಯವಾದ ಯುವತಿಯ ಪೂಜಾರಪ್ಪನಿಗೆ ವಂಚನೆ ಮಾಡಿದ್ದಾಳೆ. ಇದೀಗ ದೇವಾಲಯದ (Online Dhoka) ಅರ್ಚಕ ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಶಿವಶೈಲ ದೇವಾಸ್ಥಾನದ ಅರ್ಚಕ ವಿಜಯ್ ಕುಮಾರ್ ವಂಚನೆಗೆ (Online Dhoka) ಒಳಗಾದ ವ್ಯಕ್ತಿ. ದೂರುದಾರ ಅರ್ಚಕ ವಿಜಯ್ ಕುಮಾರ್ ಕುಟುಂಬದಿಂದ ದೂರವಾಗಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದ. ಕೆಲವು ದಿನಗಳ ಹಿಂದೆಯಷ್ಟೆ ಈತನಿಗೆ (Online Dhoka) ಫೇಸ್ ಬುಕ್ ನಲ್ಲಿ ಸಿರಿ ಶ್ರೇಷ ಸರಿತಾ ಎಂಬ ಸುಂದರಿ ಪರಿಚಯವಾಗಿದ್ದಾಳೆ. ಬಳಿಕ ಪ್ರತಿನಿತ್ಯ ಇಬ್ಬರೂ ಫೇಸ್ ಬುಕ್ ನಲ್ಲಿ ಚಾಟಿಂಗ್ ಮಾಡಿಕೊಳ್ಳುತ್ತಿದ್ದರು. ಅವರಿಬ್ಬರ ಸ್ನೇಹ ತುಂಬಾನೆ ಹತ್ತಿರವಾಗಿದ್ದು, ಯುವತಿ ಪೂಜಾರಪ್ಪನ ಬಳಿ ಹಂತ ಹಂತವಾಗಿ ಹಣ ಪೀಕಿದ್ದಾಳೆ. ವಸತಿ, ಆರೋಗ್ಯ (Online Dhoka) ಸಮಸ್ಯೆಯಂತಾ ಸುಮಾರು 1.40 ಸಾವಿರದಷ್ಟು ಹಣ ಲಪಟಾಯಿಸಿದ್ದಾಳೆ.
ಸಂತ್ರಸ್ತ (Online Dhoka) ವಿಜಯ್ ಕುಮಾರ್ ಗೆ ಬಣ್ಣ ಬಣ್ಣದ ಮಾತುಗಳಿಂದ ಮರಳು ಮಾಡಿದ್ದಾಳೆ. ಫೇಸ್ ಬುಕ್ ಸುಂದರಿಯ ಮಾತುಗಳನ್ನು ನಂಬಿ ಹಣ ಕಳುಹಿಸಿದ್ದಾನೆ. ಪೋನ್ ಪೇ ಮೂಲಕ ಹಣ ಪಡೆದುಕೊಂಡ ಆ ಯುವತಿಯನ್ನು ಭೇಟಿಯಾಗುವಂತೆ ವಿಜಯ್ ಕುಮಾರ್ ಒತ್ತಡವೇರಿದ್ದಾನೆ. ಯುವತಿ (Online Dhoka) ಮಾತ್ರ ನಾಳೆ, ನಾಡಿದ್ದು ಅಂತಾ ಕೈ ಕೊಟ್ಟಿದ್ದಾಳೆ. ಕೊನೆಗೆ ಫೇಸ್ ಬುಕ್ ಬ್ಲಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ. ತಾನು ಮೋಸ ಹೋಗಿದ್ದು ಅರಿವಾದ ವಿಜಯ್ ಕುಮಾರ್ ಸೈಬರ್ (Online Dhoka) ಪೊಲೀಸರ ಮೊರೆ ಹೋಗಿದ್ದಾರೆ. ಈ ಸಂಬಂಧ ಮಂಡ್ಯದ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.