ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವಂತಹ ಹಾಸನ ಸಂಸದ ಪ್ರಜ್ವಲ್ ರೇವಣ್ಣರವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದವರ ಮೇಲೆ ಎಸ್.ಐ.ಟಿ. ಹದ್ದಿನ ಕಣ್ಣಿಡಲಾಗಿದೆ. ಇದೀಗ ಚಿಕ್ಕಮಗಳೂರಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧನ ಮಾಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ ಎನ್ನಲಾಗಿದೆ.
ಅಶ್ಲೀಲ ವಿಡಿಯೋ ನೋಡುವುದಕ್ಕಾಗಲಿ ಅಥವಾ ಹಂಚಿಕೆ ಮಾಡುವುದಕ್ಕಾಗಲಿ ಈ ಹಿಂದೆ ಕಾನೂನಿನಲ್ಲಿ ಹೆಚ್ಚಿನ ನಿರ್ಬಂಧಗಳಿರಲಿಲ್ಲ. ಆದರೆ ಬೇರೆಯವರ ಮಾನಹಾನಿ ಮಾಡುವುದಕ್ಕೆ ಅವಕಾಶವಿರಲಿಲ್ಲ. ಆದರೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಬಳಿಕ ಸೋಷಿಯಲ್ ಮಿಡಿಯಾದ ಮೇಲೆ ಸೈಬರ್ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ರಾಜ್ಯದಲ್ಲಿ ಅಶ್ಲೀಲ ವಿಡಿಯೋ ಹಂಚಿಕೆ ಮಾಡುವುದು, ಅದನ್ನು ಪ್ರದರ್ಶನ ಮಾಡುವುದನ್ನು ನಿರ್ಬಂಧಿಸಿ ಸರ್ಕಾರ ಆದೇಶ ಸಹ ಹೊರಡಿಸಿದೆ. ಆದರೂ ಸಹ ಚಿಕ್ಕಮಗಳೂರಿನ ಯುವಕನೋರ್ವ ಅಶ್ಲೀಲ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋ ಹಂಚಿಕೊಂಡ ಯುವಕನ ವಿರುದ್ದ ಕುದುರೆಮುಖ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕ ಇದೀಗ ಜೈಲುಪಾಲಾಗಲಿದ್ದಾನೆ..
ಚಿಕ್ಕಮಗಳೂರಿನ ಕಳಸ ತಾಲೂಕಿನ ಸಂಸೆ ಎಂಬ ಗ್ರಾಮದ ಯುವಕ ಪ್ರಜ್ವಲ್ ಎಂಬ ಯುವಕ ತನ್ನ ಇನ್ಸ್ಟಾ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಅಶ್ಲೀಲ ವಿಡಿಯೋ ಹಾಗೂ ಪೊಟೋಗಳನ್ನು ಹಂಚಿಕೊಂಡಿದ್ದನು. ಅಷ್ಟೇಅಲ್ಲದೇ ವಿಡಿಯೋ ಪೊಟೋಗಳ ಜೊತೆಗೆ ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುವಂತಹ ಪದಗಳನ್ನು ಸಹ ಬಳೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆತನ ವಿರುದ್ದ ಸೋಷಿಯಲ್ ಮಿಡಿಯಾದಲ್ಲಿ ಆತನ ವಿರುದ್ದ ಭಾರಿ ಆಕ್ರೋಷ ಸಹ ವ್ಯಕ್ತವಾಗಿತ್ತು.ಈ ವಿಷರ ತಿಳಿಯುತ್ತಿದ್ದಂತೆ ಪೊಲೀಸರು ಎಫ್.ಐ.ಆರ್ ದಾಖಲು ಮಾಡಿದ್ದು, ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಬಳಿಕ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದಾರೆ. ಆತನಿಗೆ ಕಾನೂನಿನಂತೆ ಶಿಕ್ಷೆ ಹಾಗೂ ದಂಡ ವಿಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ನೀವು ಸಹ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲವಾದ ಕಂಟೆಂಟ್ ಹರಿಬಿಡೋಕೂ ಮುನ್ನಾ ಎಚ್ಚರಿಕೆ ವಹಿಸುವುದು ಸೂಕ್ತ.