Sunday, December 21, 2025
HomeStateಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಕೆ.ಎಸ್.ಆರ್.ಟಿ.ಸಿ ಚಾಲಕ, ಸಾರಿಗೆ ಸಂಸ್ಥೆಯಿಂದ ಸ್ಪಷ್ಟನೆ….!

ಕೊಡೆ ಹಿಡಿದು ಬಸ್ ಚಾಲನೆ ಮಾಡಿದ ಕೆ.ಎಸ್.ಆರ್.ಟಿ.ಸಿ ಚಾಲಕ, ಸಾರಿಗೆ ಸಂಸ್ಥೆಯಿಂದ ಸ್ಪಷ್ಟನೆ….!

ರಾಜ್ಯದ ಅನೇಕ ಕಡೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಕೆಲವೊಂದು ಕಡೆ ರಸ್ತೆಗಳಲ್ಲಿ ನೀರು ಹರಿದು, ಜನ ಜೀವನ ಅಸ್ತವ್ಯಸ್ತವಾದ ಘಟನೆಗಳು ಸಹ ನಡೆದಿದೆ. ನಿನ್ನೆ ಕೆ.ಎಸ್.ಆರ್‍.ಟಿ.ಸಿ ಬಸ್ ಚಾಲಕ (NWKRTC Driver) ಕೊಡೆಯನ್ನು ಹಿಡಿದು ಬಸ್ ಚಾಲನೆ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದ್ದು, ಕೆಲವೊಂದು ವಿಮರ್ಶೆಗಳು ಕೇಳಿಬಂದಿತ್ತು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆ ಸ್ಪಷ್ಟನೆಯೊಂದನ್ನು ನೀಡಿದೆ. ಸಾರಿಗೆ ಸಂಸ್ಥೆ ನೀಡಿದ ಸ್ಪಷ್ಟನೆ ಏನು ಎಂಬ ವಿಚಾರಕ್ಕೆ ಬಂದರೇ,

ನಿನ್ನೆ ಸೋಷಿಯಲ್ ಮಿಡಿಯಾದಲ್ಲಿ ಕೊಡೆಯನ್ನು ಹಿಡಿದು ಬಸ್ ಚಾಲನೆ ಮಾಡಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಮಳೆ ಬರುತ್ತಿರುವಾಗ ಕೊಡೆ ಹಿಡಿದು ಬಸ್ ಚಾಲನೆ ಮಾಡಿರುವುದರಿಂದ ಅನೇಕ ವಿಮರ್ಶೆಗಳು ಕೇಳಿಬಂದಿತ್ತು. ಬಸ್ ಗಳ ಸ್ಥಿತಿ ಹಾಳಾಗಿದೆ. ಬಸ್ ಸೋರುತ್ತಿದ್ದರೂ ವಾಹನ ಚಾಲಕ ಚತ್ರಿಯನ್ನು ಹಿಡಿದು ಬಸ್ ಚಲಾಯಿಸುತ್ತಿದ್ದಾರೆ ಎಂದು ಅನೇಕರು ವಿಮರ್ಶೆ ಮಾಡಿದ್ದರು. ಮತ್ತೆ ಕೆಲವರು ಬಸ್ ನಲ್ಲಿ ಕೊಡೆ ಹಿಡಿದು ವಾಹನ ಚಾಲನೆ ಮಾಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಏನಾದರೂ ಅನಾಹುತ ಆದರೇ ಯಾರು ಜವಾಬ್ದಾರಿ ಎಂದು ವಿಮರ್ಶೆಗಳು ಸಹ ಹರಿದುಬಂತು. ಈ ವಿಡಿಯೋ ಸಂಬಂಧ ಚಾಲಕ ಹಾಗೂ ನಿರ್ವಾಹಕಿಯನ್ನು ಅಮಾನತ್ತು ಮಾಡಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಆದೇಶಿಸಿದೆ. ಜೊತೆಗೆ  ಈ ವಿಡಿಯೋ ಬಗ್ಗೆ ಸ್ಪಷ್ಟನೆಯನ್ನು ಸಹ ನೀಡಿದೆ.

nwkrtc bus driver conductor suspend

ಸಾರಿಗೆ ಸಂಸ್ಥೆ ಈ ವಿಡಿಯೋ ಬಗ್ಗೆ ನೀಡಿದ ಸ್ಪಷ್ಟನೆಯಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೇ ಧಾರವಾಡ ಘಟಕದ ಬೇಟಗೇರಿ-ಧಾರವಾಡ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಚಾಲಕ ಹನುಮಂತಪ್ಪ ಕಿಲ್ಲೇದಾರ ಹಾಗೂ ನಿವಾರ್ಹಕಿ ಅನಿತಾ ಕೆಲಸ ಮಾಡುತ್ತಿದ್ದರು. ಮಳೆ ಬರುತ್ತಿದ್ದಾಗ ಸಂಜೆ ಬಸ್ ನಲ್ಲಿ ಪ್ರಯಾಣಿಕರು ಇಲ್ಲದೇ ಇದ್ದಾಗ ಚಾಲಕ  ಮನೋರಂಜನೆಗಾಗಿ ನಿರ್ವಾಹಕರ ಬಳಿಯಿದ್ದ ಕೊಡೆಯನ್ನು ಹಿಡಿದುಕೊಂಡು ಬಸ್ ಚಲಾಯಿಸಿದ್ದಾರೆ. ಈ ದೃಶ್ಯವನ್ನು ನಿವಾರ್ಹಕಿ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಆದರೆ ಬಸ್ ಮೇಲ್ಚಾವಣಿ ಅಥವಾ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಸೋರುತ್ತಿರಲಿಲ್ಲ. ವಾಹನ ಛಾವಣಿ ಸೋರಿಕೆ ಬಗ್ಗೆ ಚಾಲಕರಾಗಲಿ, ನಿರ್ವಾಹಕಿಯಾಗಲಿ ಅಥವಾ ಪ್ರಯಾಣಿಕರಾಗಲಿ ಯಾವುದೇ ದೂರು ನೀಡಿಲ್ಲ. ಅಷ್ಟೇಅಲ್ಲದೇ ವಿಭಾಗದ ತಾಂತ್ರಿಕ ತಜ್ಞರಿಂದ ಪರಿಶೀಲನೆ ಮಾಡಿದ್ದು, ಮೇಲ್ಚಾವಣಿ ಸೋರುತ್ತಿಲ್ಲ ಎಂಬುದನ್ನೂ ಸಹ ಖಚಿತಪಡಿಸಲಾಗಿದೆ. ಈ ವಿಡಿಯೋ ಬಗ್ಗೆ ಸಿಬ್ಬಂದಿಯಿಂದ ಸ್ಪಷ್ಟೀಕರಣ ಪಡೆದಿದ್ದು, ಕೇವಲ ಮನೋರಂಜನೆಗಾಗಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular