ಪ್ರೀತಿಯೆಂದರೆ ನಂಬಿಕೆ, ಪ್ರೀತಿಯೆಂದರೆ ಭರವಸೆ. ಆದರೆ ಅದೇ ಪ್ರೀತಿಯನ್ನು ನಂಬಿ ಬಂದ 19 ವರ್ಷದ ಯುವತಿಯೊಬ್ಬಳು ಇಂದು ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟಿದ್ದಾಳೆ. ಐದು ವರ್ಷಗಳ ಸುದೀರ್ಘ ಪ್ರೀತಿ, ಕೊನೆಗೆ ಮದುವೆಯಾಗು ಎಂದು ಕೇಳಿದ್ದಕ್ಕೆ ಆಕೆ ಹೆಣವಾಗಿ ಮನೆ ಸೇರಬೇಕಾದ ದುಸ್ಥಿತಿ (Death Case) ಎದುರಾಗಿದೆ. ಹೌದು, ಹಾಸನ ಜಿಲ್ಲೆಯ ಅರಸಿಕೆರೆ ಮೂಲದ ನಿಖಿತಾ (19) ಎಂಬ ಯುವತಿ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Death Case – ಅಸಲಿಗೆ ನಡೆದಿದ್ದೇನು?
ಮೃತ ನಿಖಿತಾ ಮತ್ತು ಪಿಲ್ಲಹಳ್ಳಿಯ ರಾಘವೇಂದ್ರ ಎಂಬ ಯುವಕ ಕಳೆದ 5-6 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಹೊಸ ವರ್ಷದ ಸಂಭ್ರಮಾಚರಣೆಗಾಗಿ ನಿಖಿತಾ ಅರಸಿಕೆರೆಯಿಂದ ಬೆಂಗಳೂರಿನ ಪಿಲ್ಲಹಳ್ಳಿಯಲ್ಲಿರುವ ಪ್ರಿಯಕರನ ಮನೆಗೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆಯ ವಿಚಾರ ಪ್ರಸ್ತಾಪವಾಗಿದೆ. “ನನ್ನನ್ನು ಅಧಿಕೃತವಾಗಿ ಮದುವೆಯಾಗು, ತಾಳಿ ಕಟ್ಟು” ಎಂದು ನಿಖಿತಾ ತನ್ನ ಪ್ರಿಯಕರ ರಾಘವೇಂದ್ರನಿಗೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಇಬ್ಬರ ನಡುವೆ ಸಣ್ಣಪುಟ್ಟ ಮನಸ್ತಾಪಗಳೂ ನಡೆದಿದ್ದವು ಎಂದು ತಿಳಿದುಬಂದಿದೆ.
ಸಾವಿನ ಸುತ್ತ ಅನುಮಾನದ ಹುತ್ತ!
ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿಖಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಮಗಳ ಸಾವಿನ ಸುದ್ದಿ ಕೇಳಿ ದೌಡಾಯಿಸಿದ ನಿಖಿತಾ ಪೋಷಕರು ಇದು ಆತ್ಮಹತ್ಯೆಯಲ್ಲ, ಇದೊಂದು ‘ವ್ಯವಸ್ಥಿತ ಕೊಲೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
“ನಮ್ಮ ಮಗಳನ್ನು ಪ್ರೀತಿಯ ಹೆಸರಲ್ಲಿ ನಂಬಿಸಿ ವಂಚಿಸಲಾಗಿದೆ. ಆಕೆ ಮದುವೆಗೆ ಒತ್ತಾಯಿಸಿದಳು ಎಂಬ ಒಂದೇ ಕಾರಣಕ್ಕೆ ಅವಳನ್ನು (Death Case) ಹತ್ಯೆ ಮಾಡಿ ಈಗ ಆತ್ಮಹತ್ಯೆಯ ನಾಟಕವಾಡುತ್ತಿದ್ದಾರೆ” ಎಂದು ಪೋಷಕರು ಕಣ್ಣೀರು ಹಾಕುತ್ತಾ ರಾಘವೇಂದ್ರನ ಮೇಲೆ ದೂರು ನೀಡಿದ್ದಾರೆ. Read this also : ಪ್ರಿಯತಮೆಯೊಂದಿಗೆ ಸುತ್ತಾಡುತ್ತಿದ್ದ ಪತಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ; ಆಮೇಲೆ ನಡೆದಿದ್ದೇ ಬೇರೆ!

ಪೊಲೀಸ್ ತನಿಖೆ ತೀವ್ರ
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು (Madanayakahalli Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ನಿಖರ ಮಾಹಿತಿ ಹೊರಬೀಳಬೇಕಿದೆ. ಸದ್ಯ (Death Case) ಪೊಲೀಸರು ನಿಖಿತಾಳ ಪ್ರಿಯಕರ ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುಂದರವಾಗಿ ಬದುಕಬೇಕಿದ್ದ ಯುವತಿಯ ಬಾಳು ಹೀಗೆ ಅರ್ಧಕ್ಕೆ ಮುಗಿದಿರುವುದು ಅರಸಿಕೆರೆ ಮತ್ತು ಪಿಲ್ಲಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
