ಡಿಸಿಎಂ ಡಿ.ಕೆ. ಶಿವಕುಮಾರ್ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಲು ಮುಂದಾಗಿದ್ದು, ಈ ಸಂಬಂಧ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಹ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಈಗಾಗಲೇ ವಿರೋಧ ಸಹ ವ್ಯಕ್ತವಾಗುತ್ತಿದೆ. ಇದೀಗ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯೆ ನೀಡಿದ್ದಾರೆ. ರಾಮನಗರ ಹೆಸರು ಜಿಲ್ಲೆಯ ಹೆಸರು ಬದಲಾವಣೆ ಸಾಹಸಕ್ಕೆ ಕೈ ಹಾಕಿದರೇ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಮಾದ್ಯಮಗಳೊಂದಿಗೆ ಮಾತನಾಡಿದರು. ರಾಮನಗರ ಹೆಸರು ಬದಲಾವಣೆಯಿಂದ ಜಮೀನಿನ ಮೌಲ್ಯ, ಆಸ್ತಿ ಹೆಚ್ಚಾಗುತ್ತದೆ ಎಂದು ಹೇಳ್ತಾರೆ. ರಾಮನಗರ ಅಭಿವೃದ್ದಿಯಾಗಿಲ್ಲ ಅನ್ನೋರು ಬಂದು ಅಲ್ಲಿರುವ ಕಟ್ಟಡಗಳನ್ನು ನೋಡಲಿ. ರಾಮನಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಿದ ಬಳಿಕ ಆಗಿರುವ ಅಭಿವೃದ್ದಿ ನೋಡಲಿ. ಅನಿತಾ ಕುಮಾರಸ್ವಾಮಿಯವರು ಶಾಸಕರಾಗಿದ್ದಾಗ ಎಷ್ಟು ಸೇತುವೆ ನಿರ್ಮಾಣವಾಗಿದೆ ಗೊತ್ತಾ, ರಾಮನಗರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಮಾಜಿ ಪ್ರಧಾನಿ ದೇವೇಗೌಡರ ಶ್ರಮವೂ ಇದೆ. ಇಷ್ಟು ದಿನ ಅಭಿವೃದ್ದಿಯ ಬಗ್ಗೆ ಮಾತನಾಡದೇ ಇರೋವರು ಇಷ್ಟು ದಿನ ಎಲ್ಲಿದ್ದರು ಎಂದು ಆಕ್ರೋಷ ಹೊರಹಾಕಿದರು.
ಇದೇ ಸಮಯದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗೆ ತಿರುಗೇಟು ನೀಡಿದ್ದಾರೆ. ರಾಮನಗರಕ್ಕೆ ಅದರದ್ದೇ ಆದ ಅಸ್ಮಿತೆ ಇದೆ. ರಾಮನ ಬಗ್ಗೆ ಗೌರವ ಇದೆ, ಪ್ರೀತಿ ಇದೆ ಅಂತಾ ಕೂಪನ್ ಶಾಸಕರು ಹೇಳಿದ್ದಾರೆ. ಕಾಂಗ್ರೇಸ್ ನವರು ರಾಮಮಂದಿರ ನಿರ್ಮಾಣಕ್ಕೆ ಏಕೆ ವಿರೋಧ ಮಾಡಿದ್ರು, ಕಾಂಗ್ರೇಸ್ ನ ರಾಷ್ಟ್ರೀಯ ನಾಯಕರು ಒಂದು ಸಮುದಾಯವನ್ನು ಓಲೈಕೆ ಮಾಡುವ ಉದ್ದೇಶದಿಂದ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೇಸ್ ಹೈಕಮಾಂಡ್ ವಿರುದ್ದವೂ ಕಿಡಿಕಾರಿದರು. ರಾಮನಗರ ಹೆಸರು ಬದಲಾವಣೆ ಮಾಡಿದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಈಗಾಗಲೇ ಕೆಲವು ಸಂಘಟನೆಗಳು ಈ ಕುರಿತು ಚರ್ಚೆ ಮಾಡಿದೆ. ಆದ್ದರಿಂದ ಹೆಸರು ಬದಲಾವಣೆ ಸಾಹಸಕ್ಕೆ ಮುಂದಾಗಬೇಡಿ ಎಂದು ಕೈ ನಾಯಕರಿಗೆ (Nikhil Kumaraswamy) ಎಚ್ಚರಿಕೆ ನೀಡಿದರು.
ಇನ್ನೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಮಂಡ್ಯದಲ್ಲಿ ಕುಮಾರಸ್ವಾಮಿ ರವರು ಸೋಲುತ್ತಾರೆ ಎಂದು ಭಾಷಣ ಮಾಡಿದ್ದರು. ಆದರೆ ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರದಲ್ಲಿ ಉನ್ನತ ಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಸಿದ್ದರಾಮಯ್ಯನವರ ಬಾಯಲ್ಲಿ ಮಚ್ಚೆ ಇದೆ ಅನ್ನಿಸುತ್ತದೆ. ಅವರು ಆಗಲ್ಲ ಅನ್ನೋದು ಆಗುತ್ತದೆ ಎಂದು (Nikhil Kumaraswamy) ಕುಟುಕಿದರು.