Navya Murder Case – ಬೆಂಗಳೂರಿನ ಕೆಂಗೇರಿಯ (Bangalore Kengeri) ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕಳೆದೆರಡು ದಿನಗಳ ಹಿಂದೆಯಷ್ಟೆ ಪತ್ನಿಯ ಶೀಲ ಶಂಕಿಸಿದ ಪತಿ, ಆಕೆಯನ್ನು ಕೊಲೆ (Navya Murder Case) ಮಾಡಿದ್ದ. ಕಿರಣ್ ಎಂಬಾತ ಆತನ ಪತ್ನಿ ನವ್ಯಾ ಎಂಬಾಕೆಯನ್ನು ಕೊಲೆ ಮಾಡಿದ್ದ. ಈ ಸಂಬಂಧ ಆರೋಪಿ ಕಿರಣ್ ನನ್ನು ಪೊಲೀಸರು ಬಂಧನ ಮಾಡಿದ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ (Navya Murder Case) ವೇಳೆ ಕಿರಣ್ ಕೊಲೆ ಮಾಡಿದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ಪ್ರೀತಿಸಿದ ನವ್ಯಾಳನ್ನು ಕಿರಣ್ ಕೊಲೆ ಮಾಡಿದ್ದು ಏಕೆ ಎಂಬ ಸತ್ಯಾಂಶವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.
ನನಗೆ ಕೊಲೆ ಮಾಡುವ ಉದ್ದೇಶವೇ ಇರಲಿಲ್ಲ ಎಂದ ಆರೋಪಿ ಕಿರಣ್:
ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ (Navya Murder Case) ಕಿರಣ್ ತನ್ನ ಪತ್ನಿ ನವ್ಯಾಳನ್ನು ಕ್ರೂರವಾಗಿ ಕೊಲೆ ಮಾಡಿದ್ದ. ಈ ಸಂಬಂಧ ಕಿರಣ್ ನನ್ನು ಪೊಲೀಸರು ಬಂಧನ ಮಾಡಿದ್ದು, ತಾನು ಕೊಲೆ ಮಾಡಿದ್ದ ಸತ್ಯವನ್ನು ಪೊಲೀಸರ ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದಾನೆ. ಆ.28 ರ ರಾತ್ರಿ ಮನೆಯಲ್ಲಿ ಏನೆಲ್ಲಾ ನಡೆಯಿತು (Navya Murder Case) ಎಂಬ ಇಂಚಿಂಚು ಮಾಹಿತಿಯನ್ನು ಹೊರಹಾಕಿದ್ದಾನೆ. ನನಗೆ ಕೊಲೆ ಮಾಡುವ ಉದ್ದೇಶವೇ ಇರಲಿಲ್ಲ. ಇತ್ತೀಚಿಗೆ ಆಕೆ ನನ್ನನ್ನು ದೂರ ಮಾಡಲು ಶುರು ಮಾಡಿದ್ದಳು. ಬೇರೊಬ್ಬರ ಜೊತೆಗೆ ಸಲುಗೆಯಿಂದ ಮಾತನಾಡುತ್ತಿದ್ದನ್ನು (Navya Murder Case) ನಾನು ಗಮನಿಸಿದ್ದೆ. ಈ ಕಾರಣದಿಂದ ನಮ್ಮಿಬ್ಬರ ನಡುವೆ ಜಗಳ ಆಗಿತ್ತು.
ಡಿವೊರ್ಸ್ ಕೊಡು ಅಂತಾ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಬಂದಿದ್ಲು:
ಆ.28ರ ರಾತ್ರಿ ನನಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. (Navya Murder Case) ನವ್ಯಾ ನನಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಳು. ಮನೆಯಿಂದ ಹೊರಗೆ ಹೋಗ್ತಾ ಇರು, ನಿನ್ನ ಸಹವಾಸ ನನಗೆ ಸಾಕು ಡಿವೋರ್ಸ್ ಕೊಡು ಎಂದು ಗಲಾಟೆ ಮಾಡಿದಳು. ನಾನು ಏನು ಮಾಡಬೇಕೆಂದು (Navya Murder Case) ಗೊತ್ತಾಗದೇ ಹಾಗೂ ನವ್ಯಾ ನನಗೆ ಚಾಕುವಿನಿಂದ ಹಲ್ಲೆ ಮಾಡುತ್ತಾಳೆ ಎಂದು ಮನೆಯಿಂದ ಹೊರಬಂದೆ. ಬಳಿಕ ನವ್ಯಾ ಜೊತೆ ಮಾತನಾಡುವ ಸಲುವಾಗಿ ಬೆಡ್ ರೂಂ ಗೆ ಹೋದೆ. (Navya Murder Case) ಆಕೆ ತಲೆ ದಿಂಬಿನ ಕೆಳಗೆ ಚಾಕು ಇಟ್ಟುಕೊಂಡಿದ್ದಳು. ಅದನ್ನು ನೋಡಿ ಕಬ್ಬಿಣದ ರಾಡ್ ನಿಂದ ನವ್ಯಾ ಮೇಲೆ ಹಲ್ಲೆ ಮಾಡಿದೆ. ಅದೇ ಚಾಕುವನ್ನು ಬಳಸಿ ನವ್ಯಾ ಕುತ್ತಿಗೆ ಕೊಯ್ದು ಕೊಲೆ ಮಾಡಿದೆ (Navya Murder Case) ಎಂದು ಕಿರಣ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೂ ಕೊಲೆಯಾದ (Navya Murder Case) ದಿನದಂದು ನವ್ಯಾ ತನ್ನ ಗೆಳತಿ ಐಶ್ವರ್ಯಾ ಹಾಗೂ ಅನೀಲ್ ಎಂಬುವವರ ಜೊತೆ ಪಾರ್ಟಿ ಮುಗಿಸಿ ಮನೆಗೆ ಬಂದಿದ್ದರು. ಐಶ್ವರ್ಯಾ, ನವ್ಯಾಳ ಬೆಡ್ ರೂಂ ನಲ್ಲೇ ನಿದ್ದೆಗೆ ಜಾರಿದ್ದರು. ರಾತ್ರಿ 11 ಗಂಟೆಗೆ ಮನೆಗೆ ಬಂದ ನವ್ಯಾ ಸೀದಾ ಹೋಗಿ ಬೆಡ್ ರೂಂ ನಲ್ಲಿ ಮಲಗಿದ್ದಳು. ಇಬ್ಬರೂ ಗಾಢ ನಿದ್ರೆಯಲ್ಲಿದ್ದರಂತೆ. (Navya Murder Case) ಅದೇ ದಿನ ಸಂಜೆ 7 ಗಂಟೆಯ ಸಮಯದಲ್ಲಿ ಆರೋಪಿ ಕಿರಣ್ ಮನೆಗೆ ಬಂದಿದ್ದಾನೆ. ಇಷ್ಟೊಂದು ದೊಡ್ಡ ಜಗಳವಾದರೂ ಸಹ ಐಶ್ವರ್ಯಾ ನಿದ್ದೆಯಿಂದ ಎದ್ದಿರಲಿಲ್ಲವಂತೆ. (Navya Murder Case) ಇನ್ನೂ ಸಂಜೆ 7 ರಿಂದ ತಡರಾತ್ರಿಯವರೆಗೂ ಆರೋಪಿ ಕಿರಣ್ ದೇವರ ಮನೆಯಲ್ಲಿಯೇ ಅವಿತು ಕುಳಿತಿದ್ದನಂತೆ. ನವ್ಯಾ ಯಾರ ಜೊತೆ ಮನೆಗೆ ಬರುತ್ತಾಳೆ. ಯಾರೊಂದಿಗೆ ಮಾತನಾಡುತ್ತಾಳೆ ಎಂಬುದನ್ನು ದೇವರ ಮನೆಯಲ್ಲಿಯೇ ಇದ್ದುಕೊಂಡು ಕೇಳುತ್ತಿದ್ದನಂತೆ. (Navya Murder Case) ಆದರೆ ನವ್ಯಾ ಮನೆಗೆ ಬಂದು ನಿದ್ದೆಗೆ ಜಾರಿದ ಬಳಿಕ ಆರೋಪಿ ಕಿರಣ್ ಸುಮ್ಮನಾಗಿದ್ದಾನೆ.
ನವ್ಯಾಗೆ ರಾತ್ರಿ ವಿಡಿಯೋ ಕಾಲ್ ಬಂದಿತ್ತು:
ಆದರೆ ಹೆಂಡತಿ ನವ್ಯಾಗೆ (Navya Murder Case) ರಾತ್ರಿ ಒಂದು ವಿಡಿಯೋ ಕಾಲ್ ಬಂದಿತ್ತು. ವಿಡಿಯೋ ಕಾಲ್ ನಲ್ಲಿ ಮಾತನಾಡುವ ಸಲುವಾಗಿ ಬೆಡ್ ರೂಂ ನಿಂದ ಹಾಲ್ ಗೆ ಬಂದಿದ್ದಳು. ವಿಡಿಯೋ ಕಾಲ್ ನಲ್ಲಿ ಮಾತನಾಡುವಾಗ ನವ್ಯಾಗೆ ವಿಡಿಯೋ ಕಾಲ್ ನಲ್ಲಿರುವವರು ಚಿನ್ನ ಎಂದು ಹೇಳಿದ್ದನ್ನು ಕಿರಣ್ ಕೇಳಿಸಿಕೊಂಡಿದ್ದಾಣೆ. (Navya Murder Case) ಬಳಿಕ ಮನೆಯಿಂದ ಎದ್ದು ಬಂದಿದ್ದಾನೆ. ಈ ವೇಳೆ ಇಬ್ಬರ ನಡುವೆ ಜೋರು ಜಗಳವಾಗಿದೆ. ನವ್ಯಾ ಕಿಚನ್ ನಲ್ಲಿರುವ ಚಾಕು ತಂದು ನಿನ್ನ ಸಹವಾಸ ಸಾಕು ಹೋಗ್ತಾ ಇರು, ಡಿವೋರ್ಸ್ (Navya Murder Case) ಕೊಡು ಎಂದು ಹೇಳಿದ್ದಾಳೆ. ಬಳಿಕ ಬೆಡ್ ರೂಂ ಗೆ ಹೋಗೆ ತಲೆದಿಂಬಿನ ಕೆಳಗೆ ಚಾಕು ಇಟ್ಟುಕೊಂಡು ಮಲಗಿದ್ದಾಳೆ. ಆದರೆ ಆಕೆ ರೂಂ ಲಾಕ್ ಮಾಡೋದನ್ನು ಮರೆತಿದ್ದಾಳೆ.
ಹೆಂಡತಿಯನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಕಿರಣ್:
ಬಳಿಕ ರೂಂ ಗೆ ಹೋದ ಆರೋಪಿ (Navya Murder Case) ಕಿರಣ್ ಕಬ್ಬಿಣದ ರಾಡ್ ನಿಂದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಲೆದಿಂಬಿನ ಕೆಳಗಿರುವ ಚಾಕುವಿನಿಂದ ನವ್ಯಾ ಆತನ ಮೇಲೆ ದಾಳಿ ಮಾಡಲು ಮುಂದಾಗಿದ್ದಾಳೆ. (Navya Murder Case) ಈ ಸಮಯದಲ್ಲಿ ಚಾಕುವನ್ನು ಕಿತ್ತುಕೊಂಡ ಕಿರಣ್ ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. (Navya Murder Case) ಈ ಸಮಯದಲ್ಲಿ ನವ್ಯಾ ಪಕ್ಕದಲ್ಲಿಯೇ ಇದ್ದ ಐಶ್ವರ್ಯಾಳನ್ನು ಎಬ್ಬಿಸಲು ಯತ್ನಿಸಿದ್ದಾನೆ. ಆದರೆ ಪಾರ್ಟಿ ಮತ್ತಿನಲ್ಲಿದ್ದ ಐಶ್ವರ್ಯಗೆ ಎಚ್ಚರವಾಗಿಲ್ಲ. ಬಳಿಕ ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾನೆ. (Navya Murder Case) ಚಾಕುವಿನಿಂದ ಕುತ್ತಿಗೆ ಕೊಯ್ದುಕೊಳ್ಳಲು ನಿರ್ಧಾರ ಮಾಡಿದ್ದಾನೆ. ಧೈರ್ಯ (Navya Murder Case) ಸಾಲದೆ ಮನೆಯ ಬಾತ್ ರೂಂ ಕ್ಲೀನ್ ಮಾಡುವ ರಿನ್ ಲಿಕ್ವಿಡ್ ಕುಡಿದಿದ್ದಾನೆ. ಬಳಿಕ ಅವಳಿಗಾಗಿ ಸಾಯಬಾರದೆಂದು ನಿರ್ಧರಿಸಿ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಪುಡ್ ಪಾಯಿಸನ್ ಆಗಿದೆ ಅಂತಾ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾನೆ.
ಮುಂಜಾನೆ ಐಶ್ವರ್ಯಾಗೆ (Navya Murder Case) ಎಚ್ಚರಿಕೆಯಾದಾಗ ನವ್ಯಾ ಸತ್ತಿರುವುದು ಕಂಡು ಜೋರಾಗಿ ಕೂಗಾಡಿದ್ದಾಳೆ. ಈ ಸಮಯದಲ್ಲಿ ಅಕ್ಕಪಕ್ಕದವರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (Navya Murder Case) ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಅಲ್ಲಿಯೇ ಓಡಾಡುತ್ತಿದ್ದ ಆರೋಪಿ ಕಿರಣ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಬಳಿಕ ಆರೊಪಿ ಕಿರಣ್ ನನ್ನು ಪೊಲೀಸರು ಬಂಧಿಸಿದ್ದರು.