ಚಿಕ್ಕಬಳ್ಳಾಪುರದ ಕೆ.ವಿ. ದತ್ತಿ ಶಿಕ್ಷಣ ಸಮೂಹಗಳ ಮುಖ್ಯಸ್ಥ ಕೆವಿ ನವೀನ್ ಕಿರಣ್ ರವರ 46 ನೇ ಹುಟ್ಟು ಹಬ್ಬದ ಪ್ರಯುಕ್ತ ಗುಡಿಬಂಡೆ ಯಲ್ಲಿ ವಿಶೇಷವಾಗಿ, ನವೀನ್ ಕಿರಣ್ ಸಪ್ತಾಹ ಎಂಬ ಏಳು ದಿವಸಗಳ ಕಾಲ ಹಲವಾರು ಹಮ್ಮಿಕೊಂಡಿದ್ದು, ಮೊದಲನೆಯ ದಿನದಂದು ಪುಸ್ತಕ ವಿತರಣಾ ಕಾರ್ಯಕ್ರಮ ಅಯೋಜಿಸಲಾಗಿತ್ತು.
ಈ ವೇಳೆ ಕೆ ವಿ ನವೀನ್ ಕಿರಣ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷರಾದ ಗುಂಪು ಮರದ ಆನಂದ್ ಮಾತನಾಡಿ, ಶಿಕ್ಷಣ ಪ್ರೇಮಿಗಳು, ಕ್ರೀಡಾ ಪ್ರೇಮಿಗಳು, ರಕ್ತದಾನಿಗಳು ಆದ ಕೆ ವಿ ನವೀನ್ ಕಿರಣ್ ಅವರ 46ನೇ ಹುಟ್ಟುಹಬ್ಬದ ವನ್ನು ಏಳು ದಿವಸಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಚರಿಸಲಾಗುತ್ತಿದೆ. ಇಂದು ಗುಡಿಬಂಡೆಯಲ್ಲಿ ಕನ್ನಡ ಪುಸ್ತಕಗಳನ್ನು ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ನವೀನ್ ಕಿರಣ್ ರವರ ಸಾಧನೆಗಳನ್ನು ಸಹಾಯ ಗುಣಗಳನ್ನು ಇತರರಿಗೆ ಪರಿಚಯಿಸುವ ಕೆಲಸ ಇದಾಗಿದೆ. ಜೊತೆಗೆ 2148 ರಕ್ತ ಯೂನಿಟ್ ಗಳನ್ನು ಸಂಗ್ರಹಿಸಿ ರಾಜ್ಯ ದಾಖಲೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಂತವರ ಹುಟ್ಟುಹಬ್ಬ ಮಾಡುವುದು ನಮ್ಮೆಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಹಾಗೂ ಪರಿಸರ ವೇದಿಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಉರ್ದು ಸಾಹಿತ್ಯ ಪರಿಷತ್ ಗ್ರಂಥಾಲಯಕ್ಕೆ, ರಾಷ್ಟ್ರ ನಾಯಕರ, ಕನ್ನಡ ಕವಿಗಳ ಪುಸ್ತಕಗಳನ್ನು ನೀಡಲಾಯಿತು. ಈ ವೇಳೆ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ ಅಧ್ಯಕ್ಷ ನಾಸೀರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ಮಂಜುನಾಥ್. ಜೈ ಕರ್ನಾಟಕ ತಾಲೂಕು ಅಧ್ಯಕ್ಷರಾದ ಬುಲೆಟ್ ಸೀನ. ಶಫಿವುಲ್ಲಾ. ಅಸ್ಲಾಂ ಪಾಷಾ, ಬಾಬಾ ಜಾನ್, ಡಾ. ರಾಜೇಶ್, ಗೋರಾ. ಬಾಬು ಸೇರಿದಂತೆ ಹಲವರು ಇದ್ದರು.