Friday, November 22, 2024

National film awards 2024 : ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಪ್ರಕಟ, ದಕ್ಷಿಣ ಭಾರತದ ಸಿನೆಮಾಗಳದ್ದೇ ಮೇಲುಗೈ….!

National film awards 2024 – ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 16 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಿಸಿದ್ದು, ದಕ್ಷಿಣ ಭಾರತ ಚಿತ್ರರಂಗವೇ ಮೇಲುಗೈ ಸಾಧಿಸಿದೆ. ಇನ್ನೂ ಕನ್ನಡ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಹಾಗೂ ದಾಖಲೆ ಹಾಗೂ ಇತಿಹಾಸ ಸೃಷ್ಟಿಸಿದಂತಹ ಕೆಜಿಎಫ್ ಹಾಗೂ ಕಾಂತಾರ ಸಿನೆಮಾಗಳಿಗೆ ಎರೆಡೆರಡು ರಾಷ್ಟ್ರ ಪ್ರಶಸ್ತಿಗಳು ಲಭಿಸಿದೆ. ಇತ್ತ ಕಾಂತಾರದಲ್ಲಿನ ನಟನೆಯ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ದೊರೆತಿದ್ದು, ಈ ಅವಾರ್ಡ್ ಅನ್ನು ಅವರು ಅಪ್ಪು ಹಾಗೂ ಕನ್ನಡಿಗರಿಗೆ ಸಮರ್ಪಿಸಿದ್ದಾರೆ.

National film awards 2024 ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಆಗಸ್ಟ್ 16 ರಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಫೀಚರ್‍ ಫಿಲಂ ಕ್ಯಾಟಗರಿಯಲ್ಲಿ ಬರೊಬ್ಬರಿ 32 ಭಾಷೆಗಳ 309 ಸಿನೆಮಾಗಳು ಅರ್ಜಿ ಸಲ್ಲಿಸಿದ್ದವು. ಪ್ರತಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಸಿನೆಮಾ, ನಟ-ನಟಿಯರು ಹಾಗೂ ತಂತ್ರಜ್ಞರ ಹೆಸರು ಇಲ್ಲಿದೆ ನೋಡಿ.

ತೀರ್ಪುಗಾರರ ವಿಶೇಷ ಪ್ರಶಸ್ತಿ: ಮನೋಜ್ ಬಾಜ್ಪೇಯಿ (ಗುಲ್​ಮೊಹರ್-ಹಿಂದಿ ಸಿನಿಮಾ)

ಸಂಗೀತ ನಿರ್ದೇಶಕ ಸಂಜಯ್ ಸಲೀಲ್, (ಕದಿಕನ್- ಮಲಯಾಳಂ)

ಅತ್ಯುತ್ತಮ ಕನ್ನಡ ಸಿನಿಮಾ: ಕೆಜಿಎಫ್ 2 (ಪ್ರಶಾಂತ್ ನೀಲ್)

ಅತ್ಯುತ್ತಮ ಟೀವಾ ಸಿನಿಮಾ: ಸಿಕಾಸಿಲ್ (ಬಾಬಿ ಶರ್ಮಾ ಬರೂಹ್)

ಅತ್ಯುತ್ತಮ ತೆಲುಗು ಸಿನಿಮಾ: ಕಾರ್ತಿಕೇಯ 2 (ಚಂದೂ ಮೊಂಡೇಟಿ)

ಅತ್ಯುತ್ತಮ ತಮಿಳು ಸಿನಿಮಾ: ಪೊನ್ನಿಯಿನ್ ಸೆಲ್ವನ್ 1 (ಮಣಿರತ್ನಂ)

ಅತ್ಯುತ್ತಮ ಪಂಜಾಬಿ ಸಿನಿಮಾ: ಭಾಗಿ ದೀ ಧೀ (ಮುಖೇಶ್ ಗೌತಮ್)

ಅತ್ಯುತ್ತಮ ಒಡಿಯಾ ಸಿನಿಮಾ: ದಮನ್ (ವಿಶಾಲ್-ದೇಬಿ)

ಅತ್ಯುತ್ತಮ ಮಲಯಾಳಂ ಸಿನಿಮಾ: ಸೌದಿ ವೆಲಕ್ಕ ಸಿಸಿ 225/2009 (ತರುಣ್ ಮೂರ್ತಿ)

ಅತ್ಯುತ್ತಮ ಮರಾಠಿ ಸಿನಿಮಾ: ವಾಲ್ವಿ (ಪರೇಶ್ ಮೊಕಾಶಿ)

ಅತ್ಯುತ್ತಮ ಹಿಂದಿ ಸಿನಿಮಾ: ಗುಲ್​ಮೊಹರ್ (ರಾಹುಲ್ ಚಿತ್ತಾಲ)

ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಬೇರಿ ಅಂತರ್ಧನ (ಕೌಶಿಕ್ ಗಂಗೂಲಿ)

ಅತ್ಯುತ್ತಮ ಅಸ್ಸಾಮಿ ಸಿನಿಮಾ: ಎಮುತಿ ಮುತಿ (ಕುಲನಂದಿ)

ಅತ್ಯುತ್ತಮ ಆಕ್ಷನ್ : ಅನ್ಬರಿವ್ (ಕೆಜಿಎಫ್ 2)

ಅತ್ಯುತ್ತಮ ನೃತ್ಯ: ಜಾನಿ ಮಾಸ್ಟರ್-ಸತೀಶ್ (ತಿರುಚಿತ್ರಂಬಳಂ-ತಮಿಳು)

ಅತ್ಯುತ್ತಮ ಸಾಹಿತ್ಯ: ನೌಶದ್ ಸಾದರ್ ಖಾನ್ (ಫೌಜಾ-ಹರಿಯಾಣ)

ಅತ್ಯುತ್ತಮ ಸಂಗೀತ (ಹಾಡು): ಪ್ರೀತಂ (ಬ್ರಹ್ಮಾಸ್ತ್ರ-ಹಿಂದಿ)

ಅತ್ಯುತ್ತಮ ಹಿನ್ನೆಲೆ ಸಂಗೀತ: ಎಆರ್ ರೆಹಮಾನ್ (ಪೊನ್ನಿಯಿನ್ ಸೆಲ್ವನ್ 1)

ಅತ್ಯುತ್ತಮ ಮೇಕಪ್: ಸೋಮನಾಥ್ ಕುಂಡು (ಅಪರಾಜಿತೊ-ಬೆಂಗಾಲಿ)

ಅತ್ಯುತ್ತಮ ವಸ್ತ್ರ ವಿನ್ಯಾಸ: ನಿಕ್ಕಿ ಜೋಶಿ (ಕಚ್ ಎಕ್ಸ್​ಪ್ರೆಸ್-ಗುಜರಾತಿ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಆನಂದ್ ಅಧ್ಯಾಯ (ಅಪರಾಜಿತೊ-ಬೆಂಗಾಲಿ)

ಅತ್ಯುತ್ತಮ ಸಂಕಲನ: ಮಹೇಶ್ ಭುವನೇಂದ್ (ಆಟಂ-ಮಲಯಾಳಂ)

ಅತ್ಯುತ್ತಮ ಶಬ್ದ ವಿನ್ಯಾಸ: ಆನಂದ್ ಕೃಷ್ಣಮೂರ್ತಿ (ಪೊನ್ನಿಯಿನ್ ಸೆಲ್ವನ್ 1-ತಮಿಳು)

ಅತ್ಯುತ್ತಮ ಚಿತ್ರಕತೆ: ಆನಂದ್ ಎಕರ್ಶಿ (ಆಟಂ-ಮಲಯಾಳಂ)

ಅತ್ಯುತ್ತಮ ಸಂಭಾಷಣೆ: ಅರ್ಪಿತಾ-ರಾಹುಲ್ (ಗುಲ್​ಮೊಹರ್-ಹಿಂದಿ)

ಅತ್ಯುತ್ತಮ ಸಿನಿಮಾಟೊಗ್ರಫಿ: ರವಿ ವರ್ಮ (ಪೊನ್ನಿಯಿನ್ ಸೆಲ್ವನ್ 1-ತಮಿಳು)

ಅತ್ಯುತ್ತಮ ಗಾಯಕಿ: ಬಾಂಬೆ ಜಯಶ್ರೀ (ಚಾಯುಂ ವೆಲ್ಲಿ, ‘ಸೌದಿ ವೆಲ್ಲಕ’ ಮಲಯಾಳಂ ಸಿನಿಮಾ)

ಅತ್ಯುತ್ತಮ ಗಾಯಕ: ಅರಿಜಿತ್ ಸಿಂಗ್ (ಕೇಸರಿಯಾ-ಬ್ರಹ್ಮಾಸ್ತ್ರ ಸಿನಿಮಾ-ಹಿಂದಿ)

ಅತ್ಯುತ್ತಮ ಬಾಲನಟ: ಶ್ರೀಪತ್ (ಮಲ್ಲಿಕಾಪುರಂ-ಮಲಯಾಳಂ)

ಅತ್ಯುತ್ತಮ ಪೋಷಕ ನಟಿ: ನೀನಾ ಗುಪ್ತಾ (ಊಂಚಾಯಿ-ಹಿಂದಿ)

ಅತ್ಯುತ್ತಮ ಪೋಷಕ ನಟ: ಪವನ್ ರಾಜ್ ಮಲ್ಹೋತ್ರಾ (ಫೌಜಾ-ಹರಿಯಾಣ್ವಿ)

ಅತ್ಯುತ್ತಮ ನಟಿ: ನಿತ್ಯಾ ಮೆನನ್ (ತಿರುಚಿತ್ರಬಲಂ-ತಮಿಳು)

ಮಾನಸಿ ಪಾರೆಖ್ (ಕಚ್ ಎಕ್ಸ್​ಪ್ರೆಸ್ -ಗುಜರಾತಿ)

ಅತ್ಯುತ್ತಮ ನಟ: ರಿಷಬ್ ಶೆಟ್ಟಿ (ಕಾಂತಾರ-ಕನ್ನಡ)

ಅತ್ಯುತ್ತಮ ನಿರ್ದೇಶಕ: ಸೂರಜ್ ಬರ್ಜಾತಿಯಾ (ಊಂಚಾಯಿ)

ಅತ್ಯುತ್ತಮ ಅನಿಮೇಷನ್: ಬ್ರಹ್ಮಾಸ್ತ್ರ-ಹಿಂದಿ

ಅತ್ಯುತ್ತಮ ಸಾಮಾಜಿಕ ಸಂದೇಶ ಸಿನಿಮಾ: ಕಚ್ ಎಕ್ಸ್​ಪ್ರೆಸ್-ಗುಜರಾತ್

ಅತ್ಯುತ್ತಮ ಸಿನಿಮಾ (ಮನೊರಂಜನೆ): ಕಾಂತಾರ-ಕನ್ನಡ

ಅತ್ಯುತ್ತಮ ಹೊಸ ನಿರ್ದೇಶಕ: ಪ್ರಮೋದ್ (ಫೌಜ-ಹರಿಯಾಣ್ವಿ)

ಅತ್ಯುತ್ತಮ ಸಿನಿಮಾ:  ಆಟಂ-ಮಲಯಾಳಂ

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!