ಕಳೆದೆರಡು ದಿನಗಳ ಹಿಂದೆಯಷ್ಟೆ ಕಲ್ಕತ್ತಾ ಹೈಕೋರ್ಟ್ 2010 ರ ಬಳಿಕ ಪಶ್ಚಿಮ ಬಂಗಾಳದಲ್ಲಿ ನೀಡಲಾದ ಎಲ್ಲಾ OBC ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಇದಾದ ಬಳಿಕ ಪಶ್ಚಿಮ ಬಂಗಾಳದ ಆಡಳಿತರೂಡ ಟಿಎಂಸಿ (TMC) ಪಕ್ಷದ ವಿರುದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ನಾನು ಬದುಕಿರುವವರೆಗೂ ದಲಿತರು ಹಾಗೂ ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಹರ್ಯಾಣದ ಭಿವಾನಿಯಲ್ಲಿ ಚುನಾವಣಾ ನಿಮಿತ್ತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪಕ್ಷ ರಾಜ್ಯದಲ್ಲಿ ರಾತ್ರೋರಾತ್ರಿ ಮುಸ್ಲೀಮರಿಗೆ ಹಾಗೂ ನುಸುಳುಕೋರರಿಗೆ ಒಬಿಸಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಆದರೆ 2010ರ ಬಳಿಕ ಮುಸ್ಲೀಂರಿಗೆ ನೀಡಿದ ಎಲ್ಲಾ ಒಬಿಸಿ ಪ್ರಮಾಣ ಪತ್ರಗಳನ್ನು ಹೈಕೋರ್ಟ್ ಅಸಿಂದುಗೊಳಿಸಿದೆ. ಕಾಂಗ್ರೆಸ್, ಟಿಎಂಸಿ ಹಾಗೂ ಇಂಡಿಯಾ ಮೈತ್ರಿಕೂಟದ ಇತರೆ ಪಕ್ಷಗಳು ಅವರ ಮತಬ್ಯಾಂಕ್ ಅನ್ನು ಬೆಂಬಲಿಸುತ್ತಿವೆ. ಇಂದು ಮೋದಿ ಬದುಕಿರುವವರೆಗೂ ದಲಿತರು ಹಾಗೂ ಬುಡಕಟ್ಟು ಜನಾಂಗದ ಹಕ್ಕುಗಳನ್ನು ಮೀಸಲಾತಿಯನ್ನು ಕಸಿದುಕೊಳ್ಳು ಯಾರಿಂದಲೂ ಸಾಧ್ಯವಿಲ್ಲ. ನಿಮಗೆ ಭರವಸೆ ನೀಡಲು ನಾನಿಲ್ಲಿದ್ದೇನೆ. ಮೋದಿ ವಂಚಿತರ ಹಕ್ಕುಗಳ ಕಾವಲುಗಾರನಾಗಿದ್ದಾನೆ. ಇದೊಂದು ರಾಜಕೀಯ ಭಾಷವಣಲ್ಲ, ಬದಲಿಗೆ ಇದು ಮೋದಿಯವರ ಗ್ಯಾರಂಟಿ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ವಿರುದ್ದ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೇಸ್ ಹಾಗೂ ಇಂಡಿಯಾ ಮೈತ್ರಿಕೂಟದ ನಾಯಕರಿಗೆ ದೇಶಕ್ಕಿಂತ ಅವರ ಮತ ಬ್ಯಾಂಕ್ ಮುಖ್ಯವಾಗಿದೆ. ಅವರು ತಮ್ಮ ಮತ ಬ್ಯಾಂಕ್ ಗಾಗಿ ದೇಶವನ್ನು ವಿಭಜನೆ ಮಾಡಿದ್ದಾರೆ. ಒಂದಾಗಿದ್ದ ಭಾರತವನ್ನು ಎರಡು ಮುಸ್ಲೀಂ ರಾಷ್ಟ್ರಗಳಾಗಿ ರಚನೆ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಕಳೆದ ಬುಧವಾರ ಪಶ್ಚಿಮ ಬಂಗಾಳದಲ್ಲಿ 2010ರ ಬಳಿಕ ನೀಡಲಾದ ಎಲ್ಲಾ ಒಬಿಸಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿದೆ. ಜೊತೆಗೆ 1993ರ ಕಾಯ್ದೆಯಂತೆ ಒಬಿಸಿಗಳ ಹೊಸ ಪಟ್ಟಿಯನ್ನು ತಯಾರಿಸುವಂತೆ ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿರ್ದೇಶನ ನೀಡಿದೆ.