Sunday, December 21, 2025
HomeNationalAccident : ನಾಗ್ಪುರದಲ್ಲಿ ಹೃದಯ ಕಲುಕುವ ಘಟನೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಬೈಕ್‌ನಲ್ಲಿ...

Accident : ನಾಗ್ಪುರದಲ್ಲಿ ಹೃದಯ ಕಲುಕುವ ಘಟನೆ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಶವವನ್ನು ಬೈಕ್‌ನಲ್ಲಿ ಕೊಂಡೊಯ್ದ ಪತಿ..!

Accident – ಮನುಷ್ಯತ್ವ ಸತ್ತುಹೋಗಿದೆ ಎಂಬ ಮಾತಿಗೆ ಜೀವಂತ ನಿದರ್ಶನ ನಾಗ್ಪುರದಲ್ಲಿ ನಡೆದ ಒಂದು ಘಟನೆ. ರಕ್ಷಾ ಬಂಧನ ಹಬ್ಬದಂದು ತಮ್ಮ ತವರೂರಿಗೆ ತೆರಳುತ್ತಿದ್ದ ದಂಪತಿಗೆ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಸಂದರ್ಭದಲ್ಲಿ ಆತ ಮಾಡಿದ ಕಾರ್ಯ ನಿಜಕ್ಕೂ ಮನ ಕಲುಕುವಂತಿದೆ. ಮನುಷ್ಯತ್ವ ಮರೆತು ನಡೆದುಕೊಳ್ಳುತ್ತಿರುವ ಈ ಕಾಲದಲ್ಲಿ, ನಾವೆಲ್ಲರೂ ಯೋಚಿಸಬೇಕಾದ ಒಂದು ಘಟನೆ ಇದು.

Heartbroken husband carrying wife’s dead body on bike after Nagpur Raksha Bandhan accident

Accident – ರಕ್ಷಾ ಬಂಧನ ಹಬ್ಬಕ್ಕೆ ತವರೂರಿಗೆ ಪಯಣ

ಮಧ್ಯಪ್ರದೇಶದ ಸಿಯೋನಿಯಾ ಮೂಲದ ಅಮಿತ್ ಯಾದವ್ ಮತ್ತು ಅವರ ಪತ್ನಿ ಗ್ಯಾರ್ಸಿ ಅಮಿತ್ ಯಾದವ್, ಕಳೆದ 10 ವರ್ಷಗಳಿಂದ ನಾಗ್ಪುರ ಜಿಲ್ಲೆಯ ಕೊರಾಡಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು. ರಕ್ಷಾ ಬಂಧನ ಹಬ್ಬದ ದಿನ ತಮ್ಮ ತವರು ಮನೆಗೆ ತೆರಳಲು ಲೋನಾರಾದಿಂದ ಕರಣಪುರಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಆದರೆ, ವಿಧಿ ಬೇರೆ ತರಹ ಇತ್ತು.

Accident – ಟ್ರಕ್ ಡಿಕ್ಕಿ, ಸ್ಥಳದಲ್ಲೇ ಸಾವು

ಮಧ್ಯಾಹ್ನ 12 ಗಂಟೆ ಸುಮಾರಿಗೆ ದಿಯೋಲಾಪರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋರ್ಫಾಟಾ ಬಳಿ ಇರುವ ನಾಗ್ಪುರ-ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರಿದ್ದ ಬೈಕ್‌ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ 35 ವರ್ಷ ವಯಸ್ಸಿನ ಗ್ಯಾರ್ಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. Read this also : ರಕ್ಷಾ ಬಂಧನದ ದಿನವೇ ದುರಂತ: ಅಕ್ಕನಿಂದ ರಾಖಿ ಕಟ್ಟಿಸಿಕೊಂಡು ಹಿಂದಿರುಗುತ್ತಿದ್ದ ಯುವಕ ಸಾವು

Heartbroken husband carrying wife’s dead body on bike after Nagpur Raksha Bandhan accident

ಅಸಹಾಯಕ ಪತಿಗೆ ಸಹಾಯ ಮಾಡದ ಜನ

ಅಪಘಾತವಾದ ಕೂಡಲೇ ಅಮಿತ್ ಯಾದವ್ ತಮ್ಮ ಪತ್ನಿಗೆ ಸಹಾಯ ಮಾಡಲು ಹಾಗೂ ಮೃತದೇಹವನ್ನು ಸಾಗಿಸಲು ದಾರಿಹೋಕರ ಬಳಿ ಸಹಾಯ ಕೋರಿದ್ದಾರೆ. ಆದರೆ, ಮಾನವೀಯತೆಯನ್ನು ಮರೆತು ಯಾರು ಕೂಡ ಸಹಾಯಕ್ಕೆ ನಿಂತಿಲ್ಲ. ಇದರಿಂದ ನೊಂದು, ಕಣ್ಣೀರಿಡುತ್ತಾ ಅಮಿತ್ ತನ್ನ ಬೈಕ್‌ನಲ್ಲಿಯೇ ಪತ್ನಿಯ ಮೃತದೇಹವನ್ನು ಇಟ್ಟುಕೊಂಡು ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ತಮ್ಮ ಊರಿನ (Accident) ಕಡೆಗೆ ಪಯಣ ಬೆಳೆಸಿದ್ದಾರೆ.

ಪೊಲೀಸರ ಕಾರ್ಯಚರಣೆ

ಮೃತದೇಹದ ಜೊತೆ ಬೈಕ್‌ನಲ್ಲಿ ಹೋಗುತ್ತಿದ್ದ (Accident) ಅಮಿತ್ ಯಾದವ್ ಅವರನ್ನು ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಲವು ವಾಹನ ಸವಾರರು ವಿಡಿಯೋ ಮಾಡಿದ್ದಾರೆ. ಈ ಸುದ್ದಿ ಪೊಲೀಸರಿಗೆ ತಲುಪಿದಾಗ, ಅವರು ಅಮಿತ್ ಯಾದವ್‌ನನ್ನು ಬೆನ್ನಟ್ಟಿದ್ದಾರೆ. ಒಂದು ಸ್ವಲ್ಪ ದೂರ ಹೋದ ನಂತರ ಅವನನ್ನು ನಿಲ್ಲಿಸಿ, ಮೃತದೇಹವನ್ನು ನಾಗ್ಪುರದ ಮಾಯೋ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular