Thursday, November 21, 2024

NABARD Recruitment 2024: ನಬಾರ್ಡ್ ಬ್ಯಾಂಕ್ ನಲ್ಲಿದೆ ಆಫೀಸ್ ಅಟೆಂಡೆಂಟ್ ಹುದ್ದೆಗಳು, ಅ.21 ಕೊನೆಯ ದಿನ….!

ನಬಾರ್ಡ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಬಯಸುವಂತಹ ನಿರುದ್ಯೋಗಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ಗ್ರಾಮೀಣ ಭಾಗಗಳ ಅಭಿವೃದ್ದಿಗಾಗಿ ಮೀಸಲಿರುವ ಪ್ರತಿಷ್ಠಿತ ರಾಷ್ಟ್ರೀಕೃತ ನಬಾರ್ಡ್ ಬ್ಯಾಂಕ್ (National Bank for Agriculture and Rural Development -NABARD) ನಲ್ಲಿ ಖಾಲಿಯಿರುವ 108 ಹುದ್ದೆಗಳನ್ನು ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅ.2 ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅ.21 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಅಧಿಸೂಚನೆಯಲ್ಲಿರುವ ಇತರೆ ಪ್ರಮುಖ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

NABARD Office Attendant Recruitment 2024 0

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್- ನಬಾರ್ಡ್ ನಲ್ಲಿ ಖಾಲಿಯಿರುವ ಒಟ್ಟು 108 ಆಫೀಸ್ ಅಟೆಂಡೆಂಟ್ (ಗ್ರೂಪ್-ಸಿ) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದಿನಾಂಕ 02.10.2024 ರಿಂದ 21.10.2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.ಈ ಹುದ್ದೆಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಸೇರಿದಂತೆ ಇತರೆ ಪ್ರಮುಖ ವಿವರಗಳನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ NABARD ಅಧಿಕೃತ ವೆಬ್ ಸೈಟ್ ನೋಡಬಹುದು.

NABARD Office Attendant Recruitment 2024 1

  • ಹುದ್ದೆಗಳ ಸಂಖ್ಯೆ: 108 ಹುದ್ದೆಗಳ ಹೆಸರು: ಆಫೀಸ್ ಅಟೆಂಡೆಂಟ್ (ಗ್ರೂಪ್ – ಸಿ)
  • ವಯಸ್ಸಿನ ಮಿತಿ: (01.10.2 ರಂತೆ 18 ರಿಂದ 30 ವರ್ಷಗಳು, ವೇತನ ಶ್ರೇಣಿ: ರೂ. 35000/-
  • ವಿದ್ಯಾರ್ಹತೆ: ಮೆಟ್ರಿಕ್ಯುಲೇಷನ್ (ಎಸ್​ಎಸ್​ಎಲ್​​ಸಿ) ಉತ್ತೀರ್ಣರಾಗಿರಬೇಕು.
  • ಅರ್ಜಿ ಶುಲ್ಕ: ರೂ. 450/- ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ಮತ್ತು ರೂ. SC/ST/PwD ಅಭ್ಯರ್ಥಿಗಳಿಗೆ ರೂ.50/-. ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ / ಯುಪಿಐ ಮೂಲಕ ಆನ್‌ಲೈನ್ ಮೂಲಕ ಪಾವತಿಸಬೇಕು.
  • ಆಯ್ಕೆ ಪ್ರಕ್ರಿಯೆ: ಪೂರ್ವಭಾವಿ ಪರೀಕ್ಷೆ ಮುಖ್ಯ ಪರೀಕ್ಷೆ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) ವೈದ್ಯಕೀಯ ಪರೀಕ್ಷೆ ಡಾಕ್ಯುಮೆಂಟ್ ಪರಿಶೀಲನೆ.
  • ಅರ್ಜಿ ಹಾಕುವುದು ಹೇಗೆ: ಅರ್ಹ/ ಆಸಕ್ತ ಅಭ್ಯರ್ಥಿಗಳು ಕೆಳಗಿನ ಲಿಂಕ್ ಅನ್ನು ಬಳಸಿಕೊಂಡು 02.10.2024 ರಿಂದ 21.10.2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನಬಾರ್ಡ್ ಆಫೀಸ್ ಅಟೆಂಡೆಂಟ್ ನೇಮಕಾತಿ 2024 ರ ಪ್ರಮುಖ ದಿನಾಂಕಗಳು: ಪ್ರಾರಂಭ ದಿನಾಂಕ: 02.10.2024 ಕೊನೆಯ ದಿನಾಂಕ: 21.10.2024
by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!