ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ (Street Dog Menace) ವಿಪರೀತವಾಗಿದೆ ಅಲ್ವಾ? ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಒಂಟಿಯಾಗಿ ಸಿಕ್ಕರೆ ಸಾಕು, ನಾಯಿಗಳು ಮುಗಿಬಿದ್ದು ಕಚ್ಚುತ್ತಿವೆ. ನಾಯಿಗಳ ದಾಳಿಗೆ ಎಷ್ಟೋ ಜನ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ನಮ್ಮ ಕಣ್ಣಮುಂದಿವೆ. ಇದೀಗ ಅಂತಹದ್ದೇ ಒಂದು ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Street Dog – ಘಟನೆ ಎಲ್ಲಾಗಿದ್ದು? ಏನಿದು ಪ್ರಕರಣ?
ಶಾಲೆಯೊಂದರ ಸೆಕ್ಯುರಿಟಿ ಗಾರ್ಡ್ ಮೇಲೆ ಬೀದಿ ನಾಯಿಯೊಂದು ಅನಿರೀಕ್ಷಿತವಾಗಿ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದರೆ ಎಂಥವರ ಎದೆಯೂ ಒಮ್ಮೆ ಝಲ್ಲೆನ್ನುತ್ತದೆ. ಈ ಘಟನೆ ನಡೆದಿರುವುದು ಮುಂಬೈನ ಗೋರೆಗಾಂವ್ (Goregaon) ಪ್ರದೇಶದಲ್ಲಿ. ಇಲ್ಲಿನ ಸಿದ್ಧಾರ್ಥ್ ನಗರದಲ್ಲಿರುವ ‘ಆದರ್ಶ್ ವಿದ್ಯಾಲಯ’ ಶಾಲೆಯ ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
Street Dog – ಸಿಸಿಟಿವಿಯಲ್ಲಿ ಏನಿದೆ?
ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ, ಸಮಯ ಸುಮಾರು ಬೆಳಗ್ಗೆ 9.40 ಆಗಿರುತ್ತದೆ (ಡಿಸೆಂಬರ್ 11, ಗುರುವಾರ). ಶಾಲೆಯ ಗೇಟ್ ಬಳಿ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಕುಳಿತು ಮಾತನಾಡುತ್ತಿರುತ್ತಾರೆ. ಈ ವೇಳೆ ಏಕಾಏಕಿ ಬಂದ ಬೀದಿ ನಾಯಿಯೊಂದು, ಕುಳಿತಿದ್ದ ಸೆಕ್ಯುರಿಟಿ ಗಾರ್ಡ್ ಮೇಲೆ ಜಿಗಿದು ದಾಳಿ ಮಾಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನಾಯಿ ನೇರವಾಗಿ ಗಾರ್ಡ್‌ನ ಕುತ್ತಿಗೆಯ ಭಾಗಕ್ಕೆ ಟಾರ್ಗೆಟ್ ಮಾಡಿದಂತೆ ಕಂಡರೂ, ಅದೃಷ್ಟವಶಾತ್ ಅದು ಅವರ ಭುಜವನ್ನು ಕಚ್ಚಿದೆ. ತಕ್ಷಣವೇ ಎಚ್ಚೆತ್ತುಕೊಂಡ ಗಾರ್ಡ್ ಮತ್ತು ಪಕ್ಕದಲ್ಲಿದ್ದ ಮತ್ತೊಬ್ಬ ಸಿಬ್ಬಂದಿ ನಾಯಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಮತ್ತೊಬ್ಬ ಗಾರ್ಡ್ ನಾಯಿಯ ಮೇಲೆ ಪ್ರತಿದಾಳಿ ನಡೆಸಿ ಅದನ್ನು ಓಡಿಸುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. Read this also : ಬೀದಿ ನಾಯಿಗಳ ಭಯಾನಕ ದಾಳಿ, ಪವಾಡಸದೃಶವಾಗಿ ಪಾರಾದ ಕಾಲೇಜು ವಿದ್ಯಾರ್ಥಿನಿ..!

Street Dog – ನೆಟ್ಟಿಗರ ಆಕ್ರೋಶ
ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಮುನ್ಸಿಪಲ್ ಕಾರ್ಪೊರೇಶನ್ ಅಧಿಕಾರಿಗಳ ವಿರುದ್ಧ ಕಿಡಿಕಾರುತ್ತಿದ್ದಾರೆ. “ಶಾಲಾ ಆವರಣದಲ್ಲೇ ಹೀಗಾದರೆ, ಇನ್ನು ದಾರಿಯಲ್ಲಿ ಓಡಾಡುವ ಮಕ್ಕಳ ಗತಿಯೇನು?” ಎಂದು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ.
