ಇಂದಿನ ದಿನಗಳಲ್ಲಿ ಅನೇಕರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಕಾರಣದಿಂದ ತಮ್ಮನ್ನೇ ನಂಬಿಕೊಂಡ ಕುಟುಂಬಗಳು ಬೀದಿಗೆ ಬರುವಂತಹ ಪರಿಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ (Road Safety) ಸಂಚಾರಿ ನಿಯಮಗಳನ್ನು ಪಾಲನೆ ಮಾಡುವ ಮೂಲಕ ತಮ್ಮನ್ನು ನಂಬಿಕೊಂಡ ಕುಟುಂಬಕ್ಕೆ ಆಸರೆಯಾಗಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮಕ್ಕೆ (Road Safety) ಚಾಲನೆ ನೀಡಿ ಮಾತನಾಡಿದರು.

Road Safety – ವಾಹನ ಸವಾರರು ಸಂಚಾರಿ ನಿಯಮ ಪಾಲಿಸಿ
ಇಂದು ಹರಿನಾಥರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುಡಿಬಂಡೆಯ ಹಂಪಸಂದ್ರ ಹಾಗೂ ತಿರುಮಣಿ ಗ್ರಾ.ಪಂ ಗಳ ವ್ಯಾಪ್ತಿಯ ದ್ವಿಚಕ್ರ ವಾಹನ ಸವಾರರಿಗೆ ಉಚಿತವಾಗಿ ಹೆಲ್ಮೆಟ್ ಗಳನ್ನು ವಿತರಣೆ ಮಾಡಲಾಗಿದೆ. ದ್ವಿಚಕ್ರ ವಾಹನಗಳನ್ನು ಚಲಾಯಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಬೇಕು, ವೀಲ್ಹಿಂಗ್ ಮಾಡಬಾರದು. ತಮ್ಮ ಸಣ್ಣ ತಪ್ಪುಗಳಿಂದ ಇಂದು ತಾವು ಪ್ರಾಣ ಕಳೆದುಕೊಳ್ಳುವುದರ ಜೊತೆಗೆ ತಮ್ಮ ಕುಟುಂಬವನ್ನು (Road Safety) ಅನಾಥರನ್ನಾಗಿ ಮಾಡುವ ಕೆಲಸ ಆಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಇಂದು ಕೊಟ್ಟಂತಹ ಹೆಲ್ಮೆಟ್ ಗಳನ್ನು ಮನೆಯಲ್ಲಿಡದೇ ದ್ವಿಚಕ್ರ ವಾಹನ ಏರಿದ ಕೂಡಲೇ ಧರಿಸುವಂತಹ ಕೆಲಸ ಮಾಡಬೇಕು. ನಿಮ್ಮನ್ನು ನಂಬಿಕೊಂಡ ಕುಟುಂಬವನ್ನು ಮನದಲ್ಲಿಟ್ಟುಕೊಂಡು ವಾಹನ ಚಲಾಯಿಸಬೇಕು ಎಂದು ಕಿವಿ ಮಾತು ಹೇಳಿದರು.

ಮುಂದಿನ ಚುನಾವಣೆಗಳಲ್ಲಿ ಎನ್.ಡಿ.ಎ ಜಯಭೇರಿ
ಬಳಿಕ ಮುಖಂಡ ಹರಿನಾಥರೆಡ್ಡಿ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರ ವ್ಯಾಫ್ತಿಯಲ್ಲಿ ಅನೇಕರು ಬಡವರಾಗಿದ್ದಾರೆ. ಹೆಚ್ಚಾಗಿ ದ್ವಿಚಕ್ರ ವಾಹನಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಚಿಕ್ಕಬಳ್ಳಾಪುರ ಎಸ್.ಪಿ ರವರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಮಾಡಿದ್ದಾರೆ. ನನ್ನ ಕ್ಷೇತ್ರದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ನೀಡಲು ಸಂಸದರಾದ ಸುಧಾಕರ್ ರವರು ತಿಳಿಸಿದ್ದರು. ಅವರ ಸಲಹೆಯಂತೆ ಇಡೀ ಕ್ಷೇತ್ರದಲ್ಲಿ ಎಷ್ಟು ಹೆಲ್ಮೆಟ್ ಗಳು ಬೇಕಾದರೂ ನಾನು ಕೊಡಲು ಸಿದ್ದನಿದ್ದೇನೆ.
ಇನ್ನೂ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರು ಅಭಿವೃದ್ದಿ ಮಾಡುತ್ತಿಲ್ಲ. ಅವರನ್ನು ಕೆಳಗಿಳಿಸಲು ಜನರು ನಿರ್ಧಾರ ಮಾಡಿದ್ದಾರೆ. ಅದರ ಭಾಗವಾಗಿಯೇ ಇಂದು ಪಿ.ಎಲ್.ಡಿ, ಡಿಸಿಸಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎನ್.ಡಿ.ಎ ಜರಭೇರಿ ಬಾರಿಸಿದೆ. ಅದರಂತೆ ಮುಂಬರುವಂತಹ ಎಲ್ಲಾ ಚುನಾವಣೆಗಳಲ್ಲಿ ಎನ್.ಡಿ.ಎ ಖಚಿತವಾಗಿ ಜಯಗಳಿಸುತ್ತದೆ. ಅದಕ್ಕೆ ಸಂಸದರಾದ ಸುಧಾಕರ್ ರವರ ಸಹಕಾರ ಅಗತ್ಯವಾಗಿದೆ ಜೊತೆಗೆ ನಾನೂ ಸಹ ಎನ್.ಡಿ.ಎ ಗೆಲುವಿಗೆ ಕೈ ಜೋಡಿಸುತ್ತೇನೆ ಎಂದರು. Read this also : ಅಮೂಲ್ಯ ಜೀವ ಉಳಿಸಲು ಹೆಲ್ಮೆಟ್ ಧರಿಸುವ ಅಭ್ಯಾಸ ರೂಢಿಸಿಕೊಳ್ಳಿ : ಸಿ. ಮುನಿರಾಜು

ಕಾರ್ಯಕ್ರಮದಲ್ಲಿ ಹಾಜರಿದ್ದವರು
ಈ ಸಮಯದಲ್ಲಿ (Road Safety) ವಕ್ಕಲಿಗರ ಸಂಘದ ಕೋನಪ್ಪರೆಡ್ಡಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ವಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹೆಚ್.ಮಂಜುನಾಥರೆಡ್ಡಿ, ಮುಖಂಡರಾದ ಚಂದ್ರಶೇಖರರೆಡ್ಡಿ, ಪಾವಜೇನಹಳ್ಳಿ ನಾಗರಾಜರೆಡ್ಡಿ, ತಟ್ಟಹಳ್ಳಿ ಮದ್ದರೆಡ್ಡಿ, ಚೆಂಡೂರು ರಾಮಾಂಜಿ, ಪಾಪಣ್ಣ, ಚಲಪತಿ, ಮಾಚಹಳ್ಳಿ ಶಿವಣ್ಣ ಸೇರಿದಂತೆ ಹಲವರು ಇದ್ದರು.
