Thursday, November 21, 2024

ಪತಿಯ ಮೇಲಿನ ಕೋಪಕ್ಕೆ, ಮಲಗಿದ್ದ ಮಗುವನ್ನು ನಾಲೆಗೆ ಎಸೆದ ಪಾಪಿ ತಾಯಿ, ನಾಲೆಯಲ್ಲಿನ ಮೊಸಳೆಗೆ ಆಹಾರವಾದ ಮಗು…!

ಪತಿ-ಪತ್ನಿ ಜಗಳ ಉಂಡು ಮಲಗುವ ತನಕ ಎಂದು ಹೇಳಲಾಗುತ್ತದೆ. ಆದರೆ ಕೆಲವೊಮ್ಮೆ ಆ ಜಗಳ ವಿಕೋಪಕ್ಕೆ ಸಹ ತಿರುಗುತ್ತಿರುತ್ತದೆ. ಇಲ್ಲೊಂದು ಘಟನೆಯನ್ನು ಕೇಳಿದರೇ ಕರಳು ಕಿತ್ತುಬರುವಂತಿದೆ. ಕುಡುಕನಾಗಿರುವ ಗಂಡ ಕುಡಿದು ಬಂದು ಜಗಳ ಮಾಡುತ್ತಿದ್ದ ಎಂದು ಬೇಸತ್ತು, ಮನೆಯಲ್ಲಿ ಮಲಗಿದ್ದ ಮಗವುನ್ನು ಎತ್ತಿಕೊಂಡು ಹೋಗಿ ನೀರಿನ ನಾಲೆಗೆ ಎಸೆದಿದ್ದಾಳೆ. ಇದನ್ನು ನೋಡಿದ ಗ್ರಾಮಸ್ಥರು ಓಡಿ ಹೋಗಿ ನಾಲೆ ಬಳಿ ಮಗುವನ್ನು ಹುಡುಕಿದರೇ ಆ ಮಗುವನ್ನು ಮೊಸಳೆ ತಿನ್ನುತ್ತಿರುವ ಮನಕಲಕುವ ದೃಶ್ಯ ಕಂಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಹಾಲಮಡ್ಡಿ ಸಮೀಪದಲ್ಲಿ ಈ ಘಟನೆ ನಡೆದಿದೆ. ವಿನೋದ್ (6) ಎಂಬಾ ಬಾಲಕನೇ ಮೃತ ದುರ್ದೈವಿಯಾಗಿದ್ದಾನೆ. ದಾಂಡೇಲಿಯ ನಿವಾಸಿಗಳಾದ ರವಿಕುಮಾರ್‍ ಹಾಗೂ ಸಾವಿತ್ರ ಎಂಬ ದಂಪತಿಯ ಪುತ್ರನೇ ಮೃತ ವಿನೋದ್. ಈ ಜೋಡಿಗೆ ಮದುವೆಯಾದ ಕೆಲವು ವರ್ಷಗಳಲ್ಲಿ ವಿನೋದ್ ಜನಿಸಿದ್ದಾನೆ. ಆದರೆ ಮಗುವಿಗೆ ಮಾತು ಬರುತ್ತಿರಲಿಲ್ಲವಂತೆ. ಇದರಿಂದ ಕೋಪಗೊಂಡ ರವಿಕುಮಾರ್‍ ಕುಡಿದು ಬಂದಾಗಲೆಲ್ಲಾ ಮಾತು ಬಾರದ ಮಗು ಸತ್ತು ಹೋಗಬಾರದೇ ಎಂದು ಹೆಂಡತಿಗೆ ಬೈಯುತ್ತಿದ್ದನಂತೆ. ಈ ಕಾರಣದಿಂದ ಸಾವಿತ್ರಿ ಕೋಪದಿಂದ ಮನೆಯಲ್ಲಿ ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿ ನಾಲೆಗೆ ಎಸೆದು ಬಂದಿದ್ದಾಳೆ. ಇನ್ನೂ ಮನೆಯಲ್ಲಿ ಜಗಳ ಆಗುತ್ತಿರುವುದನ್ನು ಗಮನಿಸಿ ಅಕ್ಕಪಕ್ಕದ ಮನೆಯವರು ಜಗಳ ಮಾಡಿಕೊಂಡು ಸುಮ್ಮನಾಗುತ್ತಾರೆ ಎಂದು ಸುಮ್ಮನಿದ್ದರು.

mother thorne her baby in canal in dandeli 1

ಆದರೆ ಸಾವಿತ್ರಿ ಅಳುತ್ತಾ ಮನೆಯಿಂದ ಮಗುವನ್ನು ಎತ್ತಿಕೊಂಡು ಹೋಗಿದ್ದಾಳೆ. ಬರುವಾಗ ಒಬ್ಬಳೆ ಬಂದಳು. ಮನೆಗೆ ಬಂದು ಗಂಡನಿಗೆ ಮಗುವನ್ನು ನಾಲೆಗೆ ಎಸೆದು ಬಂದಿದ್ದಾಗಿ ಹೇಳಿದ್ದಾಳೆ. ಮಗುವನ್ನು ನೀರಿನ ನಾಲೆಗೆ ಎಸೆದಿದ್ದು, ಮಾತು ಬಾರದ ಮಗು ಮೂಕರೋಧನೆಯನ್ನು ಅನುಭವಿಸುತ್ತಾ ಮುಳುಗಿದೆ. ಈ ವೇಳೆ ನೀರಿನಲ್ಲಿದ್ದ ಮೊಸಳೆಯೊಂದು ಮಗುವನ್ನು ಎಳೆದುಕೊಂಡು ಹೋಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅಕ್ಕಪಕ್ಕದವರು ಮಗುವನ್ನು ಹುಡುಕಲು ನಾಲೆ ಬಳಿ ಹೋಗಿದ್ದಾರೆ. ಕೆಲ ಹೊತ್ತು ನಾಲೆಯ ಬಳಿ ಹುಡುಕಿದಾಗ ಮೊಸಳೆಯೊಂದು ಮಗುವನ್ನು ಕಚ್ಚಿಕೊಂಡು ಹೋಗುತ್ತಿರುವುದು ಕಾಣಿಸಿದೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ದಾಂಡೇಲಿಯ ಗ್ರಾಮೀಣ ಠಾಣೆಯ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದೊಂದಿಗೆ ಮಗುವಿನ ಮೃತದೇಹ ಹುಡುಕಿದ್ದಾರೆ. ಕೈ ತುಂಡಾಗಿರುವ ಸ್ಥಿತಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಮಗವಿನ ತಂದೆ ರವಿಕುಮಾರ್‍ ಹಾಗೂ ತಾಯಿ ಸಾವಿತ್ರಿಯನ್ನು ಬಂಧನ ಮಾಡಿ, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!