Friday, June 13, 2025
HomeNationalMother : ವಿಕೃತ ವರ್ತನೆಯಿಂದ ಬೇಸತ್ತ ತಾಯಿ, ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ್ಳು…!

Mother : ವಿಕೃತ ವರ್ತನೆಯಿಂದ ಬೇಸತ್ತ ತಾಯಿ, ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದ್ಳು…!

Mother – ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲೊಂದು ವಿಭಿನ್ನ ಘಟನೆ ನಡೆದಿದೆ. ತನ್ನ ಮಗನ ವಿಕೃತ ಹಾಗೂ ಅನುಚಿತ ವರ್ತನೆಯಿಂದ ಬೇಸತ್ತ ತಾಯಿ ಮಗನನ್ನು ತುಂಡು ತುಂಡಾಗಿ ಕತ್ತರಿಸಿದ್ದಾಳೆ. ಕಳೆದ ಫೆ.13 ರಂದು ಲಕ್ಷ್ಮೀ ದೇವಿ ಎಂಬ ಮಹಿಳೆ ತನ್ನ ಮಗ ಶ್ಯಾಂ ಪ್ರಸಾದ್ ಎಂಬಾತನನ್ನು ಕೊಲೆ ಮಾಡಿದ್ದಾಳೆ. ಆಕೆಯ ಸಂಬಂಧಿಕರೂ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಪ್ರಕಾಶಂ ಪೊಲೀಸ್ ವರಿಷ್ಠಾಧಿಕಾರಿ ಎ.ಆರ್‍.ದಾಮೋದರ್‍ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Mother murders son Shyam Prasad in Andhra Pradesh’s Prakasam district due to his criminal behavior

ಹೆತ್ತ ತಾಯಿಯೇ ತನ್ನ ಮಗನನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ್ದಾಳೆ. ಲಕ್ಷ್ಮೀದೇವಿ ಎಂಬ ಮಹಿಳೆಯೇ ಮಗನನ್ನು ಕೊಂದ ಆರೋಪಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಶ್ಯಾಂ ಪ್ರಸಾದ್ ಎಂದು ಗುರ್ತಿಸಲಾಗಿದೆ. ತನ್ನ ಮಗನ ವಿಕೃತ ಹಾಗೂ ಅನುಚಿತ ವರ್ತನೆಯಿಂದ ತಾಯಿ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ. ಮೃತ ಪ್ರಸಾದ್ ತಮ್ಮ ಸಂಬಂಧಿಕರ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ. ಜೊತೆಗೆ ತನ್ನ ತಾಯಿಯ ತಂಗಿ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದನಂತೆ. ಈ ಕಾರಣದಿಂದ ಆತನನ್ನು ಕೊಲೆ ಮಾಡಲಾಗಿದೆ, ಬಳಿಕ ಮೃತ ದೇಹವನ್ನು ಸಂಬಂಧಿಕರ ಸಹಾಯದೊಂದಿಗೆ ಕುಂಬಮ್ ಎಂಬ ಗ್ರಾಮದ ಬಳಿಯಿರುವ ನಕಲಗಂಡಿ ಕಾಲುವೆಯಲ್ಲಿ ಎಸೆಯಲಾಗಿತ್ತು ಎನ್ನಲಾಗಿದೆ.

Mother murders son Shyam Prasad in Andhra Pradesh’s Prakasam district due to his criminal behavior

ಇನ್ನೂ ಮೃತ ದೇಹದ ಭಾಗಗಳನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಕಾಳುವೆಗೆ ಎಸೆಯಲಾಗಿದ್ದು, ಇದನ್ನು ಗುರ್ತಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಬಳಿಕ ಪೊಲೀಸರು ಪರಿಶೀಲನೆ ನಡೆಸಿದಾಗ ಈ ಕೊಲೆಯ ಬಗ್ಗೆ ತಿಳಿದಿದೆ. ಇನ್ನೂ ತಮ್ಮ ಮಗ ಶ್ಯಾಮ್ ಕಾಣೆಯಾಗಿದ್ದಾನೆ ಎಂದು ಕಾಲೋನಿ ನಿವಾಸಿಗಳಿಗೆ ತಿಳಿಸಿದ್ದರು. ನಂತರ ಪೊಲೀಸರು ಮೃತನ ಕುಟುಂಬದ ಸದಸ್ಯರನ್ನು ಪ್ರಶ್ನೆ ಮಾಡಿದಾಗ ತಾಯಿ ಕೊಲೆ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಮದ್ಯದ ಚಟಕ್ಕೆ ಬಿದ್ದಿದ್ದ ಶ್ಯಾಮ್ ತನ್ನ ಮನೆಯಲ್ಲಿನ ಮಹಿಳೆಯರೊಂದಿಗೆ ದೌರ್ಜನ್ಯ ನಡೆಸುತ್ತಿದ್ದ ಮತ್ತು ಅವನ ಕುಟುಂಬ ಸದಸ್ಯರು ಈ ಕೊಲೆಗೆ ಕಾರಣರಾಗಿರಬಹುದು ಎನ್ನಲಾಗಿದ್ದು, ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular