Wednesday, January 28, 2026
HomeSpecialViral Video : ಅಮ್ಮನ ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಸರ್ಪ್ರೈಸ್: ಗಿಫ್ಟ್ ಬಾಕ್ಸ್ ತೆರೆದ ತಾಯಿ...

Viral Video : ಅಮ್ಮನ ಹುಟ್ಟುಹಬ್ಬಕ್ಕೆ ಮಗಳು ಕೊಟ್ಟ ಸರ್ಪ್ರೈಸ್: ಗಿಫ್ಟ್ ಬಾಕ್ಸ್ ತೆರೆದ ತಾಯಿ ಕಣ್ಣೀರು! ವೈರಲ್ ಆಯ್ತು ವಿಡಿಯೋ..!

ತಂದೆ-ತಾಯಂದಿರು ಅಂದ್ರೆನೇ ಹಾಗೆ ಅಲ್ವಾ? ತಮಗೆ ಏನೇ ಕಷ್ಟಗಳಿದ್ದರೂ, ಎಷ್ಟೇ ನೋವಿದ್ದರೂ ಅದ್ಯಾವುದನ್ನೂ ತೋರಿಸಿಕೊಳ್ಳದೇ, ತಮ್ಮ ಮಕ್ಕಳಿಗೆ ಕಷ್ಟ ಎನ್ನುವ ಪದವೇ ಗೊತ್ತಾಗದಂತೆ ಸಾಕಿ ಬೆಳೆಸುತ್ತಾರೆ. ತಮ್ಮ ಇಡೀ ಜೀವನವನ್ನೇ ಮಕ್ಕಳಿಗಾಗಿ ಮುಡಿಪಾಗಿಡುವ ಪೋಷಕರಿಗೆ, ಮಕ್ಕಳು ವಿಶೇಷ ದಿನಗಳಲ್ಲಿ ಪುಟ್ಟದೊಂದು ಉಡುಗೊರೆ (Gift) ನೀಡಿದರೂ ಸಾಕು, ಅವರು ಪಡುವ ಸಂಭ್ರಮಕ್ಕೆ ಬೆಲೆ ಕಟ್ಟಲಾಗದು. ಇದಕ್ಕೆ ಸಾಕ್ಷಿ ಎಂಬಂತೆ ತಾಯಿ ಮತ್ತು ಮಗಳ ಸುಂದರ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ.

Mother Gets Emotional After Daughter’s Birthday Surprise Gold Gift – Viral Video Moment

Viral Video – ಅಮ್ಮನಿಗೆ ಮಗಳ ಚಿನ್ನದ ಉಡುಗೊರೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಗಳೊಬ್ಬಳು ತನ್ನ ತಾಯಿಯ ಹುಟ್ಟುಹಬ್ಬವನ್ನು (Birthday) ಸ್ಪೆಷಲ್ ಆಗಿ ಆಚರಿಸಲು ನಿರ್ಧರಿಸುತ್ತಾಳೆ. ಇದಕ್ಕಾಗಿ ಮನೆಗೆ ಹೋಗುವ ಮುನ್ನ ಆಭರಣದ ಅಂಗಡಿಗೆ ಹೋಗಿ, ಅಮ್ಮನಿಗಾಗಿ ಒಂದು ಸುಂದರವಾದ ಚಿನ್ನದ ಕಿವಿಯೋಲೆಯನ್ನು ಖರೀದಿಸುತ್ತಾಳೆ. ಅದನ್ನು ಗಿಫ್ಟ್ ಪ್ಯಾಕ್ ಮಾಡಿಸಿ ಮನೆಗೆ ಹೋಗಿ ಅಮ್ಮನ ಕೈಗಿಡುತ್ತಾಳೆ.

ಮಗಳು ಕೊಟ್ಟ ಸರ್ಪ್ರೈಸ್ ಉಡುಗೊರೆಯನ್ನು ತೆರೆದು ನೋಡಿದ ತಾಯಿ ಒಂದು ಕ್ಷಣ ಶಾಕ್ ಆಗುತ್ತಾರೆ. ಮಗಳ ಪ್ರೀತಿ ಮತ್ತು ಆಕೆಯ ಉಡುಗೊರೆ ನೋಡಿ ಅವರ ಕಣ್ಣಾಲಿಗಳು ಒದ್ದೆಯಾಗುತ್ತವೆ. ಆ ಕಿವಿಯೋಲೆಯನ್ನು ಧರಿಸಿ, ಸಂತೋಷದಿಂದ ಮಗಳನ್ನು ತಬ್ಬಿಕೊಳ್ಳುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ.

Viral Video – 5.3 ಮಿಲಿಯನ್ ವೀಕ್ಷಣೆ ಕಂಡ ವಿಡಿಯೋ

ಅಪರ್ಣಾ ದೇವ್ಯಾಲ್ (aparna_devyal) ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. “ನಾನು ನಿಮಗೆ ಪ್ರಪಂಚದ ಎಲ್ಲಾ ಸಂತೋಷವನ್ನು ನೀಡಲು ಬಯಸುತ್ತೇನೆ” ಎಂಬ ಅಡಿಬರಹದೊಂದಿಗೆ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದ್ದು, ಬರೋಬ್ಬರಿ 5.3 ಮಿಲಿಯನ್‌ಗೂ (53 ಲಕ್ಷ) ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. Read this also : ರಾಮ್ ಚರಣ್ ‘ಚಿಕಿರಿ’ ಸಾಂಗ್‌ಗೆ ಅಜ್ಜಿ ಭರ್ಜರಿ ಸ್ಟೆಪ್ಸ್; ವಿಡಿಯೋ ನೋಡಿದ್ರೆ ನೀವು ಫಿದಾ ಆಗೋದು ಪಕ್ಕಾ..!

Mother Gets Emotional After Daughter’s Birthday Surprise Gold Gift – Viral Video Moment

ನೆಟ್ಟಿಗರು ಏನಂತಾರೆ?

ತಾಯಿ ಮತ್ತು ಮಗಳ ನಡುವಿನ ಈ ಬಾಂಧವ್ಯ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲಿ ಮೆಚ್ಚುಗೆಯ ಸುರಿಮಳೆಯೇ ಹರಿದುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
  • ಬಳಕೆದಾರರೊಬ್ಬರು, “ಈ ವಿಡಿಯೋ ತಾಯಿ-ಮಗಳ ನಡುವಿನ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ” ಎಂದು ಬರೆದುಕೊಂಡಿದ್ದಾರೆ.
  • ಇನ್ನೊಬ್ಬರು, “ಈ ದೃಶ್ಯ ನೋಡಿ ನನ್ನ ಕಣ್ಣಲ್ಲೂ ನೀರು ಬಂತು, ತುಂಬಾ ಎಮೋಷನಲ್ ಆಗಿದೆ” ಎಂದಿದ್ದಾರೆ.
  • ಮತ್ತೊಬ್ಬರು, “ತಾಯಂದಿರು ಮಕ್ಕಳಿಂದ ದುಬಾರಿ ಉಡುಗೊರೆಗಳನ್ನು ಬಯಸುವುದಿಲ್ಲ, ಆದರೆ ಮಕ್ಕಳು ಪ್ರೀತಿಯಿಂದ ಏನನ್ನೇ ಕೊಟ್ಟರೂ ಭಾವುಕರಾಗುತ್ತಾರೆ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ, ಎಷ್ಟೋ ದಿನಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ಅರ್ಥಪೂರ್ಣ ವಿಡಿಯೋ ವೈರಲ್ ಆಗಿದ್ದು, ನೋಡಿದ ಪ್ರತಿಯೊಬ್ಬರ ಮುಖದಲ್ಲೂ ನಗು ತರಿಸಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular