ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ರಾಮಮಂದಿರದ ಮೇಲೆ ಬುಲ್ಡೋಜರ್ ಬಿಡ್ತಾರೆ ಎಂದ ಮೋದಿ….!

ಲೋಕಸಭಾ ಚುನಾವಣೆ 2024 ನಿಮಿತ್ತ ರಾಜಕೀಯ ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿಯೇ ಇದೆ. ಪ್ರಧಾನಿ ನರೇಂದ್ರ ಮೋದಿಯವರು ಇಂಡಿಯಾ ಮೈತ್ರಿ ಕೂಟದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೇ ಕಾಂಗ್ರೇಸ್ ಹಾಗೂ ಸಮಾಜವಾದಿ ಪಕ್ಷ ರಾಮಮಂದಿರವನ್ನು ಬುಲ್ಡೋಜರ್‍ ನಿಂದ ಬೀಳಿಸುತ್ತದೆ ಎಂದು ಆರೋಪಿಸಿದ್ದಾರೆ.

Narendra modi comments about CAA 1

ಚುನಾವಣಾ ಪ್ರಚಾರ ನಿಮಿತ್ತ ಇಂಡಿಯಾ ಮೈತ್ರಿಕೂಟದ ವಿರುದ್ದ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಮಾಜವಾದಿ ಹಾಗೂ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೇ ರಾಮಲಲ್ಲಾನನ್ನು ಟೆಂಟ್ ಗೆ ಕಳುಹಿಸುತ್ತೇವೆ. ದೇವಸ್ಥಾನದ ಮೇಲೆ ಬುಲ್ಡೋಜರ್‍ ಬಿಡುತ್ತೇವೆ ಎಂದು ಹೇಳಿದ್ದರು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ಇಂಡಿಯಾ ಮೈತ್ರಿಕೂಟ ರಾಮಮಂದಿರ ನಿರ್ಮಾಣಕ್ಕೆ ತುಂಬಾ ವಿರೋಧ ಮಾಡಿತ್ತು. ಇದೀಗ ಅವರು ಅಧಿಕಾರಕ್ಕೆ ಬಂದರೇ ಮತ್ತೆ ರಾಮಮಂದಿರ ಟೆಂಟ್ ಗೆ ಶಿಫ್ಟ್ ಮಾಡಬಹುದು ಎಂದಿದ್ದಾರೆ.

ಇನ್ನೂ ಸ್ವಾತಂತ್ಯ್ರ ಹೋರಾಟದ ಸಂದರ್ಭದಲ್ಲಿ ದೇಶದ ವಿಭಜನೆಯ ಕುರಿತು ಮಾತುಗಳು ಕೇಳಿಬಂತು. ಆ ಸಮಯದಲ್ಲಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ದೇಶ ವಿಭಜನೆಯಾಗಬಹುದೇ? ಅದು ಸಂಭವಿಸಿದೆ ಅಲ್ಲವೇ, ಅವರು ಮಾಡಿದ್ದಾರೋ ಇಲ್ಲವೋ. ವಿಭಜನೆಯಲ್ಲಿ ಯಾವ ಹಂತಕ್ಕೆ ಹೋಗಬಹುದು ಎಂಬ ಪ್ರಶ್ನೆಗಳು ಉದ್ಬವಿಸಿದೆ ಎಂದು, ಕಾಂಗ್ರೇಸ್ ನವರಿಗೆ ದೇಶ ಮುಖ್ಯವಲ್ಲ, ಅವರಿಗೆ ಅಧಿಕಾರ ಹಾಗೂ ಕುಟುಂಬ ಮುಖ್ಯ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಇನ್ನೂ ಉತ್ತರ ಪ್ರದೇಶ ಲಾಲ್ ಗಂಜ್ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಪ್ರಚಾರದಲ್ಲಿ ಮಾತನಾಡಿದ ಅವರು, ದೇಶವನ್ನು ನಾಶ ಮಾಡಲು ಆ ಎರಡೂ ಪಕ್ಷಗಳು ತಮ್ಮ ಶಕ್ತೀ ಮೀರಿ ಪ್ರಯತ್ನಿಸುತ್ತಿವೆ. ಮೋದಿ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಮುಂದೊಂದು ದಿನ ಸಿಎಎ ತೆಗೆದುಹಾಕುತ್ತೇವೆ ಎಂದು ಇಂಡಿ ಕೂಟದ ನಾಯಕರು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಅಂಥಹ ವ್ಯಕ್ತಿ ಹುಟ್ಟಿದ್ದಾನಾ ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ ವಿದೇಶದಿಂದ ಬಂದಂತಹವರಿಗೆ ಮೊದಲ ಹಂತದಲ್ಲಿ ಪೌರತ್ವ ಪ್ರಮಾಣ ಪತ್ರ ನೀಡಿದ್ದೇವೆ. ಅದನ್ನು ತಡೆಯಲು ನಿಮ್ಮಲ್ಲಿ ಎಷ್ಟೆಲ್ಲಾ ಸಾಮರ್ಥ್ಯವಿದೆಯೋ ಅದನ್ನೆಲ್ಲಾ ಬಳಸಲಿ ಎಂದು ಮೋದಿ ಸವಾಲಾಕಿದ್ದರು.

Leave a Reply

Your email address will not be published. Required fields are marked *

Next Post

ಸಣ್ಣ ಇರುವೆ ಮತ್ತು ದಯಾಮಯ ಮಗು- ಮಕ್ಕಳ ಸಣ್ಣ ಕಥೆ

Sat May 18 , 2024
ಒಂದು ಸುಂದರವಾದ ಬಿಸಿಲಿನ ದಿನದಂದು, ಒಂದು ಸಣ್ಣ ಹಳ್ಳಿಯಲ್ಲಿ ಮಕ್ಕಳು ಹೊರಗೆ ಆಟವಾಡುತ್ತಿದ್ದರೆ, ಹಕ್ಕಿಗಳು ಸಂತೋಷದಿಂದ ಚಿಲಿಪಿಲಿಗುಟ್ಟುತ್ತಿದ್ದವು ಮತ್ತು ಹೂವುಗಳು ಅರಳುತ್ತಿದ್ದವು. ನಮ್ಮ ಮುಖ್ಯಪಾತ್ರವಾದ ಅನ್ನಿಯನ್ನು ಭೇಟಿ ಮಾಡಿ, ಅವಳು ತನ್ನ ಚಿಕ್ಕ ಕಾಲುಗಳಿಂದ ಆಹಾರವನ್ನು ಸಂಗ್ರಹಿಸಲು ತನ್ನ ದಂಶಕ್ಕಾಗಿ ಹೋಗುತ್ತಿದ್ದಳು. ಅನ್ನಿಯು ಒಂದು ತುಣುಕನ್ನು ಹೊತ್ತುಕೊಂಡು ತನ್ನ ದಂಶಕ್ಕೆ ಮರಳುತ್ತಿರುವಾಗ, ಆಕೆ ಕಲ್ಲಿನ ಮೇಲೆ ಜಾರಿ ಆ ತುಣುಕನ್ನು ಕಳೆದುಬಿಡುತ್ತಾಳೆ. ಇದನ್ನು ನೋಡಿ, ದಯಾಮಯ ಮಗುವಾದ ಮ್ಯಾಕ್ಸ್ ಅವಳಿಗೆ […]
Moral story ant and kid 2
error: Content is protected !!