Karnataka Congress: ಸಿಎಂ-ಡಿಸಿಎಂ ಬದಲಾವಣೆಯ ಬಗ್ಗೆ ಶಾಸಕ ಸುಬ್ಬಾರೆಡ್ಡಿ ಪ್ರತಿಕ್ರಿಯೆ…!

(Karnataka Congress) ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಸಿ.ಎಂ ಮತ್ತು ಡಿ.ಸಿ.ಎಂ  ಬದಲಾವಣೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ  ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿ ಸಿ.ಎಂ. ಮತ್ತು ಡಿಸಿಎಂ ಬಗ್ಗೆ ಕೇವಲ ಮಾದ್ಯಮಗಳಲ್ಲಿ ಮಾತ್ರ,  ಸಿಎಂ ಮತ್ತು ಡಿಸಿಎಂ ಸೇರಿದಂತೆ ಬಹುತೇಕ ಶಾಸಕರಲ್ಲಿ ಯಾವುದೇ ಗೊಂದಲವಿಲ್ಲ, ಕೆಲವು ಶಾಸಕರು ಸಿಎಂ ಮತ್ತು ಡಿಸಿಎಂ ರವರ  ಅಭಿಮಾನಿಗಳು ಬದಲಾವಣೆ ಬಗ್ಗೆ ಮಾತನಾಡಿದರೆ, ಸದಸ್ಯಕ್ಕೆ ಸಿದ್ದರಾಮಯ್ಯ (Siddaramaiah)ರವರು ಸಿ.ಎಂ ಆಗಿ ಮುಂದುವರೆಯುತ್ತಾರೆ. ಸಿ.ಎಂ ಮತ್ತು ಡಿಸಿಎಂ  ಬದಲಾವಣೆ ವಿಚಾರ ಪಕ್ಷದ ಹೈಕಮಾಂಡ್‍ಗೆ ಬಿಟ್ಟಿದ್ದು.

ಸ್ವಾಮೀಜಿಗಳು ರಾಜಕೀಯ ರಂಗದಲ್ಲಿ ಹಸ್ತಕ್ಷೇಪ, ಸಿ.ಎಂ ಯಾರಾಗಬೇಕು ಎನ್ನುವಂತಹ ತೀರ್ಮಾನ ಮಾಡುವ ಮಟ್ಟಕ್ಕೆ ಬಂದಿರುವಂತಹ ಪರಿಸ್ಥಿತಿ ಈ ಬಗ್ಗೆ ತಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆ ಉತ್ತರಿಸಿದ ಶಾಸಕರು  ಯಾವುದೆ ಸಮುದಾಯದ ಸ್ವಾಮೀಜಿಗಳು ಇಂತಹ ವಿಚಾರವನ್ನು ಕೇಳುವುದು ತಪ್ಪು.   ಸ್ವಾಮೀಜಿಗಳು  ಶಿಕ್ಷಣ, ಬಡವರ ಬಗ್ಗೆ ಹೆಚ್ಚಿ ಕಾಳಜಿವಹಿಸಬೇಕು, ಸಿ.ಎಂ ಯಾರು ಇರಬೇಕು ಯಾರು ಇರಬಾರದು ಎಂಬುದನ್ನು ತೀರ್ಮಾನ ಮಾಡುವುದು ಶಾಸಕರು ಮತ್ತು ಪಕ್ಷದ ಹೈಕಮಾಂಡ್, ಸ್ವಾಮೀಜಿಗಳು ಹೇಳಿದ ತಕ್ಷಣ ಸಿ.ಎಂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮಾ ತೀರ್ಮಾನ.

S N Subbareddy comments about CM DCM 1

ವಾಲ್ಮೀಕಿ  ಮತ್ತು ಮೂಡಾ ಹಗರಣ ಸರ್ಕಾರಕ್ಕೆ ಏನಾದರೂ ಮುಜಗರಕ್ಕೆ ಸಿಲುಕುತ್ತಾ ಎಂಬ ಪ್ರಶ್ನೆಗೆ  ವಾಲ್ಮೀಕಿ ಹಗರಣದ ವಿಚಾರದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಮಾತನಾಡುವುದು ತಪ್ಪು.  ತನಿಖೆಯಲ್ಲಿ ನಿಜಾಂಶದಲ್ಲಿ ಉಪ್ಪು ತಿದ್ದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಬಿಜೆಪಿಯಲ್ಲಿಯೂಸಹ ಇಂತಹ ಅನೇಕ ಆರೋಪಗಳು ಕೇಳಿಬಂದಿತ್ತು ಎಂದರು. ಮೂಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡುವಂತೆ ಬಿಜೆಪಿಯವರು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ  ಬಿಜೆಪಿ ಸರ್ಕಾರ ಇದ್ದಾಗ ನೀಡಿದ್ದಾರೆ ಈ ವಿಚಾರ ಏಕೆ ಅಂದು ಕೇಳಲಿಲ್ಲ , ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಲು ಹಾಗೂ ನಾವು ಇದ್ದೇವೆ ಎಂಬುದನ್ನು ತೋರಿಸಿಕೊಳ್ಳಲು  ಬಿಜೆಪಿಯವರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.

Leave a Reply

Your email address will not be published. Required fields are marked *

Next Post

Save Environment: ಸ್ವಾರ್ಥಕ್ಕಾಗಿ ಪರಿಸರ ನಾಶ, ಇಡೀ ಮನುಕುಲ ನಾಶಕ್ಕೆ ದಾರಿ: ಸುಬ್ಬಾರೆಡ್ಡಿ

Sat Jul 6 , 2024
ಬಾಗೇಪಲ್ಲಿ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳಿಗೆ ಕತ್ತರಿ ಹಾಕಿದರೆ ಮುಂದಿನ ದಿನಗಳಲ್ಲಿ ಪ್ರಕೃತಿ ಇಡೀ ಮನುಕುಲವನ್ನೇ ನಾಶ ಮಾಡುವುದು ಖಚಿತ. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಕಾಡನ್ನು ಉಳಿಸಿಬೆಳೆಸುವುದಕ್ಕೆ ಪ್ರತಿಯೊಬ್ಬ ನಾಗರೀಕರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಅಭಿಯಾನಕ್ಕೆ ಗಿಡ ನೆಡುವ ಮೂಲಕ […]
Vana mahostava in Bagepalli
error: Content is protected !!