Sunday, October 26, 2025
HomeStatePradeep Eshwar: ಮೆಗಾಸ್ಟಾರ್ ಚಿರಂಜೀವಿಯವರೊಂದಿಗೆ ನಟಿಸಲಿದ್ದಾರಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್….!

Pradeep Eshwar: ಮೆಗಾಸ್ಟಾರ್ ಚಿರಂಜೀವಿಯವರೊಂದಿಗೆ ನಟಿಸಲಿದ್ದಾರಂತೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್….!

Pradeep Eshwar – ದೇಶದ ಸಿನಿರಂಗದ ಖ್ಯಾತ ನಟ ಮೆಗಾಸ್ಟಾರ್‍ ಚಿರಂಜೀವಿ (Megastar Chiranjeevi) ಸದ್ಯ ವಿಶ್ವಂಭರ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಮೆಗಾಸ್ಟಾರ್‍ ಚಿರಂಜೀವಿಯವರೊಂದಿಗೆ ನಟಿಸಲಿದ್ದಾರಂತೆ. ಕಳೆದೆರಡು ದಿನಗಳಿಂದ ಪ್ರದೀಪ್ ಈಶ್ವರ್‍ ರವರಿಗೆ ಚಿರಂಜೀವಿಯವರ ಜೊತೆಗೆ ನಟಿಸುವ ಬಿಗ್ ಆಫರ್‍ ಬಂದಿದೆ ಎಂಬ ಸುದ್ದಿ ಭಾರಿ (Megastar Chiranjeevi)  ಸದ್ದು ಮಾಡಿದ್ದು, ಈ ಕುರಿತು ಶಾಸಕ ಪ್ರದೀಪ್ (Pradeep Eshwar) ಈಶ್ವರ್‍ ಮಾತನಾಡಿದ್ದಾರೆ.

ಕಾಂಗ್ರೇಸ್ ಶಾಸಕ ಪ್ರದೀಪ್ ಈಶ್ಚರ್‍ (Pradeep Eshwar) ಸದ್ಯ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಶೀಘ್ರದಲ್ಲೇ ಬಣ್ಣದ ಲೋಕಕ್ಕೂ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಶಾಸಕ ಪ್ರದೀಪ್ ಈಶ್ವರ್‍ ಮೆಗಾಸ್ಟಾರ್‍ ಚಿರಂಜೀವಿಯವರೊಂದಿಗೆ (Megastar Chiranjeevi) ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದ್ದು, ಈ ಕುರಿತು ಶಾಸಕ ಪ್ರದೀಪ್ ಈಶ್ವರ್‍ ರವರೇ ಅಪ್ಡೇಟ್ ಒಂದು ನೀಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಭಾರಿ ಟ್ರೆಂಡ್ ಆಗಿರುವ ಪ್ರದೀಪ್ ಈಶ್ವರ್‍ (Pradeep Eshwar) ಸಿನೆಮಾ ರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ಮತಷ್ಟು ಖುಷಿ ತಂದುಕೊಟ್ಟಿದೆ ಎಂದು ಹೇಳಲಾಗುತ್ತಿದೆ.

MLA Pradeep Eshwar got offer from chiru movie 0

ಈ ಕುರಿತು ಶಾಸಕ (Pradeep Eshwar) ಪ್ರದೀಪ್ ಈಶ್ವರ್‍ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದು, ತಮಗೆ ಆಫರ್‍ ಬಂದಿರುವ ಬಗ್ಗೆ ಹೇಳಿದ್ದಾರೆ. ನನಗೆ ಟಾಲಿವುಡ್ ಸಿನೆಮಾ ಮಾಡಲು ಆಫರ್‍ ಬಂದಿರೋದು ನಿಜ, ನಾಆನು ಮೆಗಾಸ್ಟಾರ್‍ ಚಿರಂಜೀವಿಯವರ ದೊಡ್ಡ ಅಭಿಮಾನಿ. ನಾನು ಅವರ ಸಮುದಾಯಕ್ಕೆ ಸೇರಿದ ಹುಡುಗ. ಕರ್ನಾಟಕದಲ್ಲಿ ಅವರ ಸಮುದಾಯದಿಂದ ಗೆದ್ದಂತಹ ಏಕೈಕ ಶಾಸಕನಾಗಿದ್ದೇನೆ. (Pradeep Eshwar) ಮೆಗಾಸ್ಟಾರ್‍ ಚಿರಂಜೀವಿಯವರಿಗೆ ನನ್ನ ಮೇಲೆ ವಿಶೇಷವಾದ ಪ್ರೀತಿಯಿದೆ. ಚುನಾವಣೆಯಲ್ಲಿ ಗೆದ್ದ ಮೇಲೆ ನನ್ನನ್ನು ಮನೆಗೆ ಕರೆಸಿ ಬೆಂಬಲಿಸಿದ್ದರು. ಪವನ್ ಕಲ್ಯಾಣ್ ರವರು ಗೆದ್ದ ಮೇಲೆ ನಾನು ಪೋನ್ ಮಾಡಿ ವಿಶ್ ಮಾಡಿದ್ದೇನೆ. ಜೊತೆಗೆ ಟಾಲಿವುಡ್ ಗೂ (Pradeep Eshwar) ನಾನೂ ಕ್ಲೋಸ್ ಆಗಿದ್ದೇನೆ ಎಂದರು.

ಇನ್ನೂ ಚಿರಂಜೀವಿಯವರ ಜೊತೆ ನಟಿಸುವುದು ಹಾಗೂ ಡ್ಯಾನ್ಸ್ ಮಾಡುವುದು (Pradeep Eshwar)  ನನಗೆ ತುಂಬಾನೆ ಆಸೆಯಿದೆ. ಚಿರಂಜೀವಿಯವರು ಸದ್ಯ ವಿಶ್ವಂಭರ ಸಿನೆಮಾದ ಶೂಟಿಂಗ್ ನಡೆಯುತ್ತಿದೆ. ನಾನು ಈ ಸಿನೆಮಾದಲ್ಲಿ ನಟಿಸುತ್ತಿಲ್ಲ. ಅವರ ಮುಂದಿನ ಸಿನೆಮಾದಲ್ಲಿ ಪಾತ್ರ ಕೊಟ್ಟರೇ ನಾನು (Pradeep Eshwar) ಮಾಡುತ್ತೇನೆ. ಈ ಕುರಿತು ಅವರೇ ಅನೌನ್ಸ್ ಮಾಡಲಿ (Pradeep Eshwar) ಅಂತಾ ಇದ್ದೀನಿ ಎಂದು ಶಾಸಕ ಪ್ರದೀಪ್ ಈಶ್ವರ್‍ ತಿಳಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular