Gruhalakshmi Scheme – ರಾಜ್ಯ ಕಾಂಗ್ರೇಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮೀ ಗ್ಯಾರಂಟಿಯ ಹಣ ಬಂದು ಎರಡು ತಿಂಗಳಾಗಿತ್ತು. ತಾಂತ್ರಿಕ ಕಾರಣದಿಂದ ಹಣ ಜಮೆ ಆಗಿರಲಿಲ್ಲ. ಇಂದಿನಿಂದ ನಿಮ್ಮ ಖಾತೆಗಳಿಗೆ (Gruhalakshmi Scheme) ಗೃಹಲಕ್ಷ್ಮೀ ಹಣ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ. ಆ ಮೂಲಕ ವರಮಹಾಲಕ್ಷ್ಮೀ ಹಬ್ಬಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಮಂಡ್ಯದಲ್ಲಿ ಕಾಂಗ್ರೇಸ್ ಪಕ್ಷದಿಂದ ಆಯೋಜಿಸಿದ್ದ ಜನಾಂದೋಳನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಿನ್ನೆ ಡಿಸಿಎಂ ರವರು ಭಾಷಣ ಮಾಡುವಾಗ ಗೃಹ ಲಕ್ಷ್ಮೀ (Gruhalakshmi Scheme) ಹಣ ಬಂದಿಲ್ಲ ಎಂದು ಮಹಿಳೆಯರು ಹೇಳಿದ್ದರು. ಆದರೆ ತಾಂತ್ರಿಕ ಕಾರಣದಿಂದ ಹಣ ಜಮೆ ಆಗಿರಲಿಲ್ಲ. (Gruhalakshmi Scheme) ಜೂನ್ ಹಾಗೂ ಜುಲೈ ಮಾಹೆಯ ಕಂತು ಇಂದಿನಿಂದ ಜಮೆ ಯಾಗಲಿದೆ. (Gruhalakshmi Scheme) ಕಾಂಗ್ರೇಸ್ ನವರು ನುಡಿದಂತೆ ನಡೆಯುವ ಸರ್ಕಾರ ನಡೆಸುವಂತವರು. ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದನ್ನು ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಬರಗಾಲದ ಸಮಯದಲ್ಲಿ ಪರಿಹಾರ ಕೊಡಲು ಮನಸ್ಸು ಇರಲಿಲ್ಲ. ಆದರೆ ಬಿಜೆಪಿ ಭ್ರಷ್ಟ ಸರ್ಕಾರ ಬಂಡವಾಳಶಾಹಿಗಳ ಲಕ್ಷ ಲಕ್ಷ ಕೋಟಿಗಳ ಸಾಲ ಮನ್ನಾ ಮಾಡಿದೆ (Gruhalakshmi Scheme) ಎಂದು ಆಕ್ರೋಷ ಹೊರಹಾಕಿದರು.
ಇನ್ನೂ ಹಾಸನದ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಸಹ ಮಾತನಾಡಿದ್ದಾರೆ. ಪೆನ್ ಡ್ರೈವ್ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ್ದಾರೆ ಎಂದು ಹೇಳ್ತೀರಾ ಅಲ್ವಾ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುಟುಂಬ ಅಂತಾ ಇದೆಲ್ವಾ, ಆ ಕುಟುಂಬಕ್ಕೆ ಅನ್ಯಾಯ ಆಗಿರೊಲ್ವಾ, ಪೆನ್ ಡ್ರೈವ್ ಹಂಚಿದ್ದು ಪ್ರೀತಂ ಗೌಡ ಅಂತಾ ನೀವೆ ಒಪ್ಪಿಕೊಂಡಿದ್ದೀರಾ, ದೌರ್ಜನ್ಯಕ್ಕೆ ಒಳಗಾದ ಕುಟುಂಬ ಅದು ಕುಟುಂಬವಲ್ಲವೇ, ನೂರಾರು ಮಹಿಳೆಯರ ಮರ್ಯಾದೆ ಬೀದಿ ಪಾಲಾಯ್ತು ಅಲ್ವೇ, ನಿಮಗೆ ನಾಚಿಕೆಯಾಗೊಲ್ವಾ, ಜನಪ್ರತಿನಿಧಿಯಾಗಲು ನಿಮಗೆ ಯಾವ ನೈತಿಕತೆಯಿದೆ ಎಂದು ಕುಮಾರಸ್ವಾಮಿ ವಿರುದ್ದ ಹರಿಹಾಯ್ದರು.