ಸಾಮಾನ್ಯವಾಗಿ ಹೆಣ್ಣುಮಕ್ಕಳು ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ತಮ್ಮ ಜೀವನ ಸಂಗಾತಿಯನ್ನು ಹುಡುಕುವಾಗ ಹತ್ತು ಬಾರಿ ಯೋಚಿಸುತ್ತಾರೆ. ಆದರೆ, ಅದೆಷ್ಟು ಜಾಗರೂಕರಾಗಿದ್ದರೂ (Matrimony Scam) ವಂಚಕರು ಹೂಡುವ ಬಲೆಗೆ ಸಿಲುಕುವ ಸಾಧ್ಯತೆ ಇರುತ್ತದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಇಂತಹದ್ದೇ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಯುವತಿಯೊಬ್ಬರಿಗೆ ಮದುವೆಯ ಆಮಿಷವೊಡ್ಡಿ, ಬರೋಬ್ಬರಿ 1.7 ಕೋಟಿ ರೂಪಾಯಿ ವಂಚಿಸಿದ ವಿಜಯ್ ರಾಜ್ ಗೌಡ ಎಂಬುವವನ ಕರಾಳ ಮುಖ ಈಗ ಅನಾವರಣಗೊಂಡಿದೆ.

Matrimony Scam – ‘ಅವನು ಮನುಷ್ಯನಲ್ಲ, ಮೃಗ’: ಸಂತ್ರಸ್ತ ಯುವತಿಯ ಕಣ್ಣೀರು
“ನಾನು ಮ್ಯಾಟ್ರಿಮೋನಿಯಲ್ಲಿ ಒಂದು ಒಳ್ಳೆಯ ಸಂಬಂಧಕ್ಕಾಗಿ ಹುಡುಕುತ್ತಿದ್ದೆ. ಆದರೆ ನನಗೆ ಸಿಕ್ಕಿದ್ದು ಮನುಷ್ಯ ರೂಪದ ಮೃಗ. ಅವನು ಮಾಡಿರೋದು ಬರಿ ಹಣದ ವಂಚನೆಯಲ್ಲ, ನನ್ನ ಒಂದೂವರೆ ವರ್ಷದ ಬದುಕು ಮತ್ತು ನಂಬಿಕೆಯ ಕೊಲೆ” ಎಂದು ಸಂತ್ರಸ್ತ ಯುವತಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಿಜೆಕ್ಟ್ ಮಾಡಿದ್ದರೂ ಬಿಡದೆ ಬೆನ್ನತ್ತಿದ್ದ ವಂಚಕ!
ಈ ವಂಚನೆಯ ಕಥೆ ಶುರುವಾಗಿದ್ದು ಒಕ್ಕಲಿಗ ಮ್ಯಾಟ್ರಿಮೋನಿ ಆ್ಯಪ್ ಮೂಲಕ. ವಿಜಯ್ ತನ್ನ ಪ್ರೊಫೈಲ್‌ನಲ್ಲಿ ಅದ್ದೂರಿ ಜೀವನದ ಚಿತ್ರಣ ನೀಡಿದ್ದ. ಆರಂಭದಲ್ಲಿ ಇವನ ಹೈ-ಫೈ ಸ್ಟೈಲ್ ನೋಡಿ ಯುವತಿ ಆತನನ್ನು ತಿರಸ್ಕರಿಸಿದ್ದರು (Reject). ಆದರೆ ವಿಜಯ್ ಅಷ್ಟಕ್ಕೇ ಬಿಡದೆ, “ನನ್ನನ್ನು ಯಾಕೆ ರಿಜೆಕ್ಟ್ ಮಾಡುತ್ತೀರಿ? ಮೊದಲು ನನ್ನ ಬಗ್ಗೆ ತಿಳಿದುಕೊಳ್ಳಿ” (Matrimony Scam) ಎಂದು ಪದೇ ಪದೇ ಬೆನ್ನತ್ತಿ ನಂಬಿಕೆ ಗಳಿಸಿದ್ದ.
ಇಡಿ (ED) ಕೇಸ್ ಹೆಸರಲ್ಲಿ ನಕಲಿ ದಾಖಲೆಗಳ ಮಾಯಾಜಾಲ
ವಿಜಯ್ ಎಷ್ಟು ಚಾಣಾಕ್ಷನಾಗಿದ್ದನೆಂದರೆ, ತನ್ನ ಮೇಲೆ ಜಾರಿ ನಿರ್ದೇಶನಾಲಯ (ED) ಕೇಸ್‌ಗಳಿವೆ, ಬ್ಯಾಂಕ್ ಅಕೌಂಟ್‌ಗಳು ಫ್ರೀಜ್ ಆಗಿವೆ ಎಂದು ನಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. “ನಾನು ಆ ದಾಖಲೆಗಳನ್ನು ವಕೀಲರಿಗೂ ತೋರಿಸಿದ್ದೆ, ಅವರೂ ಸಹ ಅವು ಅಸಲಿ ಎಂದೇ ಭಾವಿಸಿದ್ದರು. ಅಷ್ಟರಮಟ್ಟಿಗೆ ಅವನು ಪೇಪರ್ ವರ್ಕ್ ಮಾಡಿದ್ದ” ಎಂದು ಯುವತಿ ಹೇಳಿದ್ದಾರೆ.

ಹೆಂಡತಿಯನ್ನೇ ‘ಅಕ್ಕ’ ಎಂದು ಪರಿಚಯಿಸಿದ ವಂಚಕ!
ವಂಚನೆಯ ಪರಾಕಾಷ್ಠೆ ಎಂದರೆ, ವಿಜಯ್ ತನಗೆ ಈಗಾಗಲೇ (Matrimony Scam) ಮದುವೆಯಾಗಿ ಮಗು ಇದ್ದರೂ, ತನ್ನ ಹೆಂಡತಿಯನ್ನೇ ಅಕ್ಕ ಎಂದು ಯುವತಿಗೆ ಪರಿಚಯಿಸಿದ್ದ! ತನ್ನ ತಂದೆಗೆ ಆರೋಗ್ಯ ಸರಿ ಇಲ್ಲ, ಊಟಕ್ಕೂ ಹಣವಿಲ್ಲ ಎಂದು ಎಮೋಷನಲ್ ಡ್ರಾಮಾ ಮಾಡಿ ಹಂತ ಹಂತವಾಗಿ ಸುಮಾರು 1.56 ಕೋಟಿಗೂ ಅಧಿಕ ಹಣವನ್ನು ದೋಚಿದ್ದಾನೆ. Read this also : ಪ್ರೀತಿಸಿ ಮದುವೆಯಾದವಳ ಮೇಲೆ ಅನುಮಾನ: ಪತ್ನಿಯ ಕತ್ತು ಹಿಸುಕಿ ಕೊಂದು ಪೊಲೀಸ್ ಠಾಣೆಯಲ್ಲಿ ಕಣ್ಣೀರಿಟ್ಟ ಪತಿ!
“ನನ್ನ ಜೀವನದ ಅಮೂಲ್ಯ ಸಮಯ ಹಾಳಾಯ್ತು”
ಹಣ ಕಳೆದುಕೊಂಡಿದ್ದಕ್ಕಿಂತ ಹೆಚ್ಚಾಗಿ ತನ್ನ ಜೀವನದ ಸಮಯ ವ್ಯರ್ಥವಾಯಿತಲ್ಲ ಎಂಬ ನೋವು ಆ ಯುವತಿಯನ್ನು ಕಾಡುತ್ತಿದೆ. “ನಾನು ಬೇರೆ ಯಾರನ್ನಾದರೂ ಮದುವೆಯಾಗಿದ್ದರೆ ಇಷ್ಟೊತ್ತಿಗೆ ನನಗೆ ಮಗು ಇರುತ್ತಿತ್ತು. (Matrimony Scam) ಇಡೀ ಕುಟುಂಬವೇ ಸೇರಿ ನನ್ನನ್ನು ಲೂಟಿ ಮಾಡಿದೆ” ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಎಚ್ಚರಿಕೆ ವಹಿಸಿ:
ಮ್ಯಾಟ್ರಿಮೋನಿ ಸೈಟ್‌ಗಳಲ್ಲಿ ಸಂಬಂಧ ಹುಡುಕುವಾಗ ಈ ಕೆಳಗಿನ ಅಂಶಗಳನ್ನು ಗಮನಿಸಿ:
- ಯಾರೇ ಆಗಲಿ ಹಣದ ಸಹಾಯ ಕೇಳಿದರೆ ತಕ್ಷಣ ಎಚ್ಚೆತ್ತುಕೊಳ್ಳಿ.
- ವ್ಯಕ್ತಿಯ ಹಿನ್ನೆಲೆಯನ್ನು ಖುದ್ದಾಗಿ ಭೇಟಿ ನೀಡಿ ಅಥವಾ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಿ.
- ದಾಖಲೆಗಳನ್ನು ನೀಡಿದ ತಕ್ಷಣ ನಂಬಬೇಡಿ, ಸಂಬಂಧಪಟ್ಟ ಇಲಾಖೆಗಳಲ್ಲಿ ಕ್ರಾಸ್ ವೆರಿಫೈ ಮಾಡಿ.
