Marriage Scam – ಇತ್ತೀಚಿನ ದಿನಗಳಲ್ಲಿ ನೀವು ಎಷ್ಟೋ ಮದುವೆಗಳನ್ನು ನೋಡಿರಬಹುದು, ಕೇಳಿರಬಹುದು. ಡೊಳ್ಳಿನ ಸದ್ದು, ಬಂಧು-ಬಳಗದ ಸಡಗರ, ವಧು-ವರರ ನಗು… ಸಾಮಾನ್ಯವಾಗಿ ಇವೆಲ್ಲಾ ಇರುತ್ತೆ. ಆದರೆ, ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕಿಷನ್‌ಗಢ್‌ನಲ್ಲಿ ನಡೆದ ಒಂದು ವಿವಾಹದ ಕಥೆ ಕೇಳಿದ್ರೆ, “ಹೀಗೂ ಆಗುತ್ತಾ?” ಅಂತ ಆಶ್ಚರ್ಯ ಆಗದೆ ಇರದು. ಸದ್ಯ ಈ ಸುದ್ದಿ ಇಡೀ ಪ್ರದೇಶದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮದುವೆ ಸಂಭ್ರಮದ ಹಿಂದಿನ ದೊಡ್ಡ ಸ್ಕ್ಯಾಮ್ ಇದು!

Marriage Scam – ವೈಭವದ ಮದುವೆ, ಶುರುವಾದ ಹೊಸ ಜೀವನದ ಕನಸು
ಕಿಷನ್‌ಗಢದ ಯುವಕ ರಾಕೇಶ್ ಅವರ ಮದುವೆ ಜೈಪುರದಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು. ಆಗ್ರಾದಿಂದ ಬಂದ ವಧು, ಎಲ್ಲ ಸಂಪ್ರದಾಯಬದ್ಧ ಆಚರಣೆಗಳನ್ನು ಪೂರೈಸಿ, ಅಗ್ನಿಸಾಕ್ಷಿಯಾಗಿ ಏಳು ಹೆಜ್ಜೆ ಇಟ್ಟು, ಪತಿಯೊಂದಿಗೆ ಕಿಷನ್‌ಗಢ್‌ಗೆ ಬಂದಳು. ಅತ್ತೆ ಅಂದರೆ ರಾಕೇಶ್‌ರ ತಾಯಿ ಹೊಸ ಸೊಸೆಯನ್ನು ಪ್ರೀತಿಯಿಂದ ಸ್ವಾಗತಿಸಿ, ಚಿನ್ನದ ಆಭರಣಗಳನ್ನು ತೊಡಿಸಿದರು. “ಮನೆಗೆ ಹೊಸ ಬೆಳಕು ಬಂತು, ಇನ್ಮುಂದೆ ಎಲ್ಲವೂ ಖುಷಿ-ಖುಷಿ” ಅಂತ ಇಡೀ ಕುಟುಂಬ ಸಂತೋಷದಲ್ಲಿ ತೇಲುತ್ತಿತ್ತು. ಮದುವೆಯ ಸಕಲ ಶಾಸ್ತ್ರಗಳೂ ಮುಗಿದ ಮೇಲೆ, ಮೊದಲ ರಾತ್ರಿಗೆ (First Night) ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಹೊಸ ಜೀವನದ ಕನಸು ಕಾಣುತ್ತಾ ರಾಕೇಶ್ ತಮ್ಮ ಕೋಣೆಗೆ ಹೋದ್ರು.
Marriage Scam – ರಾತ್ರಿ 3 ಗಂಟೆಗೆ ಬಯಲಾಯ್ತು ವಧುವಿನ ಅಸಲಿ ಆಟ
ಆದರೆ, ಅಲ್ಲಿ ವಧು ರಾಕೇಶ್‌ಗೆ ಶಾಕ್ ಕೊಟ್ಟಳು. “ಇವತ್ತು ಫಸ್ಟ್ ನೈಟ್ ಬೇಡ. ಇದು ನಮ್ಮ ಸಂಪ್ರದಾಯಕ್ಕೆ ವಿರುದ್ಧ” ಎಂದು ಹೇಳಿ ವರನನ್ನು ನಂಬಿಸಿದಳು. ಮಡದಿಯ ಮಾತನ್ನು ನಂಬಿದ ರಾಕೇಶ್, “ಆಗಲಿ” ಎಂದು ಸುಮ್ಮನಾದರು. ನಂತರ ರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ರಾಕೇಶ್‌ಗೆ ನೀರು ಕುಡಿಯಲು ಎಚ್ಚರವಾಯಿತು. ಆಗ ಅವರಿಗೆ ಕಂಡ ದೃಶ್ಯ ನಿಜಕ್ಕೂ ಆಘಾತಕಾರಿ. ಕೋಣೆಯ ಬಾಗಿಲು ಅರ್ಧ ತೆರೆದಿದೆ, ಬಟ್ಟೆ, ಸಾಮಾನು ಇಡುವ ಅಲ್ಮಾರಾ ಚೆಲ್ಲಾಪಿಲ್ಲಿಯಾಗಿದೆ. ಹತ್ತಿರ ಹೋಗಿ ನೋಡಿದರೆ… ವಧು ಮಾಯ!
ಅಷ್ಟೇ ಅಲ್ಲ, ಅಲ್ಮಾರಾದಲ್ಲಿದ್ದ ಚಿನ್ನಾಭರಣ ಮತ್ತು ನಗದು ಕೂಡ ಕಣ್ಮರೆಯಾಗಿತ್ತು! ಇಡೀ ಮನೆಯವರಿಗೆ ಇದು ನುಂಗಲಾರದ ತುತ್ತಾಯಿತು. ಇಡೀ ರಾತ್ರಿ ಹುಡುಕಿದರೂ ವಧುವಿನ ಸುಳಿವು ಸಿಗಲಿಲ್ಲ. ಸಂಬಂಧಿಕರು, ನೆರೆಹೊರೆಯವರು ಕೂಡ ಜಮಾಯಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮದುವೆಯ ಹಿಂದಿನ ದೊಡ್ಡ ಮೋಸ ಇದು ಎಂದು ಅರಿವಾಯಿತು. Read this also : 21 ವಯಸ್ಸಿಗೆ 12 ಮಂದಿಯೊಂದಿಗೆ ಮದುವೆ, ಮದುವೆ ಹೆಸರಲ್ಲಿ 12 ಮಂದಿ ಮಕ್ಮಲ್ ಟೋಪಿ ಹಾಕಿದ ಖತರ್ನಾಕ್ ಲೇಡಿ…!
Marriage Scam – ಬ್ರೋಕರ್ ಮೂಲಕ ನಡೆದ ಮದುವೆ, ₹2 ಲಕ್ಷಕ್ಕೆ ಮೋಸ!
ಈ ಮದುವೆಯನ್ನು ರಾಕೇಶ್ ಕುಟುಂಬದವರು ಜಿತೇಂದ್ರ ಎಂಬ ಓರ್ವ ಬ್ರೋಕರ್ ಮೂಲಕ ಮಾಡಿಕೊಂಡಿದ್ದರು. ಈತ ಆಗ್ರಾ ಮೂಲದ ಈ ಯುವತಿಗಾಗಿ ರಾಕೇಶ್ ಕುಟುಂಬದಿಂದ ಬರೋಬ್ಬರಿ ಎರಡು ಲಕ್ಷ ರೂಪಾಯಿಯನ್ನು ಪಡೆದಿದ್ದನಂತೆ. ಆ ಹುಡುಗಿ ದೊಡ್ಡ ಶ್ರೀಮಂತ ಕುಟುಂಬದವಳು, ಮದುವೆಗೆ ಯಾವುದೇ ತೊಂದರೆ ಇಲ್ಲ ಎಂದು ಆ ಬ್ರೋಕರ್ ಗ್ಯಾರಂಟಿ ಕೊಟ್ಟಿದ್ದ. ಜೈಪುರದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವೂ ನಡೆಯಿತು. ಎಲ್ಲವೂ ಸಹಜವಾಗಿದೆ ಎಂದುಕೊಂಡಿದ್ದ ರಾಕೇಶ್ ಕುಟುಂಬಕ್ಕೆ ಇದೊಂದು ಬಹುದೊಡ್ಡ ಪೆಟ್ಟು.

Marriage Scam – ಬ್ರೋಕರ್ ಗಳ ಬಗ್ಗೆ ಎಚ್ಚರಿಕೆ ವಹಿಸಿ
ಮದುವೆ ಒಂದು ದೊಡ್ಡ ವಂಚನೆ ಮತ್ತು ಹಣ ಲೂಟಿ ಮಾಡುವ ಸಂಚು ಎಂಬುದು ಈಗ ಸ್ಪಷ್ಟವಾಗಿದೆ. ತಮ್ಮ ಅಮೂಲ್ಯ ಆಭರಣ ಮತ್ತು ಹಣವನ್ನು ಕಳೆದುಕೊಂಡ ಬಾಧಿತ ವರನ ಕುಟುಂಬ ಕೊನೆಗೂ ಪೊಲೀಸರ ಮೊರೆ ಹೋಗಿದೆ. ಈ ವಂಚಕ ಗ್ಯಾಂಗ್‌ನ ಕೈವಾಡ ಇದರಲ್ಲಿ ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಿನಲ್ಲಿ, ಸುಂದರ ಕನಸು ಕಂಡಿದ್ದ ರಾಕೇಶ್ ಮತ್ತು ಅವರ ಕುಟುಂಬಕ್ಕೆ ಸಿಕ್ಕಿದ್ದು ಬರೀ ಆಘಾತ! ಬ್ರೋಕರ್ ಮದುವೆಗಳ ವಿಚಾರದಲ್ಲಿ ಎಷ್ಟೊಂದು ಎಚ್ಚರಿಕೆಯಿಂದ ಇರಬೇಕು ಎಂಬುದಕ್ಕೆ ಇದೊಂದು ಜೀವಂತ ಉದಾಹರಣೆ.
