7 ವರ್ಷದ ಮಗುವಿಗೆ ಕಚ್ಚಿದ ಸಾಕು ನಾಯಿಯನ್ನು ಕೊಂದು ತಿಂದ ಭೂಪ…..!

ತಮ್ಮ 7 ವರ್ಷದ ಮಗುವಿಗೆ ಸಾಕು ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ವ್ಯಕ್ತಿಯೋರ್ವ ಆ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಈ ವಿಚಿತ್ರ ಘಟನೆ ಥಾಯ್ ಲ್ಯಾಂಡ್ ನಲ್ಲಿ ನಡೆದಿದ್ದು, ಆರೋಪಿಯನ್ನು ಸಾಂಗ್ ವುಟ್ ಚುಥಾಂಗ್ (42) ವರ್ಷ ಎಂದು ಗುರ್ತಿಸಲಾಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಸಹ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Man killed dog and eat in thailand 0

ಥಾಯ್ ಲ್ಯಾಂಡ್ ನ ಚಿಯಾಂಗ್ ಮಾಯ್ ನಲ್ಲಿ ನಾಯಿಯನ್ನು ಕೊಂದು ತಿಂದ ವಿಚಿತ್ರ ಘಟನೆಯೊಂದು ನಡೆದಿದೆ. ಸಾಂಗ್ ವುಟ್ ಚುಥಾಂಗ್ ಎಂಬ ವ್ಯಕ್ತಿ ತಮ್ಮ 7 ವರ್ಷದ ಸೋದರಳಿಯನನ್ನು ತಮ್ಮ ಸಾಕು ನಾಯಿ ಕಚ್ಚಿದೆ ಎಂಬ ಕಾರಣದಿಂದ ಕೋಪಗೊಂಡು ನಾಯಿಯನ್ನು ಕೊಂದಿದ್ದಾನೆ. ಇದು ಸಾಲದು ಎಂಬಂತೆ ಆ ನಾಯಿಯನ್ನು ತಿಂದಿದ್ದಾನೆ. ತಮ್ಮ 10 ವರ್ಷ ಸಾಕು ನಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿನ ಮರಕ್ಕೆ ನೇತು ಹಾಕಿದ್ದಾನೆ. ನಾಯಿ ನರಳಿ ನರಳಿ ಸಾಯುವಂತೆ ಮಾಡಿದ್ದಾನೆ. ಬಳಿಕ ಸತ್ತ ನಾಯಿಯನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಹೋಗುತ್ತಾನೆ. ಈ ಕೃತ್ಯವನ್ನು ಸಾಂಗ್ ವುಟ್ ತನ್ನ ಸೋದರಳಿಯನ ಮುಂದೆಯೇ ಮಾಡಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ ವುಟ್ ನನ್ನು ಸ್ಥಳೀಯ ಪೊಲೀಸರು ಬಂಧನ ಮಾಡಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ ತನ್ನ ಶ್ವಾನವನ್ನು ಕೊಂದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ನಾಯಿಯನ್ನು ಕೊಂದ ಬಳಿಕ ಮೃತದೇಹವನ್ನು ಏನು ಮಾಡಿದ್ದಾನೆ ಎಂದು ಹೇಳಲು ಮೊದಲು ಸಾಂಗ್ ವುಡ್ ನಿರಾಕರಿಸಿದ್ದಾನೆ. ಪೊಲೀಸರು ಒತ್ತಡ ಹೇರಿದ ಬಳಿಕ ನಾಯಿಯನ್ನು ತಿಂದು ಅದರ ಮಾಂಸವನ್ನು ರೋಜ್ ಎಂಬ ಸ್ನೇಹಿತನಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಬಳಿಕ ಸಾಂಗ್ ವುಡ್ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್ ನಲ್ಲಿ ನಾಯಿಯ ಮಾಂಸ ಸಹ ಪತ್ತೆಯಾಗಿದೆ. ಇನ್ನೂ ಸಾಂಗ್ ವುಟ್ ಜೊತೆಗೆ ಆತನ ಸ್ನೇಹಿತ ರೋಜ್ ಎಂಬಾತನನ್ನು ಬಂಧನ ಮಾಡಿದ್ದು, ಥಾಯ್ ಲ್ಯಾಂಡ್ ನ ಕಾನೂನಿನಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಇತ್ತ ಪ್ರಾಣಿಪ್ರಿಯರು ಸಹ ಸಾಂಗ್ ವುಟ್ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *

Scroll to Top