ತನಗಿಂತ 6 ವರ್ಷ ಚಿಕ್ಕವನೊಂದಿಗೆ 3ನೇ ಮದುವೆಯಾದ 42 ವರ್ಷ ವಯಸ್ಸಿನ ಖ್ಯಾತ ನಟಿ…..!

ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನ ಕಾಮನ್ ಎಂಬಂತೆ ನಡೆಯುತ್ತಲೇ ಇರುತ್ತದೆ. ಇದಕ್ಕೆ ಅನೇಕ ಉದಾಹರಣೆಗಳೂ ಸಹ ಇದೆ. ಇದೀಗ ಮಾಲಿವುಡ್ ಸಿನಿರಂಗದ ಖ್ಯಾತ ನಟಿಯೊಬ್ಬರು ತನಗಿಂತ 6 ವರ್ಷ ಚಿಕ್ಕವನೊಂದಿಗೆ ಮೂರನೇ ಮದುವೆಯಾಗಿದ್ದು, ಅವರು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಅಷ್ಟಕ್ಕೂ ಆ ನಟಿ ಬೇರೆ ಯಾರೂ ಅಲ್ಲ ಮಾಲಿವುಡ್ ಸಿನಿರಂಗದ ಕಿರುತೆರೆ ಹಾಗೂ ಬೆಳ್ಳಿ ತೆರೆಯ ಖ್ಯಾತ ನಟಿ ಮೀರಾ ವಾಸುದೇವನ್. ಅವರ ಮದುವೆಯ ಪೊಟೋಗಳು ಇದೀಗ ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿವೆ.

Meera Vasudevan 3rd marriage pics

ಮಲಯಾಳಂ ಸಿನಿರಂಗದ ಖ್ಯಾತ ನಟಿ ಮಿರಾ ವಾಸುದೇವನ್ ತಮ್ಮ 42ನೇ ವಯಸ್ಸಿನಲ್ಲಿ ಮೂರನೇ ಮದುವೆಯಾಗಿದ್ದಾರೆ. ನಟಿ ಮೀರಾ ಕೇವಲ ಮಾಲಿವುಡ್ ಮಾತ್ರವಲ್ಲದೇ ಟಾಲಿವುಡ್, ಕಾಲಿವುಡ್, ಬಾಲಿವುಡ್ ಜೊತೆಗೆ ಸ್ಯಾಂಡಲ್ ವುಡ್ ನಲ್ಲೂ ಸಹ ಮಿಂಚಿದ್ದಾರೆ. ಉನ್ನೈ ಸರನಾದೈಂತೆನ್, ತನ್ಮಾತ್ರ ಹಾಗೂ ಜೆರಿ ಮೊದಲಾದ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಅಷ್ಟೇಅಲ್ಲದೇ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದ್ದಾರೆ. ಅವರ ನಟನಾ ಕೌಶಲ್ಯಕ್ಕಾಗಿ 2007 ರಲ್ಲಿ ಆಕೆಗೆ ಕೇರಳ ರಾಜ್ಯ ಟಿವಿ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಚಲನ ಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ವಿಡಿಯೋ ನೋಡಲು ಈ ಲಿಂಕ್ ಒಪೆನ್ ಮಾಡಿ: https://www.instagram.com/p/C7W2WCTPRj_/?hl=en

ಇನ್ನೂ ಸಿನೆಮಾಗಳ ಜೊತೆಗೆ ಆಕೆ ವೈಯುಕ್ತಿಕ ಜೀವನದ ಕಾರಣದಿಂದಲೂ ಭಾರಿ ಸುದ್ದಿಯಾಗಿದ್ದಾರೆ. ಕಾಲಿವುಡ್ ನಟ ಜಾನ್ ಕೊಕ್ಕನ್ ರವರನ್ನು ಮೀರಾ ವಾಸುದೇವನ್ ಮೊದಲಿಗೆ ಮದುವೆಯಾಗಿದ್ದರು. ಕೆಲವೊಂದು ಕಾರಣಗಳಿಂದ ಅವರೊಂದಿಗೆ ವಿಚ್ಚೇದನ ಪಡೆದುಕೊಂಡು ಬಳಿಕ ವಿಶಾಲ್ ಅಗರ್ವಾಲ್ ಎಂಬಾತನೊಂದಿಗೆ ಹಸೆಮಣೆ ಏರಿದರು. ಅವರಿಂದ ದೂರವಾದ ಬಳಿಕ ಇದೀಗ ತನಗಿಂತ 6 ವರ್ಷ ಚಿಕ್ಕವಯಸ್ಸಿನ ವ್ಯಕ್ತಿಯನ್ನು ವರಿಸಿದ್ದಾರೆ. ಆತನ ಹೆಸರು ವಿಪಿನ್ ನಯಂಗಮ್, ಸಿನಿರಂಗದಲ್ಲಿ ನಯಂಗಮ್ ಸಿನಮಾಟೋಗ್ರಾಫರ್‍ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 2019ರಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಮೀರಾ ಹಾಗೂ ನಯಂಗಮ್ ನಡುವೆ ಪರಿಚಯವಾಗಿತ್ತಂತೆ. ಬಳಿಕ ಅವರು ಮದುವೆಯಾಗುವ ನಿರ್ಣಯ ಮಾಡಿದ್ದಾರಂತೆ. ಏ.21 ರಂದು ನಟಿ ಮೀರಾ ತಮ್ಮ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈ ಪೊಟೋ ಹಾಗೂ ವಿಡಿಯೋಗಳನ್ನು ಮೀರಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡು. ನಾವು ದಂಪತಿಗಳಾಗಿ ನೊಂದಾಯಿಸಿಕೊಂಡಿದ್ದೇವೆ ಎಂದು ಪೋಸ್ಟ್ ಮಾಡಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

Leave a Comment

Your email address will not be published. Required fields are marked *

Scroll to Top