ಸಿಲಿಕಾನ್ ಸಿಟಿ ಬೆಂಗಳೂರಿನ ವೈಯಾಲಿಕಾವಲ್ ನಲ್ಲಿ ನಡೆದ ಮಹಾಲಕ್ಷ್ಮೀ (Mahalakshmi Case) ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಗಾಗಲೇ ಈ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಇದೀಗ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಂತಕ ಮುಕ್ತಿ ರಂಜನ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನಾ ಬರೆದ ಡೆತ್ ನೋಟ್ ನಲ್ಲಿ ಮಹಾಲಕ್ಷ್ಮಿಯನ್ನು ಕೊಲೆ (Mahalakshmi Case) ಮಾಡಿದ್ದು ಏಕೆ ಎಂಬ ವಿಚಾರ ಇದೀಗ ಬಯಲಾಗಿದೆ.
ಕಳೆದ ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಕೊಲೆ ಪ್ರಕರಣ ನಡೆದಿತ್ತು. ಮಹಾಲಕ್ಷ್ಮಿ ಎಂಬಾಕೆಯನ್ನು ಕೊಂದ ಹಂತಕ ಮುಕ್ತಿ ರಂಜನ್ ಆಕೆಯ ದೇಹವನ್ನು 53 ತುಂಡುಗಳಾಗಿ ಕತ್ತರಿಸಿ ಎಲ್ಲಾ ತುಂಡುಗಳನ್ನು ಫ್ರಿಡ್ಜ್ ನಲ್ಲಿಟ್ಟು ಮುಕ್ತಿ ರಂಜನ್ ಪರಾರಿಯಾಗಿದ್ದ. ಬಳಿಕ ಆತನನ್ನು ಪತ್ತೆ ಹಚ್ಚಲು ಪೊಲೀಸರು ಭಾರಿ ಪ್ಲಾನ್ ಮಾಡಿದ್ದರು. ಹಂತಕ ಒಡಿಶಾದಲ್ಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆ. ಪೊಲೀಸರು ಆತನನ್ನು ಪತ್ತೆ ಹಚ್ಚುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಬಳಿ ಡೆತ್ ನೋಟ್ ಸಹ ಸಿಕ್ಕಿತ್ತು. ಈ ಡೆತ್ ನೋಟ್ ಒರಿಯಾ ಭಾಷೆಯಲ್ಲಿ ಬರೆಯಲಾಗಿದ್ದು, ಆ ಡೆತ್ ನೋಟ್ ನಲ್ಲಿ ಕನ್ನಡ ಭಾಷಾಂತರಿಸಲಾಗಿತ್ತು. ಇದೀಗ ಈ ಪ್ರತಿ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿನ ಈ ವಿಚಾರ ಬಹಿರಂಗವಾಗಿದೆ.
ಹತ್ಯೆ ನಡೆದ ಸಮಯದಲ್ಲಿ ಮೊದಲು ಬಂದ ವರದಿಗಳಲ್ಲಿ ಆತ ಡೆತ್ ನೋಟ್ ನಲ್ಲಿ ಆಕೆಯನ್ನು ಕೊಲೆ ಮಾಡಲು ಜಗಳ ಎಂದು ಹೇಳಲಾಗಿತ್ತು. ಆದರೆ ಆಕೆಯ ಕೊಲೆಗೆ ಕೇವಲ ಜಗಳವೊಂದೇ ಅಲ್ಲ, ಅದಕ್ಕೂ ಮಿಗಿಲಾದ ವಿಚಾರಗಳಿವೆ ಎಂಬುದು ಡೆತ್ ನೋಟ್ ಮೂಲಕ ಬಹಿರಂಗಗೊಳಿಸಿದೆ. ಮಹಾಲಕ್ಷ್ಮಿ ತನ್ನನ್ನು ಕೊಲ್ಲಲು ಮುಂದಾಗಿದ್ದಳು ಮತ್ತು ದೇಹವನ್ನು ಎಸೆಯುವುದಕ್ಕೆ ಕಪ್ಪು ಸೂಟ್‌ಕೇಸ್ ಸಹ ಖರೀದಿಸಿದ್ದಳು ಎಂದು ಬರೆದಿದ್ದಾನೆ. ಇದಕ್ಕೆ ಸರಿಯಾಗಿ ಮಹಾಲಕ್ಷ್ಮಿ ಮನೆಯೊಳಗಿನ ಫ್ರಿಡ್ಜ್ ಬಳಿ ಕಪ್ಪು ಸೂಟ್ಕೇಸ್ ಕೂಡ ಪತ್ತೆಯಾಗಿತ್ತು. ನನ್ನನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಸೂಟ್‌ಕೇಸ್‌ನಲ್ಲಿ ಹಾಕಿ ನಂತರ ಎಸೆಯುವುದು ಅವಳ ಉದ್ದೇಶವಾಗಿತ್ತು. ನಾನು ಅವಳನ್ನು ಕೊಲ್ಲದಿದ್ದರೇ, ಮಹಾಲಕ್ಷ್ಮಿ ನನ್ನನ್ನು ಕೊಂದು ನನ್ನ ದೇಹವನ್ನು ಎಸೆಯುತ್ತಿದ್ದಳು. ನಾನು ಅಔಳನ್ನು ಆತ್ಮರಕ್ಷಣೆಗಾಗಿ ಕೊಲೆ ಮಾಡಿದ್ದಾನೆ. ಚಿನ್ನದ ಸರ ಮತ್ತು 7 ಲಕ್ಷ ರೂಪಾಯಿ ನೀಡಿದ್ದರೂ ಸಹ ಮಹಾಲಕ್ಷ್ಮೀ ನನ್ನ ಬಳಿ ನಿರಂತರವಾಗಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಜೊತೆಗೆ ನನ್ನನ್ನು ಹೊಡೆದಿದ್ದಳು ಎಂದು ಆರೋಪ ಮಾಡಿದ್ದಾನೆ ಹಂತಕ ಮುಕ್ತಿ ರಂಜನ್.
ಬೆಂಗಳೂರಿನ ಮಾಲ್ ಒಂದರಲ್ಲಿ ತ್ರಿಪುರಾ ಮೂಲದ ಮಹಾಲಕ್ಷ್ಮೀ ಕೆಲಸ ಮಾಡುತ್ತಿದ್ದಳು. ಈಗಾಗಲೇ ಆಕೆಗೆ ಮದುವೆಯಾಗಿದ್ದು, ಒಂದು ಮಗುವಿತ್ತಂತೆ. ಆದರೆ ಆಕೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳಂತೆ. ಹಂತಕ ಮುಕ್ತಿರಂಜನ್ ಆತ್ಮಹತ್ಯೆ ಪತ್ರದ ಅನುವಾದ ಮತ್ತು ಆತನ ಮರಣೋತ್ತರ ಪರೀಕ್ಷೆಯ ವರದಿಯನ್ನು ಒಡಿಶಾ ಪೊಲೀಸರಿಂದ ಪಡೆದುಕೊಂಡಿರುವುದರಿಂದ ನಾವು ಶೀಘ್ರದಲ್ಲೇ ಚಾಜ್ ಶೀಟ್ ಸಲ್ಲಿಸುತ್ತೇವೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್ ತಿಳಿಸಿದ್ದಾರೆ.