HomeNationalMadhya Pradesh Crime : ಗಂಡನ ಹೆಣದ ಮುಂದೆ ನಾಟಕವಾಡಿದ ಪತ್ನಿ: ಮದ್ಯಪ್ರದೇಶದ ಭೀಕರ ಕೊಲೆಯ...

Madhya Pradesh Crime : ಗಂಡನ ಹೆಣದ ಮುಂದೆ ನಾಟಕವಾಡಿದ ಪತ್ನಿ: ಮದ್ಯಪ್ರದೇಶದ ಭೀಕರ ಕೊಲೆಯ ಅಸಲಿ ಸತ್ಯ ಬಯಲು!

ನಮ್ಮ ಸಮಾಜದಲ್ಲಿ ಪತಿ-ಪತ್ನಿಯ ಸಂಬಂಧಕ್ಕೆ ಪವಿತ್ರವಾದ ಸ್ಥಾನವಿದೆ. ಆದರೆ, ಇಲ್ಲೊಬ್ಬಳು ಮಹಿಳೆ (Madhya Pradesh Crime) ತನ್ನ ಸುಖಕ್ಕಾಗಿ, ಪ್ರೀತಿಯ ನಂಬಿಕೆಗೆ ದ್ರೋಹ ಬಗೆದು ಕ್ರೂರವಾಗಿ ನಡೆದುಕೊಂಡಿದ್ದಾಳೆ. ದರೋಡೆಕೋರರು ಬಂದು ಗಂಡನನ್ನು ಕೊಂದರು ಎಂದು ಊರೆಲ್ಲಾ ಕೇಳುವಂತೆ ಬಿಕ್ಕಿ ಬಿಕ್ಕಿ ಅತ್ತ ಮಹಿಳೆಯ ಅಸಲಿ ಮುಖವಾಡ ಕಳಚಿದಾಗ ಪೊಲೀಸರೇ ಶಾಕ್ ಆಗಿದ್ದಾರೆ.

Madhya Pradesh crime case where woman planned husband murder and staged fake robbery in Dhar district

Madhya Pradesh Crime – ದರೋಡೆಕೋರರ ಅಟ್ಟಹಾಸ ಅಂದುಕೊಂಡಿದ್ದ ಜನ

ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಿವಾಸಿ ಪ್ರಿಯಾಂಕಾ ಪುರೋಹಿತ್ ಎಂಬಾಕೆಯ ಅಳು ನೋಡಿ ಇಡೀ ಗ್ರಾಮವೇ ಕಣ್ಣೀರು ಹಾಕಿತ್ತು. ಅಯ್ಯೋ ನನ್ನ ಕಣ್ಣೆದುರೇ ಗಂಡನನ್ನು ಕೊಂದುಬಿಟ್ಟರಲ್ಲಾ ಪಾಪಿಗಳು, ನನ್ನ ಸೌಭಾಗ್ಯವೇ ಹೊರಟುಹೋಯಿತು, ನಾನಿನ್ನು ಯಾರನ್ನು ನಂಬಿ ಬದುಕಲಿ ಎಂದು ಆಕೆ ಎದೆ ಬಡಿದುಕೊಂಡು ರೋಧಿಸುತ್ತಿದ್ದರೆ, ನೆರೆಹೊರೆಯವರು ಆಕೆಯನ್ನು ಸಮಾಧಾನ ಮಾಡಲು ಹರಸಾಹಸ ಪಡುತ್ತಿದ್ದರು. ಪರಿಸ್ಥಿತಿ ಕಂಡು ಮರುಗಿದ ಜನರೆಲ್ಲಾ ಆಕೆಗೆ ಸಾಂತ್ವನ ಹೇಳುತ್ತಿದ್ದರು. Read this also : ಪ್ರೀತಿಸಿ ಮದುವೆಯಾದವಳ ಶೀಲ ಶಂಕಿಸಿದ ಪತಿ: ನಾಲ್ಕೇ ತಿಂಗಳಿಗೆ ಸುಫಿಯಾ ಬಾನು ಬದುಕು ಅಂತ್ಯ!

ಪೊಲೀಸರ ಮುಂದೆ ನೀಡಿದ ಕಟ್ಟುಕಥೆ

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮುಂದೆ ಪ್ರಿಯಾಂಕಾ ಒಂದು ಭಯಾನಕ ಕಥೆಯನ್ನು ಕಟ್ಟಿದ್ದಳು. ರಾತ್ರಿ ಕೆಲವು ದರೋಡೆಕೋರರು ಮನೆಗೆ ನುಗ್ಗಿ ತನ್ನನ್ನು ಮತ್ತು ಪತಿ ದೇವಕೃಷ್ಣ ಅವರನ್ನು (ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ) ಒತ್ತೆಯಾಳಾಗಿ ಇರಿಸಿಕೊಂಡರು ಎಂದು ವಿವರಿಸಿದಳು. ತನ್ನ ಪತಿ ದರೋಡೆಯನ್ನು (Madhya Pradesh Crime)  ವಿರೋಧಿಸಿದಾಗ ಹರಿತವಾದ ಆಯುಧದಿಂದ ಅವರ ಕುತ್ತಿಗೆ ಸೀಳಿ ಕೊಂದರು ಮತ್ತು ಮನೆಯಲ್ಲಿದ್ದ ಸುಮಾರು ಮೂರೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾದರು ಎಂದು ಕಣ್ಣೀರು ಹಾಕುತ್ತಾ ದೂರು ನೀಡಿದ್ದಳು.

ಪೊಲೀಸರಿಗೆ ಸಂಶಯ ಮೂಡಿಸಿದ ಆ ಒಂದು ತಪ್ಪು

ಮೇಲ್ನೋಟಕ್ಕೆ ಇದೊಂದು ಭೀಕರ ದರೋಡೆ ಮತ್ತು ಕೊಲೆ ಪ್ರಕರಣದಂತೆ ಕಂಡರೂ, ಪೊಲೀಸರಿಗೆ ಪ್ರಿಯಾಂಕಾಳ ವರ್ತನೆಯಲ್ಲಿ ಏನೋ ಸಂಶಯ ಮೂಡಿತು. ತನಿಖೆಯ ವೇಳೆ ಪೊಲೀಸರು (Madhya Pradesh Crime)  ಕೇಳಿದ ಪ್ರಶ್ನೆಗಳಿಗೆ ಆಕೆ ಒಂದೊಂದು ಸಲ ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಳು. ಸಂಶಯಗೊಂಡ ಪೊಲೀಸರು ಮನೆಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಅಸಲಿ ಕಥೆ ಬಯಲಾಯಿತು.

ಯಾವ ಮೂರೂವರೆ ಲಕ್ಷ ರೂ. ಹಣ ಮತ್ತು ಆಭರಣ ದರೋಡೆಯಾಗಿದೆ ಎಂದು ಆಕೆ ಹೇಳಿದ್ದಳೋ, ಅವೆಲ್ಲವೂ ಮನೆಯ ಒಂದು ಮೂಲೆಯಲ್ಲಿಯೇ ಸುರಕ್ಷಿತವಾಗಿ ಅಡಗಿಸಿಡಲಾಗಿತ್ತು. ಕಳ್ಳತನವೇ ಆಗಿಲ್ಲ ಎಂದಮೇಲೆ ಈ (Madhya Pradesh Crime)  ಕೊಲೆ ನಡೆದಿದ್ದಾದರೂ ಹೇಗೆ ಎಂಬ ಸತ್ಯವನ್ನು ಕೆದಕಲು ಪೊಲೀಸರು ಮುಂದಾದರು.

15ನೇ ವಯಸ್ಸಿನ ಮದುವೆ ಮತ್ತು ಅಕ್ರಮ ಸಂಬಂಧದ ಕಿಚ್ಚು

ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಾಂಕಾ ಮಾಡಿದ ಭಯಾನಕ ಕೃತ್ಯ ಬಯಲಾಯಿತು. ಪ್ರಿಯಾಂಕಾ ಕೇವಲ 15 ವರ್ಷದವಳಿದ್ದಾಗಲೇ ದೇವಕೃಷ್ಣ ಅವರೊಂದಿಗೆ ಬಾಲ್ಯ ವಿವಾಹವಾಗಿತ್ತು. ಸಂಸಾರ ಸುಗಮವಾಗಿಯೇ ಸಾಗುತ್ತಿತ್ತು ಆದರೆ ಜೀವನದ ಹಾದಿಯಲ್ಲಿ ಆಕೆಗೆ ಕಮಲೇಶ್ ಪುರೋಹಿತ್ ಎಂಬಾತನ (Madhya Pradesh Crime)  ಪರಿಚಯವಾಗಿ, ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಪ್ರಿಯಕರನ ಜೊತೆ ಸೇರಿ ಬಾಳಲು ಪತಿ ಅಡ್ಡಿಯಾಗಿದ್ದಾನೆ ಎಂದು ಅರಿತ ಆಕೆ, ದೇವಕೃಷ್ಣ ಅವರನ್ನು ಮುಗಿಸಲು ಸ್ಕೆಚ್ ಹಾಕಿದ್ದಳು.

Madhya Pradesh crime case where woman planned husband murder and staged fake robbery in Dhar district

ಒಂದು ಲಕ್ಷ ರೂ. ಸುಪಾರಿ ಮತ್ತು ಸಿನಿಮಾ ಮಾದರಿಯ ನಾಟಕ

ಪ್ರಿಯಕರ ಕಮಲೇಶ್ ತನ್ನ ಗೆಳೆಯ ಸುರೇಂದ್ರ ಎಂಬಾತನಿಗೆ ದೇವಕೃಷ್ಣನನ್ನು ಕೊಲ್ಲಲು ಒಂದು ಲಕ್ಷ ರೂ. ಸುಪಾರಿ ನೀಡಿದ್ದ. ಯೋಜನೆಯಂತೆ ಸುರೇಂದ್ರ ಮನೆಗೆ ನುಗ್ಗಿ ಮಲಗಿದ್ದ ದೇವಕೃಷ್ಣನನ್ನು ಕೊಚ್ಚಿ ಕೊಂದಿದ್ದ. ಇದು ದರೋಡೆಯಂತೆ (Madhya Pradesh Crime)  ಕಾಣಲಿ ಎಂಬ ಕಾರಣಕ್ಕೆ ಪ್ರಿಯಾಂಕಾಳನ್ನು ಮತ್ತೊಂದು ಕೋಣೆಯಲ್ಲಿ ಕಟ್ಟಿಹಾಕಿ ಕಳ್ಳತನದ ನಾಟಕವಾಡಲಾಗಿತ್ತು.

ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ : Click Here

ಸದ್ಯ ಪೊಲೀಸರು ಕಿರಾತಕ ಪತ್ನಿ ಪ್ರಿಯಾಂಕಾ ಮತ್ತು ಆಕೆಯ ಪ್ರಿಯಕರ ಕಮಲೇಶ್‌ನನ್ನು ಅರೆಸ್ಟ್ ಮಾಡಿದ್ದಾರೆ. ಸುಪಾರಿ ಕಿಲ್ಲರ್ ಸುರೇಂದ್ರನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತನ್ನ ಸುಖಕ್ಕಾಗಿ ಹದಿನೈದು ವರ್ಷ (Madhya Pradesh Crime) ಜೊತೆಗಿದ್ದ ಪತಿಯನ್ನೇ ಕೊಂದ ಈಕೆಯ ಕ್ರೌರ್ಯ ಕಂಡು ಜನ ಈಗ ಮರುಗುವ ಬದಲು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular