Love Marriage – ಚಿಕ್ಕಬಳ್ಳಾಪುರದ ಪ್ರೇಮ ಜೋಡಿಯೊಂದು ಪೋಷಕರ ವಿರೋಧದ ನಡುವೆಯೂ ಧೈರ್ಯ ಮಾಡಿ ಮದುವೆಯಾಗಿದ್ದರೂ, ಅವರ ಪ್ರೇಮ ವಿವಾಹ ಕೇವಲ 15 ದಿನಗಳಲ್ಲಿ ಮುರಿದುಬಿದ್ದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ. ತಮ್ಮ ಪ್ರೀತಿಗೆ ಪೋಷಕರ ವಿರೋಧವಿದ್ದರೂ ಸಹ ಹಿಂದೂ ಯುವಕ ಹಾಗೂ ಮುಸ್ಲೀಂ ಯುವತಿ ಮದುವೆಯಾಗಿದ್ದರು. ಆದರೆ ಈ ಮದುವೆ ಇದೀಗ ಮುರಿದು ಬಿದ್ದಿದ್ದು, ಯುವತಿ ತವರು ಮನೆ ಸೇರಿದ್ದಾಳೆ ಎಂದು ತಿಳಿದುಬಂದಿದೆ.

Love Marriage – ಕುಟುಂಬಸ್ಥರನ್ನು ಎದುರಿಸಿ ಮದುವೆಯಾಗಿದ್ದ ಜೋಡಿ
ಚಿಕ್ಕಬಳ್ಳಾಪುರದ ಮೈಲಪನಹಳ್ಳಿ ಗ್ರಾಮದ 23 ವರ್ಷದ ಫಸಿಹಾ ಮತ್ತು 25 ವರ್ಷದ ನಾಗಾರ್ಜುನ ಎಂಬ ಯುವಕ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಪ್ರೇಮಿಗಳು ಕಳೆದ ಮಾರ್ಚ್ 23, 2025 ರಂದು ಪ್ರೇಮ ವಿವಾಹವಾಗಿದ್ದರು. ಆದರೆ, ಈ ಮದುವೆಗೆ ಯುವಕನ ಕುಟುಂಬದಲ್ಲಿ ಒಪ್ಪಿಗೆ ಇದ್ದರೂ, ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ರಕ್ಷಣೆ ಕೋರಿ ಈ ಜೋಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಮೊರೆ ಹೋಗಿತ್ತು. ಈ ವೇಳೆ ಯುವತಿಯ ಪೋಷಕರು ಆಕೆಯ ಮನವೊಲಿಸಲು ತುಂಬಾನೆ ಪ್ರಯತ್ನಗಳನ್ನು ಮಾಡಿದ್ದರು. ಆದರೂ ಒಪ್ಪದ ಯುವತಿ ಯುವಕನ ಜೊತೆ ಹೋಗಿದ್ದಳು.
ಇದನ್ನೂ ಓದಿ : ಪೋಷಕರ ವಿರೋಧದ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿಕ್ಕಬಳ್ಳಾಪುರದ ಹಿಂದೂ-ಮುಸ್ಲಿಂ ಜೋಡಿ….!
Love Marriage – ಮದುವೆಯಾದ ಎರಡು ವಾರದಲ್ಲೆ ತವರು ಮನೆ ಸೇರಿದ ಯುವತಿ
ಆದರೆ, ಮದುವೆಯಾದ ಕೇವಲ 15 ದಿನಗಳಲ್ಲೇ ಫಸಿಹಾ ತನ್ನ ತಾಯಿಯ ಮನೆಗೆ ವಾಪಸ್ಸಾಗಿದ್ದಾರೆ. ತನ್ನ ತಾಯಿಗೆ ಅನಾರೋಗ್ಯವಿದ್ದು, ತನ್ನ ನೋವಿನಿಂದ ಅವರು ಬಳಲುತ್ತಿದ್ದಾರೆ ಎಂದು ಕಾರಣ ನೀಡಿ ಫಸಿಹಾ ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ತಾಯಿಯೊಂದಿಗೆ ಇರಲು ನಿರ್ಧರಿಸಿದ್ದಾಳೆ ಎಂದರು ತಿಳಿದುಬಂದಿದೆ.