50ರ ಪ್ರಾಯದ ಅಂಕಲ್ ಗೆ ಪೋನ್ ಮೂಲಕ ಪರಿಚಯವಾದ ಯುವತಿಯೊಂದಿಗೆ ಪ್ರೀತಿ ಶುರುವಾಗಿದ್ದು, ಆ ಪ್ರೀತಿಯನ್ನು ನಂಬಿದ ಅಂಕಲ್ ಗೆ ಆ ಟೆಲಿಪೋನ್ ಗೆಳತಿ ಮೋಸ ಮಾಡಿದ್ದಾಳೆ. ಪ್ರೀತಿ ಕುರುಡು ಎಂದು ಹೇಳಲಾಗುತ್ತದೆ. ಅದೇ ಇಲ್ಲಿ ನಡೆದಿರೋದು, 50 ಅಂಕಲ್ ಗೆ ಪೋನ್ ಮೂಲಕ ಪರಿಚಯವಾದ (Love Dhoka) ಹುಡುಗಿ ಮೋಸ ಮಾಡಿದ್ದಾಳೆ. ಅಂಕಲ್ ನನ್ನು ಕಿಡ್ನಾಪ್ ಮಾಡಿ ಮೂರು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದು, ಇದೀಗ ಯುವತಿ ಸೇರಿದಂತೆ ಮೂರು ಮಂದಿ ಈ ಪೊಲೀಸರ ಅತಿಥಿಗಳಾಗಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,
ಉತ್ತರ ಪ್ರದೇಶಧ ಲಲಿತಪುರಂ ಎಂಬ ಗ್ರಾಮದ ನಿವಾಸಿ ಲಲ್ಲು ಚೌಬೆ ಎಂಬ 50 ವರ್ಷದ ವ್ಯಕ್ತಿ ತನ್ನ ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದ. ಆತನ ಸಂಸಾರದಲ್ಲಿ ಹೆಚ್ಚಾಗಿ ಸಮಸ್ಯೆಗಳಿಲ್ಲದ ಕಾರಣ ಅಚ್ಚುಕಟ್ಟಾಗಿ ಜೀವನ ಸಾಗುತ್ತಿತ್ತು. ಇನ್ನೂ ಲಲ್ಲು ಚೌಬೆಗೆ 50 ವರ್ಷ ವಯಸ್ಸಾದರೂ 20ರ ವಯಸ್ಸಿನ ಯುವಕನಂತಾಡುತ್ತಿದ್ದ. ಪೋನ್ ಹಿಡಿದು ಕುಳಿತರೇ ಬೇರೆ ಲೋಕದ ಪರಿವೇ ಇರುತ್ತಿರಲಿಲ್ಲ. ಈ ನಡುವೆ ಲಲ್ಲು ಚೌಬೆಗೆ ಕರೆಯೊಂದು ಬಂದಿದೆ. ಅದು ಯುವತಿಯ ಧ್ವನಿ. ಈ ಧ್ವನಿಗೆ ಮಾರು ಹೋದ ಲಲ್ಲು ಚೌಬೆ, ಮತ್ತೆ ಮತ್ತೆ ಈ ಧ್ವನಿ ಕೇಳಿಸಬೇಕು ಎನಿಸಿದೆ. ಮೊದಲಿಗೆ ರಾಂಗ್ ನಂಬರ್ ಎಂದು ಕರೆ ಮಾಡಿದ ಯುವತಿ, ಬಳಿಕ ಅದು ಡೈಲಿ ನಂಬರ್ ಆಗಿ ಬದಲಾಗಿತ್ತು. ಇಬ್ಬರೂ ಆಗಾಗ ಪೋನ್ ನಲ್ಲಿ ಸಂಭಾಷಣೆ ಮಾಡಿಕೊಳ್ಳುತ್ತಿದ್ದು, ಇದು ಲಲ್ಲು ಅಂಕಲ್ ಗೆ ಪ್ರೀತಿ ಹುಟ್ಟುವಂತೆ ಮಾಡಿದೆ.
ಇನ್ನೂ ಲಲ್ಲು ಅಂಕಲ್ ಗೆ ಪ್ರೀತಿ ಶುರುವಾಗಿದ ಬಗ್ಗೆ ಮನೆಯವರಿಗೆ ಗೊತ್ತಿಲ್ಲ. ಪೋನ್ ನಲ್ಲಿ ಪರಿಚಯವಾದ ಯುವತಿಯ ಮೇಲೆ ತುಂಬಾನೆ ಪ್ರೀತಿ ಬೆಳೆಸಿಕೊಂಡಿದ್ದಾನೆ. ಆಕೆಯನ್ನು ಭೇಟಿಯಾಗಬೇಕೆಂಬ ಬಯಕೆ ದಿನೇ ದಿನೇ ಹೆಚ್ಚಾಗಿದೆ. ಇದೇ ಸಮಯದಲ್ಲಿ ಲಡ್ಡು ಬಂದು ಬಾಯಿಗೆ ಬಿತ್ತು ಎಂಬಂತೆ ಪೋನ್ ಗೆಳತಿಯೇ ಡೇಟಿಂಗ್ ಮಾಡೋಣ ಎಂದು ಆಫರ್ ಇಟ್ಟಿದ್ದಾಳೆ. ಡೇಟಿಂಗ್ ಮಾಡೋಣ ಭೇಟಿಯಾಗಲು ಸಾಧ್ಯವಾಗುತ್ತಾ ಎಂದು ಕೇಳಿದ್ದಾಳೆ. ಅದಕ್ಕೆ ನೀನು ಕರೆಯೋದು ಹೆಚ್ಚಾ, ನಾ ಬರೋದು ಹೆಚ್ಚಾ ಎಂದು ಈಗಲೇ ಬಂದುಬಿಡುತ್ತೇನೆ ಎಂದು ಹೇಳಿದ್ದಾನೆ. ಬಳಿಕ ಭೇಟಿ ಸ್ಥಳ ನಿಗಧಿಪಡಿಸಿಕೊಂಡಿದ್ದಾರೆ. ಯುವತಿ ಹೇಳಿದ ಸಮಯಕ್ಕಿಂತಲೂ ಮುಂಚಿತವಾಗಿಯೇ ಲಲ್ಲು ಅಂಕಲ್ ಸ್ಥಳಕ್ಕೆ ಹೋಗಿದ್ದಾನೆ. ಬಳಿಕ ಲಲ್ಲು ಅಂಕಲ್ ಪೋನ್ ಸ್ವಿಚ್ ಆಫ್ ಆಗಿದೆ.
ಯುವತಿ ಸೇರಿದಂತೆ ಮೂರು ಮಂದಿ ಲಲ್ಲು ಅಂಕಲ್ ನನ್ನು ಕಿಡ್ನಾಪ್ ಮಾಡಿ ಝಾನ್ಸಿಗೆ ಕರೆ ತಂದಿದ್ದಾರೆ. ಮರುದಿನ ಲಲ್ಲು ಅಂಕಲ್ ಪುತ್ರನಿಗೆ ಕರೆ ಮಾಡಿ ಮೂರು ಲಕ್ಷ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಆದರೆ ಲಲ್ಲು ಅಂಕಲ್ ಪುತ್ರ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಲಲ್ಲು ಚೌಭೆಯನ್ನು ರಕ್ಷಣೆ ಮಾಡಲು ಪ್ಲಾನ್ ಮಾಡಿದ್ದಾರೆ. ಪೊಲೀಸ್ ಪೇದೆಯೋಬ್ಬರನ್ನೇ ಲಲ್ಲು ಪುತ್ರ ಎಂದು ಆತನ ಕೈಗೆ 1 ಲಕ್ಷ ರೂಪಾಯಿ ಹಿಡಿದು ಕಿಡ್ನಾಪರ್ಸ್ ಬಳಿ ತೆರಳಿದ್ದಾರೆ. ನಂತರ ಪೊಲೀಸ್ ಪೇದೆ ಒಂದು ಲಕ್ಷ ಕಿಡ್ನಾಪರ್ಸ್ ಕೈಗೆ ನೀಡಿದ್ದಾರೆ.
ಒಂದು ಲಕ್ಷ ಪಡೆದುಕೊಂಡ ಕಿಡ್ನಾಪರ್ಸ್ ಉಳಿದ 2 ಲಕ್ಷ ರುಪಾಯಿಯನ್ನು ನನ್ನ ತಂದೆಯನ್ನು ಬಿಡುಗಡೆ ಮಾಡಿದ ಬಳಿಕ ನೀಢುವುದಾಗಿ ಹೇಳಿದ್ದಾನೆ. ಬಳಿಕ ಝಾನ್ಸಿ ಬಳಿ ಲಲ್ಲು ಅಂಕಲ್ ನನ್ನು ಕೂಡಿಹಾಕಿದ್ದ ಸಣ್ಣ ಮನೆಗೆ ಹೋಗಿದ್ದಾರೆ. ಈ ವೇಳೆ ಮೊದಲೇ ಪೊಲೀಸರ ತಂಡ ಹಿಂಬಾಲಿಸಿಕೊಂಡು ಬಂದಿದ್ದು, ಕೂಡಲೇ ದಾಳಿ ನಡೆಸಿ ಲಲ್ಲು ಅಂಕಲ್ ನನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಅಖಿಲೇಶ್ ಅಹಿರ್ವಾರ್(30), ಸತೀಶ್ ಸಿಂಗ್ ಬುಂಡೇಲಾ(27) ಹಾಗೂ ಕಿರಣ್ (35) ಸೇರಿದಂತೆ ಯುವತಿಯನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಾಗ ಈ ನಾಲ್ವರೂ ಇದೇ ರೀತಿಯಲ್ಲಿ ಪುರುಷರನ್ನು ಟ್ರಾಪ್ ಮಾಡಿ ಹಣ ವಸೂಲಿ ಮಾಡುವುದು ಕಾಯಕವಾಗಿತ್ತು ಎಂದು ತಿಳಿದುಬಂದಿದೆ.