Saturday, August 30, 2025
HomeStateLocal News : ಸಮಾಜದ ಅನಿಷ್ಟ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿದ ಮಹನೀಯರನ್ನು ಸದಾ ಸ್ಮರಿಸಬೇಕು:...

Local News : ಸಮಾಜದ ಅನಿಷ್ಟ ಪದ್ದತಿಗಳ ಬಗ್ಗೆ ಜಾಗೃತಿ ಮೂಡಿಸಿದ ಮಹನೀಯರನ್ನು ಸದಾ ಸ್ಮರಿಸಬೇಕು: ಶಾಸಕ ಸುಬ್ಬಾರೆಡ್ಡಿ

Local News – ಸುಮಾರು ವರ್ಷಗಳ ಹಿಂದೆ ರೂಢಿಯಲ್ಲಿದ್ದ ಮೂಡನಂಬಿಕೆ ಸೇರಿದಂತೆ ಅನೇಕ ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡಿ, ಜನರನ್ನು ಜಾಗೃತರನ್ನಾಗಿ ಮಾಡಿದಂತಹ ಕೈವಾರ ತಾತಯ್ಯ, ಯೋಗಿ ವೇಮನ, ಬಸವಣ್ಣ ರವರಂತಹ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

Local News - Sri Yogi Narayana Yatindra 299th birth anniversary event in Gudibande

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ ರವರ 299ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ಪದ್ದತಿ, ಅಸ್ಪೃಶ್ಯತೆ ಸೇರಿದಂತೆ ಹಲವಾರು ಮೂಡನಂಬಿಕೆಗಳ ವಿರುದ್ದ ಜನಸಾಮಾನ್ಯರಲ್ಲಿ ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸುವುದು, ಅನಿಷ್ಟ ಪದ್ದತಿಗಳ ವಿರುದ್ದ ಹೋರಾಡಿದಂತಹ ಮಹನೀಯರನ್ನು ಕೇವಲ ಅವರವರ ಜಯಂತಿಗಳಂದು ಮಾತ್ರವಲ್ಲದೇ  ಸದಾ ಅವರನ್ನು ಸ್ಮರಿಸಬೇಕು, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಆಗ ಮಾತ್ರ ಅವರಿಗೆ ನಿಜವಾದ ಗೌರವ ಸೂಚಿಸದಂತಾಗುತ್ತದೆ. ಅನೇಕರು ಕಷ್ಟ ಬಂದಾಗ ವೆಂಕಟರಮಣ ಎಂದು ಇರುತ್ತಾರೆ. ಜೊತೆಗೆ ನಾನು ಪ್ರತಿನಿತ್ಯ ದೇವರನ್ನು ಪೂಜೆ ಮಾಡುತ್ತೇವೆ. ಆದರೂ ನಮಗೆ ಕಷ್ಟ ಕೊಡುತ್ತಾನೆ ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು ದೊಡ್ಡದಾದ ಅನಾಹುತದ ಬದಲು ಚಿಕ್ಕ ಗಾಯವನ್ನು ದೇವರು ಮಾಡಿರುತ್ತಾರೆ ಅಷ್ಟೆ. ದೇವರು ಸದಾ ನಮ್ಮನ್ನು ಕಾಪಾಡುತ್ತಿರುತ್ತಾನೆ ಎಂದರು.

ಇನ್ನೂ ಎಲ್ಲರೂ ದೇವರನ್ನು ಸದಾ ಪೂಜಿಸಬೇಕು. ದೇವರನ್ನು ಪೂಜೆ ಮಾಡುವುದು ಎಂದರೇ ದೂರದ ಪ್ರದೇಶಗಳಲ್ಲಿ ಹೋಗುವುದು ಮಾತ್ರವಲ್ಲ ತಮ್ಮ ಮನದಲ್ಲಿಯೇ ದೇವರನ್ನು ಇಟ್ಟು ಅಥವಾ ಮನೆಯಲ್ಲಿಯೇ ದೇವರನ್ನು ಪೂಜಿಸಿ, 10-15 ನಿಮಿಷ ಧ್ಯಾನ ಮಾಡಿದರೇ ದೇವರು ಒಲಿಯುತ್ತಾನೆ. ಇಂದು ನಾವೆಲ್ಲರೂ ಕೈವಾರ ತಾತಯ್ಯನವರ ಕೀರ್ತನೆಗಳನ್ನು ಹಾಡೋಣ, ಅವರ ಆದರ್ಶಗಳನ್ನು ಪಾಲನೆ ಮಾಡೋಣ. ಇನ್ನೂ ಸಮುದಾಯದವರು ಸಮುದಾಯ ಭವನ ಹಾಗೂ ಕೈವಾರ ತಾತಯ್ಯನವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದು, ಈ ಸಂಬಂಧ ಶೀಘ್ರದಲ್ಲೇ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

Local News - Sri Yogi Narayana Yatindra 299th birth anniversary event in Gudibande

ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸ.ನ.ನಾಗೇಂದ್ರ ಮಾತನಾಡಿ, ಬಲಿಜ ಎಂಬ ಹೆಸರು ಹೇಗೆ ಬಂತು ಎಂಬ ವಿಚಾರವನ್ನು ತಿಳಿಸಿದರು. ಬಲಿಜ ಎಂದರೇ ತ್ಯಾಗದಲ್ಲಿ ಹುಟ್ಟಿದವರು ಬಲಿಜಿಗರು. ಸಮಾಜಕ್ಕೆ ಅವರ ಸೇವೆ ಅಪಾರವಾದುದು. ಈ ಭಾಗದಲ್ಲಿ ಹೆಚ್ಚು ಬಲಿಷ್ಟವಾದುದು ಬಲಿಜ ಸಮುದಾಯ. ಸಂಘಟನೆಯ ಮೂಲಕ ಎಲ್ಲವನ್ನೂ ಸಾಧನೆ ಮಾಡಬಹುದು. ಈ ನಿಟ್ಟಿನಲ್ಲಿ ಸಮುದಾಯ ಸಂಘಟಿತರಾಗಬೇಕು. ಪ್ರಸಿದ್ದಿ ಪಡೆದಂತಹ ಅಶ್ವತ್ಥಪ್ಪಸ್ವಾಮಿ ಮಠದಲ್ಲಿ ಸುಮಾರು ವರ್ಷಗಳ ಹಿಂದೆ ಸಾಮೂಹಿಕ ವಿವಾಹಗಳು ನಡೆಯುತ್ತಿತ್ತು. ಇದೀಗ ಅದು ನಿಂತಿದೆ. ಈ ಸಂಪ್ರದಾಯವನ್ನು ಪುನಃ ಪ್ರಾರಂಭಿಸಬೇಕು. ನಮ್ಮ ಸಂಸ್ಕೃತಿಯನ್ನು ನಾವು ಕಾಪಾಡಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಕೈವಾರ ತಾತಯ್ಯನವರ ಭಾವಚಿತ್ರವುಳ್ಳ ಬೆಳ್ಳಿರಥಗಳನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ಬಲಿಜ ಸಂಘದ ಅಧ್ಯಕ್ಷ ವೆಂಕಟರಾಯಪ್ಪ, ಕಾರ್ಯದರ್ಶಿ ಶ್ರೀನಿವಾಸನಾಯ್ದು, ಪ.ಪಂ ಅಧ್ಯಕ್ಷ ವಿಕಾಸ್, ಮುಖಂಡರಾದ ಸಾಂಬಮೂರ್ತಿ, ರಾಮಚಂದ್ರಪ್ಪ, ದ್ವಾರಕನಾಥನಾಯ್ಡು, ರಮೇಶ್, ಅಂಬರೀಶ್, ಪ.ಪಂ ಸದಸ್ಯೆ ಮಂಜುಳ ಸೇರಿದಂತೆ ಬಲಿಜ ಸಮುದಾಯದ ಮುಖಂಡರು ಹಾಜರಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular