Local News: ನೂತನ ತಹಸೀಲ್ದಾರರಿಗೆ ರೈತ ಸಂಘದಿಂದ ಸನ್ಮಾನ….!

Local News – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗುಡಿಬಂಡೆ ತಾಲೂಕಿನ ನೂತನ ತಹಸೀಲ್ದಾರ್‍ ಸಿಗ್ಬತ್ತುಲ್ಲಾ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ರೈತರು ಬೆಳೆದ ತರಕಾರಿಗಳನ್ನು ನೀಡಿ ಸನ್ಮಾನಿಸಿದ್ದು, ವಿಶೇಷವಾಗಿತ್ತು.

Raita sangha welcome tahalsidar 0

ಈ ಸಮಯದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್, (Local News) ಸಿಗ್ಬತ್ತುಲ್ಲಾ ರವರು ಈ ಹಿಂದೆ ಗುಡಿಬಂಡೆಯಲ್ಲಿ ಗ್ರೇಡ್-2 ತಹಸೀಲ್ದಾರರಾಗಿ, ಬಳಿಕ ತಹಸೀಲ್ದಾರರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅವರ ಅವಧಿಯಲ್ಲಿ ರೈತರು, ಬಡವರ ಪರ ಕೆಲಸ (Local News) ಮಾಡಿದ್ದಾರೆ.  ತಾಲೂಕಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಅವರ ಸೇವೆ ಈ ಭಾಗಕ್ಕೆ ತುಂಬಾ (Local News) ಉಪಯುಕ್ತವಾಗಿತ್ತು. ಈ ಹಿಂದೆ ತಾಲೂಕು ಕಚೇರಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಕೆಲವೊಂದು ಕಾರ್ಯಕ್ರಮಗಳ ಬಗ್ಗೆ ನಮಗೆ ಮಾಹಿತಿ ಸಹ (Local News) ಇರುತ್ತಿರಲಿಲ್ಲ. ಜನಸಾಮಾನ್ಯರು, ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಹ ತುಂಬಾನೆ ಕಷ್ಟಕರವಾಗಿತ್ತು. ಇದೀಗ ಸಿಗ್ಬತ್ತುಲ್ಲಾ ರವರು ತಹಸೀಲ್ದಾರರಾಗಿ ಅಧಿಕಾರ ವಹಿಸಿಕೊಂಡಿದ್ದು, (Local News) ಜನರು, ರೈತರ ಸಮಸ್ಯೆಗಳು ಶೀಘ್ರವಾಗಿ ಬಗೆಹರಿಸುವ ಭರವಸೆ ನಮಗಿದೆ ಎಂದರು.

ಈ ಸಮಯದಲ್ಲಿ (Local News) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್‍ ಬಣ)ದ ತಾಲೂಕು ಅಧ್ಯಕ್ಷ ಸೋಮಶೇಖರ್‍, ವೆಂಕಟರೋಣಪ್ಪ, ಮಹಿಳಾ ಸಂಚಾಲಕಿ ಗಾಯತ್ರಿ, ಉಪಾಧ್ಯಕ್ಷ ರವೀಂದ್ರರೆಡ್ಡಿ, ಮುಖಂಡರಾದ ವೆಂಕಟರೆಡ್ಡಿ, ರಾಮರೆಡ್ಡಿ ಸೇರಿದಂತೆ ಹಲವರು ಇದ್ದರು.

Leave a Comment

Your email address will not be published. Required fields are marked *

Scroll to Top