Tuesday, November 5, 2024

Local News – ಕಲ್ಯಾಣಿಗಳ ಸ್ವಚ್ಚತೆಯನ್ನು ಕಾಪಾಡಲು ಮುಂದಾಗಿ: ತುಷಾರ್

Local News : ನಮ್ಮ ಪೂರ್ವಜರು ನೀರಿನ ಮೂಲಗಳನ್ನು ಸಂರಕ್ಷಿಸಿ ಕಲ್ಯಾಣಿಗಳು, ಕೆರೆಗಳನ್ನು ನಿರ್ಮಾಣ ಮಾಡಿ ಆ ನೀರನ್ನು ಕುಡಿಯುವುದಕ್ಕೂ ಸೇರಿದಂತೆ ಇತರೆ ಬಳಕೆಗಾಗಿ  (Local News) ಬಳಸುವಂತೆ ಮಾಡಿದ್ದಾರೆ. ಅಂತಹ ಜಲಮೂಲಗಳಲ್ಲಿ ಒಂದಾದ ಕಲ್ಯಾಣಿಗಳ ಸಂರಕ್ಷಣೆ ಹಾಗೂ ಅವುಗಳ ಸ್ವಚ್ಚತೆಯನ್ನು ಕಾಪಾಡಲು ನಾವೆಲ್ಲರೂ  (Local News) ಮುಂದಾಗಬೇಕೆಂದು ಕೆ.ಪಿ.ಐ.ಟಿ ಕಂಪನಿಯ ತುಷಾರ್‍ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಹೊರವಲಯದ ಸಂತೆ ಮೈದಾನದ ಬಳಿಯಿರುವ ಊರ ಬಾಗಿಲು ಆಂಜನೇಯಸ್ವಾಮಿ ದೇವಾಲಯದ  (Local News) ಬಳಿಯಿರುವ ಪುರಾತನ ಕಲ್ಯಾಣಿಯನ್ನು ಯೂತ್ ಫಾರ್‍ ಸೇವಾ, ಕೆಪಿಐಟಿ ಹಾಗೂ ವಾಹಿನಿ ಅಭಿವೃದ್ದಿ ಸಂಸ್ಥೆರವರುಗಳ ಸಹಯೋಗದಲ್ಲಿ  (Local News) ಪುನಶ್ಚೇತನಗೊಳಸಿದ್ದು, ಈ ಕಲ್ಯಾಣಿಯ ಜವಾಬ್ದಾರಿಯನ್ನು ಸ್ಥಳೀಯ ಮಂಡಳಿಗೆ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಕಂಪನಿಯ ಸಿ.ಎಸ್.ಆರ್‍ ಫಂಡ್ ನಲ್ಲಿ ಸಮುದಾಯಕ್ಕೆ  (Local News) ಅನುಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ. ನಮ್ಮ ಕಂಪನಿಯಲ್ಲಿ ಕೆಲಸ ಮಾಡುವಂತಹ ನೌಕರರ ಸಂಬಳದ ಹಣದಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಆದ್ದರಿಂದ  (Local News) ಈ ಕಲ್ಯಾಣಿಯ ಸ್ವಚ್ಚತೆಯನ್ನು ಸ್ಥಳೀಯ ಆಡಳಿತ ಮಂಡಳಿ ಚಾಚು ತಪ್ಪದೇ ಪಾಲನೆ ಮಾಡಬೇಕು. ನಾವು ಅನೇಕ ಕಡೆ ಇಂತಹುದೇ ಕಾರ್ಯಕ್ರಮ ಹಮ್ಮಿಕೊಂಡಿದ್ದು, (Local News) ಆ ಕಲ್ಯಾಣಿಗಳ ನೀರನ್ನು ಕುಡಿಯಲು ಸಹ ಬಳಸುತ್ತಾರೆ. ಅದೇ ರೀತಿ ಈ ಕಲ್ಯಾಣಿಯ ನೀರನ್ನು ಜನರು ಬಳಸುವಂತಾಗಬೇಕು ಎಂಬುದು ನಮ್ಮ ಮುಖ್ಯ ಉದ್ದೇಶವಾಗಿದೆ  (Local News) ಎಂದರು.

Kalyani Renovation in Gudibande 1

ಬಳಿಕ ವಾಹಿನಿ ಸಂಸ್ಥೆಯ ಯೋಜನಾ ನಿರ್ದೇಶಕ ಸುರೇಶ್ ಮಾತನಾಡಿ, (Local News) ಕೆಪಿಐಟಿ ಹಾಗೂ ಯೂತ್ ಫಾರ್‍ ಸೇವಾ ಸಂಸ್ಥೆಯ ವತಿಯಿಂದ ಪುರಾತನ ಕಲ್ಯಾಣಿಗಳ ಪುನಃಚ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಡಿಯಲ್ಲಿ ಗುಡಿಬಂಡೆ ತಾಲೂಕಿನಲ್ಲಿ 19 ಕಲ್ಯಾಣಿಗಳನ್ನು ಪುನಃಚ್ಚೇತನ ಮಾಡಲಾಗುತ್ತಿದೆ. (Local News)  ಹಂತ ಹಂತವಾಗಿ ಎಲ್ಲಾ ಕಲ್ಯಾಣಿಗಳನ್ನು ಪುನಃಚ್ಚೇತನ ಗೊಳಿಸಲಾಗುತ್ತದೆ. ಊರು ಬಾಗಿಲು ಆಂಜನೇಯಸ್ವಾಮಿ ಬಳಿಯ ಕಲ್ಯಾಣಿಯನ್ನು ಸ್ವಚ್ಚಗೊಳಿಸಿದ್ದು, ಈ ಕಲ್ಯಾಣಿಯ ಸುತ್ತಲೂ ಸಸಿಗಳನ್ನು ಸಹ ಹಾಕಲಾಗಿದೆ. (Local News) ಇದೀಗ ಕಲ್ಯಾಣಿಯ ಸುತ್ತಲೂ ನೆರಳು ನೀಡುವಂತಹ ಸಸಿಗಳನ್ನು ಹಾಕಲು ಕೆಪಿಐಟಿ ಕಂಪನಿಯವರು (Local News)  ಸಲಹೆ ನೀಡಿದ್ದಾರೆ. ಇದರ ಜೊತೆಗೆ ಮತಷ್ಟು ಅನುದಾನ ನೀಡುವುದಾಗಿಯೂ  (Local News) ತಿಳಿಸಿದ್ದಾರೆ ಎಂದರು.

ಈ ಸಮಯದಲ್ಲಿ  (Local News) ಯೂತ್ ಫಾರ್‍ ಸೇವಾ ಸಂಸ್ಥೆಯ ಸೀನಿಯರ್‍ ಪ್ರಾಜೆಕ್ಟ್ ಮ್ಯಾನೇಜರ್‍ ರವಿಶಂಕರ್‍, ಪ್ರಾಜೆಕ್ಟ್ ಕೋ ಆರ್ಡಿನೇಟರ್‍ ಮಂಜುನಾಥ್, ಕೆ.ಪಿ.ಐ.ಟಿ ಕಂಪನಿಯ ಸಿ.ಎಸ್.ಆರ್‍ ಕೊ ಆರ್ಡಿನೇಟರ್‍ ರಂಜಿತ್, ವಾಹಿನಿ ಸಂಸ್ಥೆಯ ಚಲಪತಿ, ಗ್ರಾಮ ವಿಕಾಸ ಸಂಸ್ಥೆಯ ಮುನಿರಾಜು, ಇಂದಿರಮ್ಮ, ಮಮತ, ನರಸಿಂಹಮೂರ್ತಿ, ಚಿರಂಜೀವಿ, ಯರಪ್ಪ ಸೇರಿದಂತೆ ಹಲವರು ಇದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!