Local News – ಚಿಕ್ಕಬಳ್ಳಾಫುರ ಜಿಲ್ಲೆಯ ಖ್ಯಾತ ಸಮಾಜ ಸೇವಕ ಕೆ.ವಿ.ನವೀನ್ ಕಿರಣ್ ರವರ 47ನೇ ಹುಟ್ಟುಹಬ್ಬದ ಅಂಗವಾಗಿ ನವೀನ್ ಕಿರಣ್ ಅಭಿಮಾನಿಗಳ ಸಂಘದ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನವೀನ್ ಕಿರಣ್ ರವರ ಹುಟ್ಟುಹಬ್ಬದ ಅಂಗವಾಗಿ 7 ದಿನಗಳ ಕಾಲ ಗುಡಿಬಂಡೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ನವೀನ್ ಕಿರಣ್ ಅಭಿಮಾನಿಯಾದ ಗುಂಪು ಮರದ ಆನಂದ್ ತಿಳಿಸಿದರು.

Local News – ನವೀನ್ ಕಿರಣ್ ಹುಟ್ಟುಹಬ್ಬದ ನಿಮಿತ್ತ 7 ದಿನ ವಿವಿಧ ಕಾರ್ಯಕ್ರಮಗಳು
ಈ ಕುರಿತು ಮಾತನಾಡಿದ ಗುಂಪು ಮರದ ಆನಂದ್ ಸಮಾಜ ಸೇವಕ, ಶಿಕ್ಷಣ ಪ್ರೇಮಿ ಆದಂತಹ ನವೀನ್ ಕಿರಣ್ ರವರ 47ನೇ ಹುಟ್ಟುಹಬ್ಬದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೊದಲನೆ ದಿನದಂದು ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ವಿಜೇತರಾದ ಮಹಿಳೆಯರಿಗೆ ಬಹುಮಾನಗಳನ್ನು ವಿತರಣೆ ಮಾಡಲಾಗಿದೆ. ಎರಡನೇ ದಿನದಂದು ಗುಡಿಬಂಡೆ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಮೆಕಾನಿಕ್ ಶಾಪ್ ಗಳಲ್ಲಿ ಕೆಲಸ ಮಾಡುವಂತಹ ಮೆಕ್ಯಾನಿಕ್ ಗಳಿಗೆ ಟಿ ಶರ್ಟ್ ಗಳನ್ನು ವಿತರಣೆ ಮಾಡಲಾಗಿದೆ. ಅದರಂತೆ ಬಡ ಮಹಿಳೆಯರಿಗೆ ಸೀರೆ ವಿತರಣೆ, ಗಿಡ ನೆಡುವ ಕಾರ್ಯಕ್ರಮ, ಹಣ್ಣು ಹಂಪಲು ಹಂಚುವುದು, ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. Read this also : Video : ಅಪಾಯದಲ್ಲಿದ್ದ ಗೋಮಾತೆಯನ್ನು ರಕ್ಷಿಸಿದ ಆಸ್ಟ್ರೇಲಿಯಾದ ಯುವಕ, ವೈರಲ್ ಆದ ವಿಡಿಯೋ…!
ಪ್ರತೀ ವರ್ಷ ಇದೇ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅವರ ಸಮಾಜ ಸೇವೆ, ಶಿಕ್ಷಣ ಸೇವೆ ಎಲ್ಲರಿಗೂ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
Local News – ಹುಟ್ಟುಹಬ್ಬಗಳನ್ನು ವಿಭಿನ್ನವಾಗಿ ಆಚರಿಸಿ
ಇದೇ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್ ಮಾತನಾಡಿ, ಕೆವಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ನವೀನ್ ಕಿರಣ್ ರವರು ಅನೇಕರಿಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅವರ ಸೇವೆ ಅಪಾರವಾದುದು. ಕೇವಲ ಕೇಕ್ ಕತ್ತರಿಸಿ ಅದ್ದೂರಿಯಾಗಿ ಹುಟ್ಟುಹಬ್ಬಗಳನ್ನು ಆಚರಿಸುವ ಬದಲು ಅವರ ಹೆಸರಿನಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತರರಿಗೂ ಅನುಕೂಲವಾಗುತ್ತದೆ ಜೊತೆಗೆ ಅವರ ಸೇವೆ ಬೇರೊಬ್ಬರಿಗೂ ಮಾದರಿಯಾಗುತ್ತದೆ. ನವೀನ್ ಕಿರಣ್ ರವರ ಮಾದರಿಯಲ್ಲಿ ಅವರ ಆದರ್ಶಗಳನ್ನು ಸಮಾಜಮುಖಿ ಕಾರ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

Local News – ಕಾರ್ಯಕ್ರಮದಲ್ಲಿ ಹಾಜರಿದ್ದವರು
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ದ್ವಾರಕನಾಥ ನಾಯ್ಡು, ಮಾಜಿ ಉಪಾಧ್ಯಕ್ಷ ಎಂ.ಎನ್.ರಾಜಣ್ಣ, ಪರಿಸರ ವೇದಿಕೆಯ ಅಧ್ಯಕ್ಷರಾದ ಬಿ ಮಂಜುನಾಥ್, ಮಧು, ಮುಜು, ಅಜಯ್, ಭಕ್ತರ್, ಉಸ್ಮಾನ್,ಸಲ್ಮಾನ್, ಸಾಕಿಬ್, ಮೂರ್ತಿ, ಮಧು ಸೇರಿದಂತೆ ಹಲವರು ಇದ್ದರು.
