Local News – ಜನಸ್ಪಂದನ ಕಾರ್ಯಕ್ರಮ ಮಾಡುತ್ತಿರುವುದು ಆಡಂಬರಕ್ಕಾಗಿ ಅಲ್ಲ, ಸರ್ಕಾರದಿಂದ ಬರುವ ಎಲ್ಲಾ ರೀತಿಯ ಯೋಜನೆಗಳ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ, ಮಧ್ಯವರ್ತಿ ಹಾವಳಿಯಿಂದ ಹಾಗೂ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

Local News – ಜನಸ್ಪಂದನಾ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ
ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗ್ಯನಗರ (ಬಾಗೇಪಲ್ಲಿ) ತಾಲೂಕಿನ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ತಿಮ್ಮಂಪಲ್ಲಿ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ಕಂದಾಯ ಇಲಾಖೆ ಹಾಗೂ ತಾ.ಪಂ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜನಸಾಮಾನ್ಯರು ವಿವಿಧ ಕೆಲಸಗಳ ನಿಮಿತ್ತ ವಿವಿಧ ಸರ್ಕಾರಿ ಕಚೇರಿಗಳಿಗೆ ದೂರುದ ಊರುಗಳಿಂದ ಹೋಗಿಬರುವುದು ತುಂಬಾ ಕಷ್ಟದ ಕೆಲಸವಾಗಿದೆ ಇದರಿಂದ ಸರ್ಕಾರ ಜನಸಾಮಾನ್ಯರಿಗೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ಹಾಗೂ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ಮನೆಬಾಗಿಲೆಗೆ ತಲುಸುವ ಉದ್ದೇಶದಿಂದ ಸರ್ಕಾರ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕೆಂದರು.
Local News – ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಲು ಸಲಹೆ
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷ ರವರು ಮಾತನಾಡಿ, ಇಡೀ ರಾಜ್ಯದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಜನಸ್ಪಂದನ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಭಾಗದ ಶಾಸಕರಾದ ಸುಬ್ಬಾರೆಡ್ಡಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಎಲ್ಲಾ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಾಧ್ಯವಾದರೆ ಅಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತಹ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

Read this also : ನಿಮ್ಮ ಯುಪಿಐ ಲಿಮಿಟ್ ಹೆಚ್ಚಾಗಿದೆಯೇ? ಸೆಪ್ಟೆಂಬರ್ 15ರ ನಂತರದ ಮಹತ್ವದ ಬದಲಾವಣೆಗಳೇನು? ಮಾಹಿತಿಗಾಗಿ ಈ ಸುದ್ದಿ ಓದಿ…!
Local News – ಸಭೆಯಲ್ಲಿ ದೊರೆತ ಸೌಲಭ್ಯಗಳು
ಈ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ವತಿಯಿಂದ ಪಹಣ, ಪವತಿ ಖಾತೆ, ವೃದ್ಯಾಪ ವೇತನ, ವಿಧವಾ ವೇತನ, ಈ ಖಾತೆ, ದರಕಾಸ್ತು ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಹಕ್ಕುಪತ್ರ ರುದ್ರಭೂಮಿಗೆ ಜಾಗವನ್ನು ವಿತರಣೆ ಮಾಡಲಾಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ 50 ಮಂದಿ ಗರ್ಭಿಣಿ ಸ್ತ್ರೀಯರಿಗೆ ಸಾಮೂಹಿಕ ಶ್ರೀಮಂತ, ಕೈಗಾರಿಕಾ ಇಲಾಖೆ ವತಿಯಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ, ಕಟ್ಟಡ ಕಾರ್ಮಿಕರಿಗೆ. ಸಲಕರಣೆ, ದೋಬಿ ವೃತ್ತಿ ಜೀವನ ಸಾಗಿಸಲು ಎರಡು ಐರನ್ ಬಾಕ್ಸ್ ಟೇಬಲ್, ಕುಲಿಮೆ ಕಾರ್ಮಿಕರಿಗೆ ಸಲಕರಣೆ ಸವಿತಾ ಸಮಾಜದ ವರಿಗೆ ವೃತ್ತಿ ಸಲಕರಣೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಮನಿಷಾ ಎನ್ ಪತ್ರಿ . ತ.ಪಂ ಇಒ ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರೆಡ್ಡಿ, ಮಾಜಿ ತಾ.ಪಂ ಮಾಜಿ ಅಧ್ಯಕ್ಷ ರಮೇಶ್. ಟಿಹೆಚ್‍ಓ ಡಾ. ಸತ್ಯನಾರಾಯಣರೆಡ್ಡಿ.ಬಿಇಒ ವೆಂಕಟೇಶ್‍ಪ್ಪ, ಕೈಗಾರಿಕೆ ಇಲಾಖೆ ವಿಸ್ತರಣಾಧಿಕಾರಿ ಬಾಬು, ಹುಬ್ಬಳ್ಳಿ ಬೈಯಪ್ಪ.ಬಾಬು, ಡಿಪಿಓ ರಾಮಚಂದ್ರ. ಸಹಾಯಕ ಇಂಜಿನಿಯರ್ ಮಹೇಶ್ ಮತ್ತಿತರರು ಇದ್ದರು.
