Local News : ಉತ್ತಮವಾದ ರಸ್ತೆ ಕಾಮಗಾರಿಗೆ ಮಾಡಿಸಿಕೊಟ್ಟ ಶಾಸಕರಿಗೆ ಗ್ರಾಮಸ್ಥರಿಂದ ಅಭಿನಂದನೆ…!

Local News – ಚಿಕ್ಕಬಳ್ಳಾಪುರ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಬಾಲೇನಹಳ್ಳಿ ಗ್ರಾಮದ ರಸ್ತೆ ತುಂಬಾ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿಯವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸುಮಾರು 13 ಲಕ್ಷ ಅನುದಾನ ನೀಡಿ ಉತ್ತಮ ರಸ್ತೆ ಮಾಡಿಸಿಕೊಟ್ಟಿದ್ದಾರೆ, ಅವರಿಗೆ ಗ್ರಾಮಸ್ಥರೆಲ್ಲರೂ ಅಭಿನಂದನೆ ಸಲ್ಲಿಸುತ್ತೇವೆ ಎಂದು ಸ್ಥಳೀಯ ಮುಖಂಡ ಬಾಲೇನಹಳ್ಳಿ ರಮೇಶ್ ತಿಳಿಸಿದರು.

MLA S.N. Subba Reddy has approved ₹13 lakh to reconstruct the damaged road in Balenahalli village, Gudibande Taluk - Local News

Local News – ಶಾಸಕರು ಅಭಿವೃದ್ದಿಗೆ ಆದ್ಯತೆ ನೀಡುತ್ತಾರೆ

ಈ ಕುರಿತು ಮಾತನಾಡಿದ ಅವರು, ನಮ್ಮ ಕ್ಷೇತ್ರದ ಶಾಸಕರು ಅಭಿವೃದ್ದಿಯಲ್ಲಿ ಸದಾ ಮುಂದಿರುತ್ತಾರೆ. ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡುತ್ತಾರೆ. ಈಗಾಗಲೇ ನಮ್ಮ ಗ್ರಾಮದ ಶಾಲೆ ದುರಸ್ಥಿಗೆ ಅನುದಾನ, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ನಿವೇಶನ ರಹಿತರರಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ಆದರೆ ಅವರ ವಿರೋಧಿಗಳು ಸೋಷಿಯಲ್ ಮಿಡಿಯಾ ವೇದಿಕೆಗಳಲ್ಲಿ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಸುಳ್ಳು ಆರೋಪಗಳನ್ನು ಮಾಡುತ್ತಾರೆ. ಆದರೂ ಈ ಆರೋಪಗಳಿಗೆ ಕಿವಿಗೊಡದ ಶಾಸಕರು ಸದಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡಲು ಯೋಜನೆ ರೂಪಿಸುತ್ತಾರೆ ಎಂದರು.

Local News – ಶಾಸಕರಿಗೆ ನಾವೆಲ್ಲ ಅಭಾರಿಯಾಗಿದ್ದೇವೆ

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಮ್ಮ ಬಾಲೇನಹಳ್ಳಿ ಗ್ರಾಮದ ರಸ್ತೆಯ ಅವ್ಯವಸ್ಥೆಯ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಅವರು ಆ ಸಮಯದಲ್ಲಿ ಅವರು ಶೀಘ್ರದಲ್ಲೇ ರಸ್ತೆ ಕಾಮಗಾರಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಅನುದಾನ ಸಹ ಬಿಡುಗಡೆ ಮಾಡಿಸಿ, ನಮ್ಮ ಗ್ರಾಮಕ್ಕೆ ಉತ್ತಮ ರಸ್ತೆಯನ್ನು ನಿರ್ಮಾಣ ಮಾಡಿಸಿದ್ದಾರೆ. ಅವರಿಗೆ ನಾವೆಲ್ಲರೂ ಅಭಾರಿಯಾಗಿದ್ದೇವೆ ಎಂದರು.

MLA S.N. Subba Reddy has approved ₹13 lakh to reconstruct the damaged road in Balenahalli village, Gudibande Taluk - Local News

Read this also : ನವೆಂಬರ್ 2025 ರಿಂದ ಆಧಾರ್ ಅಪ್‌ಡೇಟ್ ಸಂಪೂರ್ಣ ಬದಲಾವಣೆ: ಇನ್ನಷ್ಟು ವೇಗ, ಸುಲಭ, ಮತ್ತು ಬಹುಶಃ ಉಚಿತ..!

ಈ ವೇಳೆ ಬಾಲೇನಹಳ್ಳಿ ಗ್ರಾಮದ ನರಸಿಂಹಮೂರ್ತಿ, ರಾಜೇಶ್, ವೆಂಕಟೇಶ್, ಲಕ್ಷ್ಮೀನಾರಾಯಣ, ವೇಣು, ಕಿರಣ್, ಶ್ರೀನಿವಾಸ್ ಸೇರಿದಂತೆ ಮುಖಂಡರು, ಯುವಕರು ಹಾಗೂ ಸ್ಥಳೀಯ ನಿವಾಸಿಗಳು ಹಾಜರಿದ್ದರು.

Leave a Comment

Your email address will not be published. Required fields are marked *

Scroll to Top