Tuesday, February 17, 2026
HomeStateLocal News : ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು: ಬಿ.ಅಮೀರ್‍...

Local News : ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ನಡೆಯಬೇಕು: ಬಿ.ಅಮೀರ್‍ ಜಾನ್

Local News – ಕನ್ನಡ ಕಾರ್ಯಕ್ರಮಗಳು ಪಟ್ಟಣಕ್ಕೆ ಸೀಮಿತವಾಗದೆ ಗಡಿ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡದ ಜಾಗೃತಿ ಮೂಡಿಸುವಂತಾಗಲಿ ಎಂದು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಬಿ. ಅಮೀರ್‍ ಜಾನ್ ಸಲಹೆ ನೀಡಿದರು.

Kannada Awareness Programs in Rural Karnataka – Gudibande Kannada Sahitya Parishat Event - Local News

 

Local News – ಕನ್ನಡದ ಜಾಗೃತಿ ಗ್ರಾಮೀಣ ಭಾಗಕ್ಕೂ ಹರಡಬೇಕು

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿನಾಯಕನಗರದ ಶಿಕ್ಷಕ ರಾಮಾಂಜನೆಯ್ಯ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕಿನ 7 ಕನ್ನಡ ಸಾಹಿತ್ಯ ಸಮ್ಮೇಳನಗಳು ಗುಡಿಬಂಡೆ ತಾಲ್ಲೂಕು ಕೇಂದ್ರದಲ್ಲಿ ನಡೆದಿವೆ. ಮುಂದಿನ ಸಮ್ಮೇಳನಗಳನ್ನು ಹೋಬಳಿ ಅಥವಾ ಗಡಿ ಭಾಗದಲ್ಲಿ ಮಾಡಿದರೆ ಗಡಿ ಭಾಗದಲ್ಲಿ ಹಾಗೂ ಗಾಮೀಣ ಭಾಗದಲ್ಲಿ ಕನ್ನಡದ ಅರಿವನ್ನು ಮೂಡಿಸಿದಂತಾಗುತ್ತದೆ ಎಂದು ಸಲಹೆ ನೀಡಿದರು.

Local News – ಕನ್ನಡ ಭವನಕ್ಕೆ 23 ಗುಂಟೆ ಜಮೀನು ಮಂಜೂರು

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಗುಡಿಬಂಡೆ ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನಕ್ಕೆ 23ಗುಂಟೆ ಜಮೀನು ಮಂಜೂರು ಮಾಡಿಸಿದ್ದೇವೆ. ಕನ್ನಡ ಭವನ ನಿರ್ಮಾಣಕ್ಕೆ ತಾಲ್ಲೂಕಿನ ಎಲ್ಲಾ ಕನ್ನಡ ಪರ ಸಂಘಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಶಾಸಕರ ಬಳಿ ಒತ್ತಾಯ ಮಾಡಬೇಕಿದೆ ಎಂದರು. ಮಾನವ ಮತ್ತೆ ಮಂಗನಾಗಿ ಕವನ ವಾಚನ ಮಾಡಿದರು. Read this also : ಗುಡಿಬಂಡೆಯಲ್ಲಿ ವಿಶ್ವಕರ್ಮ ಜಯಂತಿ ಆಚರಣೆ: ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಸ್ಮರಣೆ

Local News – ಕನ್ನಡ ಭವನ- 2 ಕೋಟಿಯ ಅಂದಾಜು ವೆಚ್ಚ

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ತಾಲ್ಲೂಕಿನಲ್ಲಿ ಇನ್ನೂ ಹೆಚ್ಚಿನ ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಕ್ರಿಯಾ ಯೋಜನೆ ಸಿದ್ದಪಡಿಸಿದ್ದೇವೆ. ತಿಂಗಳಿಗೆ ಎರಡು ಮೂರು ಕಾರ್ಯಕ್ರಮಗಳನ್ನು ಮಾಡಲು ಉದ್ದೇಶಿಸಲಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಗೆ ಎಲ್ಲಾ ಕನ್ನಡಾಭಿಮಾನಿಗಳ ಸಹಕಾರ ಬೇಕಿದೆ ಎಂದರು. ತಾಲ್ಲೂಕು ಕೇಂದ್ರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಸಹಾಯಕ ನಿರ್ದೇಶಕರ ಹೆಸರಿಗೆ 0.23 ಗುಂಟೆ ಜಮೀನು ಮಂಜೂರಾಗಿದ್ದು ಶಾಸಕರಾದ ಎಸ್.ಎನ್. ಸುಬ್ಬಾರೆಡ್ಡಿ ಲ್ಯಾಂಡ್ ಆರ್ಮಿ ಅವರಿಗೆ ಸುಮಾರು 2 ಕೋಟಿಯ ಅಂದಾಜು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ. ಕನ್ನಡ ಭವನ ನಿರ್ಮಾಣಕ್ಕೆ ಮತ್ತೊಮ್ಮೆ ಶಾಸಕರ ಬಳಿ ಎಲ್ಲಾ ಸದಸ್ಯರ ತಂಡ ಹೋಗಿ ಮನವಿ ಮಾಡಬೇಕಿದೆ ಎಂದು ತಿಳಿಸಿದರು.

Kannada Awareness Programs in Rural Karnataka – Gudibande Kannada Sahitya Parishat Event - Local News

Local News – ಕನ್ನಡಾಭಿಮಾನಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಕಸಾಪ ವತಿಯಿಂದ ಶಿಕ್ಷಕ ರಾಮಾಂಜಿನೆಯ್ಯ ದಂಪತಿಗಳಿಗೆ ಗೌರವ ಸಮರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಆರ್. ವೆಂಕಟಾಚಲಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ, ಕಸಾಪ ಗೌರವ ಕಾರ್ಯದರ್ಶಿ ವಿ. ಶ್ರೀರಾಮಪ್ಪ, ಸಂಚಾಲಕ ಶ್ರೀನಿವಾಸ್, ಕರವೇ ಅಧ್ಯಕ್ಷ ಶ್ರೀನಿವಾಸ್ ಯಾದವ್, ಕನ್ನಡ ಸೇನೆ ಅಧ್ಯಕ್ಷ ಅಂಬರೀಶ್, ಕನ್ನಡ ಸಾಹಿತ್ಯ ಪರಿಷತ್ತಿನ ಸಿ.ಆರ್. ಮಂಜುನಾಥ ಗುಪ್ತ, ಸಿ.ಎಸ್. ರಾಘವೇಂದ್ರ, ಗೋವಿಂದಪ್ಪ,  ಶಿಕ್ಷಕರಾದ ಶಂಕರ್, ವಿಜಯ್ ಕುಮಾರ್, ಮನೋಹರ್, ಮಂಜುನಾಥ್, ಸಮಾಜ ಸೇವಕಿ ಅಂಬಿಕಾ ಸುರ್ಶನ್ ಸೇರಿದಂತೆ ಇತರರು ಭಾಗವಹಿಸಿದ್ದರು

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular