Local News – ಕಳೆದ 2022 ರಲ್ಲೇ ಒಕ್ಕಲಿಗ ಸಮುದಾಯದ ಮನವಿಯ ಮೇರೆಗೆ ಅಂದಿನ ಶಾಸಕರೂ, ಸಂಸದರೂ ಗುಡಿಬಂಡೆ ಪಟ್ಟಣಕ್ಕೆ ಆಗಮಿಸುವಂತಹ ಮುಖ್ಯದ್ವಾರದ ಸ್ಥಳದಲ್ಲಿಯೇ (ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ) ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣ ಮಾಡಲು ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಹೇಳಿದ್ದು, ಅದರಂತೆ ಇದೀಗ ಎಲ್ಲ ಜನಪ್ರತಿನಿಧಿಗಳು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಆಗ್ರಹಿಸಿದರು.
Local News – ಪತ್ರಿಕಾಗೋಷ್ಟಿಯಲ್ಲಿ ಎಚ್ಚರಿಕೆ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಒಕ್ಕಲಿಗರ ಭವನದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು, ಗುಡಿಬಂಡೆಯನ್ನು ಕಟ್ಟಿದಂತಹ ಹಾವಳಿ ಬೈರೇಗೌಡರ ಪುತ್ಥಳಿಯನ್ನು ನಿರ್ಮಾಣ ಮಾಡಲು ಕಳೆದ 2022ರಲ್ಲಿಯೇ ನಾವು ಶಾಸಕರಾಗಿದ್ದ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಹಾಲಿ ಸಂಸದರಾದ ಡಾ.ಕೆ.ಸುಧಾಕರ್ ರವರಿಗೆ ಮನವಿ ಮಾಡಿದ್ದೇವು. ಅಂದು ನಮ್ಮ ಮನವಿಗೆ ಸ್ಪಂಧಿಸಿದ ಅವರೂ ಸಹ ಪುತ್ಥಳಿಯ ನಿರ್ಮಾಣದ ಸಂಪೂರ್ಣ ಖರ್ಚು ವೆಚ್ಚ ಎಲ್ಲವನ್ನೂ ಭರಿಸುವುದಾಗಿ ಭರವಸೆ ನೀಡಿದ್ದರು. ನಮಗೆ ಹೇಳಿದ್ದ ಸರ್ಕಾರಿ ಜಾಗದಲ್ಲಿ ಬಲಿಜ ಸಮುದಾಯದವರು ಏಕಾಏಕಿ ಸದರಿ ಜಾಗ ತಮ್ಮದು ಎಂದು ಅಲ್ಲಿ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ವಿಚಾರ ನಮಗೆ ತಡವಾಗಿ ತಿಳಿದಿದ್ದು, ನಾವು ತಹಸಿಲ್ದಾರ್ ರವರ ಗಮನಕ್ಕೆ ತಂದಿದ್ದೆವು. ಆದರೇ ಏ.30 ರಂದು ಬಲಿಜ ಸಮುದಾಯದವರು ಏಕಾಏಕಿ ಆ ಜಾಗದಲ್ಲಿ ಕೈವಾರ ತಾತಯ್ಯನವರ ಪುತ್ಥಳಿ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲು ಮುಂದಾಗಿದ್ದರು. ಯಾವುದೇ ಅಧಿಕೃತ ದಾಖಲೆ ಇಲ್ಲದೇ ಅಲ್ಲಿ ಪುತ್ಥಳಿ ನಿರ್ಮಾಣದ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ನಾವು ವಿರೋಧ ವ್ಯಕ್ತಿಪಡಿಸಿ ಪ್ರತಿಭಟನೆ ನಡೆಸಿದೆವು. ಆದಷ್ಟು ಶೀಘ್ರವಾಗಿ ಆ ಜಾಗದಲ್ಲಿ ನಮಗೆ ಹಾವಳಿ ಬೈರೇಗೌಡ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Local News – ಕೆಂಪೇಗೌಡರನ್ನು ನಿಂಧಿಸಿದ ವ್ಯಕ್ತಿಗೆ ಶಿಕ್ಷೆಯಾಗಲಿ
ಬಳಿಕ ಸಮುದಾಯದ ಮುಖಂಡ ಪಾವಜೇನಹಳ್ಳಿ ನಾಗರಾಜರೆಡ್ಡಿ ಮಾತನಾಡಿ, ನಾವು ಯಾವುದೇ ಧರ್ಮದ, ಮುಖಂಡರ ವಿರೋಧವಿಲ್ಲ. ಕೈವಾರ ತಾತಯ್ಯ ನವರನ್ನೂ ಸಹ ನಾವು ದೇವರಂತೆ ಕಾಣುತ್ತೇವೆ. ಆದರೆ ನಿನ್ನೆ ನಡೆದಂತಹ ಗಲಾಟೆಯಲ್ಲಿ ಯಾರೋ ಒಬ್ಬರು ಕೆಂಪೇಗೌಡರಿಗೆ ಚಪ್ಪಲಿ ಹಾರ ಹಾಕಬೇಕು ಎಂದು ಹೇಳಿರುವುದು ಅಕ್ಷಮ್ಯ ಅಪರಾಧವಾಗಿದೆ. ಕೆಂಪೇಗೌಡರ ಸಾಧನೆ ಏನು ಎಂಬುದನ್ನು ತಿಳಿದು ಮಾತನಾಡಬೇಕು. ಕೂಡಲೇ ಆ ವ್ಯಕ್ತಿಯ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
Local News – ಒಗ್ಗಟ್ಟಿನಿಂದ ಹೋರಾಟ ಮಾಡಬೇಕು
ನಂತರ ಸಮುದಾಯದ ಮುಖಂಡೆ ಪರಿಮಳ ಮಾತನಾಡಿ ನಾವು ಇಂದು ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ. ಈಗಿರುವ ಒಗ್ಗಟ್ಟು ಮೊದಲೇ ಇದಿದ್ದರೇ ಇಂದು ಈ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ. ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೊದಲು ಗುರ್ತಿಸಲಾದ ಜಾಗವನ್ನು ಕೆಲವೊಂದು ಕಾರಣಗಳಿಂದ ಬಿಟ್ಟು ಮತ್ತೊಂದು ಜಾಗವನ್ನು ಗುರ್ತಿಸಲಾಗಿದೆ. ಇದೀಗ ಆ ಜಾಗವೂ ಸಹ ಬೇರೆಯವರು ನಮ್ಮದು ಎಂದು ಬರುತ್ತಿದ್ದಾರೆ. ಈ ಸಂಬಂಧ ನಾವೆಲ್ಲರೂ ಇಂದಿನಿಂದಲೇ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕೆಂದರು.
Local News – ಗುಡಿಬಂಡೆಯ ಪ್ರತೀಕ
ಇದೇ ಸಮಯದಲ್ಲಿ ಸಮುದಾಯದ ಮುಖಂಡ ಹೆಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಗುಡಿಬಂಡೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರ್ತಿಸಲು ಕಾರಣ ಕೆಂಪೇಗೌಡರು ಕಟ್ಟಿಸಿದಂತಹ ಕೆರೆ ಹಾಗೂ ಗುಡಿಬಂಡೆ ಬೆಟ್ಟದ ಕೋಟೆಗಳು. ಗುಡಿಬಂಡೆ ನಿರ್ಮಾಣ ಮಾಡಿದಂತಹ ಹಾವಳಿ ಬೈರೇಗೌಡರ ಪುತ್ಥಳಿ ನಿರ್ಮಾಣಕ್ಕೆ ಈ ರೀತಿಯಾಗಿ ಅಡ್ಡಿ ಮಾಡುವುದು ಸರಿಯಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಗುಡಿಬಂಡೆಯ ಪ್ರತೀಕವಾದ ಈ ಮಹತ್ತರ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕೆಂದರು. Read this also : ಒಂದೇ ಜಾಗದಲ್ಲಿ ಪುತ್ಥಳಿ ನಿರ್ಮಾಣ ಮಾಡಲು ಎರಡು ಸಮುದಾಯಗಳ ನಡುವೆ ವಾಗ್ವಾದ
Local News -ಶಾಂತಿ ಕದಡುವ ಕೆಲಸ ಮಾಡಬೇಡಿ
ಪತ್ರಿಕಾಗೋಷ್ಟಿಯಲ್ಲಿ ಸಮುದಾಯದ ಮುಖಂಡ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ಮೊನ್ನೆ ನಡೆದ ಘಟನೆಯಿಂದ ಗುಡಿಬಂಡೆಯಲ್ಲಿ ಎರಡು ಸಮುದಾಯಗಳ ನಡುವೆ ವೈಮನಸ್ಸು ಸೃಷ್ಟಿಯಾಗಿದೆ. ಇದು ಸರಿಯಾದ ಬೆಳವಣಿಗೆಯಲ್ಲ. ಬಲಿಜ ಸಮುದಾಯದವರಾಗಲೀ ಅಥವಾ ಒಕ್ಕಲಿಗ ಸಮುದಾಯದವರಾಗಲಿ ಶಾಂತಿ ಕದಡುವಂತಹ ಕೆಲಸ ಮಾಡಬಾರದರು. ಸೋಷಿಯಲ್ ಮಿಡಿಯಾಗಳಲ್ಲಿ ಇದಕ್ಕೆ ಸಂಬಂಧಿಸಿದಂತಹ ಯಾವುದೇ ಹೇಳಿಕೆಗಳನ್ನಾಗಲಿ, ವಿಡಿಯೋಗಳನ್ನಾಗಲಿ ಹಾಕಬಾರದು ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಮುಖಂಡ ಪ್ರಕಾಶ್ ಘಟನೆಯ ಕುರಿತು ಆಕ್ರೋಷ ಹೊರಹಾಕಿದರು. ಪತ್ರಿಕಾಗೋಷ್ಟಿಯ ಬಳಿಕ ಒಕ್ಕಲಿಗರ ಸಂಘದ ವತಿಯಿಂದ ಕೆಂಪೇಗೌಡರಿಗೆ ಅವಮಾನ ಮಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದರು. ಈ ಸಮಯದಲ್ಲಿ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಹಲವರು ಇದ್ದರು.