ಬಾಗೇಪಲ್ಲಿ ತಾಲೂಕಿನ ನಾರೇಮದ್ದೇಪಲ್ಲಿಯ ವಿನಾಯಕ (Local News) ಪ್ರೌಢಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಗುರು ವಂದನಾ’ ಕಾರ್ಯಕ್ರಮದಲ್ಲಿ 1995-96 ನೇ ಸಾಲಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಶಿಕ್ಷಕ, ಶಿಕ್ಷಕಿಯರ ವೃಂದಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆಗೆ ಸ್ವಾಗತಿಸಿ ಗುರುಗಳ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದು, ತಮ್ಮ ವ್ಯಾಸಂಗ ಅವಧಿಯಲ್ಲಿನ ನೆನಪುಗಳನ್ನು ಹಂಚಿಕೊಂಡರು.
ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಮದ ವಿನಾಯಕ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಕಾರ್ಯಕ್ರಮದ ಮುಖ್ಯದ್ವಾರದಲ್ಲಿ ತಮ್ಮ ಗುರುಗಳನ್ನು ನಿಲ್ಲಿಸಿ, ಪುಷ್ಪಾರ್ಚನೆ ಮಾಡುತ್ತಾ ವೇದಿಕೆಗೆ ಕರೆ ತಂದರು. ವೇದಿಕೆಯ ಮೇಲೆ ನಿಂತಿದ್ದ ಶಿಕ್ಷಕ, ಶಿಕ್ಷಕಿಯರ ಕಾಲಿಗೆ ಶಿಷ್ಯರು ನಮಸ್ಕರಿಸಿ ಆರ್ಶೀವಾದ ಪಡೆದುಕೊಂಡರು ಅಲ್ಲದೆ ವಿದ್ಯಾರ್ಥಿ ದೆಸೆಯಲ್ಲಿನ ನೆನಪುಗಳನ್ನು ನೆನಪಿಸಿಕೊಂಡರು. ತರಗತಿಯಲ್ಲಿ ಶಿಕ್ಷಕರ ಭೋಧನೆಯ ಪರಿ, ಮಾತಿನ ದಾಟಿ ಹಾಗೂ ಸ್ನೇಹಿತರು ಮಾಡುತ್ತಿದ್ದ ಚೇಷ್ಠೆಯಲ್ಲಿ ಇಂದಿನ ಕಾರ್ಯಕ್ರಮದಲ್ಲಿ ನೆರೆದಿದ್ದ ಹಳೇ ಸ್ನೇಹಿತರು ಹಂಚಿಕೊಂಡು ಖುಷಿಪಟ್ಟರು.
ಅಂದಿನ ದಿನಗಳಲ್ಲಿ ಶಾಲೆಗೆ ಶುಲ್ಕ ಪಾವತಿ ಮಾಡಲು ಸಾಧ್ಯವಾದಂತಹ ಪರಿಸ್ಥಿತಿ ಬಗ್ಗೆ ಹಲವು ವಿದ್ಯಾರ್ಥಿಗಳು ಹಳೇ ನೆನಪುಗಳನ್ನು ಮೆಲಕು ಹಾಕಿಕೊಂಡು ಭಾವೋದ್ರೇಗದಲ್ಲಿ ತಮ್ಮ ಅನಿಸಿಕೆಗಳನ್ನು ವೇದಿಕೆಯಲ್ಲಿ ಅನಿಸಿಕೆ ವ್ಯಕ್ತಪಡಿಸಿದರು. ಜನ್ಮ ನೀಡಿದ ತಾಯಿ, ತಂದೆ, ಊರು, ಶಾಲೆ ಹಾಗೂ ಪಾಠ ಕಲಿಸಿದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ. ಶಿಕ್ಷಕ, ಶಿಕ್ಷಕಿಯರು ಕಲಿಸಿದ ಶಿಸ್ಟು, ಗೌರವವನ್ನು ಉಳಿಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಇದನ್ನು ನಮ್ಮ ಮಕ್ಕಳಿಗೆ ಸಹ ಕಲಿಸಿದ್ದೇವೆ. ನಾವು ಎಷ್ಟೇ ದೊಡ್ಡವರು ಆಗಿರಲಿ, ಯಾವುದೇ ಉನ್ನತ ಸ್ಥಾನದಲ್ಲಿರಲಿ ಪಾಠ ಕಲಿಸಿದ ಗುರುಗಳನ್ನು, ಜನ್ಮ ನೀಡಿದ ತಾಯಿ, ತಂದೆಯನ್ನು ಮರೆಯಬಾರದು’ ಎಂದು ತಿಳಿಸಿದ ಶಾಲೆಯ ಅಭಿವೃದ್ದಿಯ ವಿಚಾರದಲ್ಲಿ ನಮ್ಮ ಬ್ಯಾಚಿನ ವಿದ್ಯಾರ್ಥಿಗಳು ಕೈಜೋಡಿಸುವುದಾಗಿ ತಿಳಿಸಿದರು.
ವ್ಯಾಸಂಗದ ಅವಧಿಯಲ್ಲಿ ಕೆಲ ಘಟನೆಗಳನ್ನು ನೆನಪುಗಳನ್ನು ಮಾಡಿಕೊಂಡ ಅವರು ತಮ್ಮ ನೆಚ್ಚಿನ ಶಿಕ್ಷಕರಾದ ವೆಂಕಟರಂಗಾರೆಡ್ಡಿ, ಎಚ್.ಎಲ್.ವೆಂಕಟರೆಡ್ಡಿ, ಎಂ.ಸುಧಾಕರರೆಡ್ಡಿ, ಎನ್.ಎಫ್.ಅಮೀರ್, ಬ್ರಹ್ಮಾಚಾರಿ, ಈಶ್ವರಾಚಾರಿ, ವೇಣುಗೋಪಾಲರಾವ್, ಚಿಕ್ಕಪ್ಪಯ್ಯ, ಶಿಕ್ಷಕಿ ಜಯಮ್ಮರವರಿಗೆ ಶಾಲು ಹೊದಿಸಿ, ಹೂಮಾಲೆ, ಮೈಸೂರು ಪೇಟಾ ತೊಡಿಸಿ ನೆನಪಿನ ಕಾಣಿಕೆಗಳನ್ನು ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.