Monday, August 18, 2025
HomeStateLocal News : ಅದ್ದೂರಿಯಾಗಿ ನಡೆದ ಗುಡಿಬಂಡೆ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ...!

Local News : ಅದ್ದೂರಿಯಾಗಿ ನಡೆದ ಗುಡಿಬಂಡೆ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ…!

Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆಬೀದಿಯ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಕಲ ಪೂಜ ಕೈಂಕರ್ಯಗಳೊಂದಿಗೆ ಅಪಾರ ಸಂಖ್ಯೆಯ ಭಕ್ತರ ಸಮೂಹದಲ್ಲಿ ನೆರವೇರಿತು. ಗುಡಿಬಂಡೆ ಪಟ್ಟಣದ ಮುಖ್ಯರಸ್ತೆಯ ಮೂಲಕ ವೆಂಕಟರಮಣಸ್ವಾಮಿ ರಥವನ್ನು ಎಳೆದ ಭಕ್ತರು ಗೋವಿಂದ ಗೋವಿಂದ ನಾಮಸ್ಮರಣೆ ಮಾಡುತ್ತಾ ಭಕ್ತಪರವಶರಾದರು.

Devotees pulling the decorated Brahma Rathotsava chariot of Sri Venkataramanaswamy Temple in Gudibande, Karnataka, during Shravan month festival 2025 - Local News

Local News – ದೇವರಿಗೆ ವಿಶೇಷ ಅಲಂಕಾರ

ಗುಡಿಬಂಡೆ ಮುಜರಾಯಿ ಇಲಾಖೆ ಮತ್ತು ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ನಾಲ್ಕನೇ ಶನಿವಾರ ಬ್ರಹ್ಮ ರಥೋತ್ಸವ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಕೃಷ್ಣಗಂಧೋತ್ಸವ ಮತ್ತು ಬ್ರಹ್ಮ ರಥೋತ್ಸವಕ್ಕೆ ವಸಂತ ಸೇವೆ ನೆರವೇರಿದ ಬಳಿಕ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳಿರಿಸಿ ಹೋಮ, ಹವನ, ಪೂಜಾ ಕೈಕರ್ಯಗಳುನ್ನು ನೆರವೇರಿಸಲಾಯಿತು. ರಥವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು.

Local News – ಗೋವಿಂದ ಗೋವಿಂದ ಎಂದು ಮೊಳಗಿದ ಭಕ್ತ ಘೋಷ

ರಥೋತ್ಸವಕ್ಕೆ ಬಂದಿದ್ದ ನೂರಾರು ಭಕ್ತರು ಗೋವಿಂದ ಗೋವಿಂದ ಎಂಬ ನಾಮವನ್ನು ಜಪಿಸುತ್ತಾ ರಥವನ್ನು ಎಳೆದು, ದೇವರ ದರ್ಶನವನ್ನು ಪಡೆದರು. ಬ್ರಹ್ಮರಥವು ಪಟ್ಟಣದ ಮಾರುತಿವೃತ್ತದಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಶ್ರೀಲಕ್ಷ್ಮಿ ಆದಿನಾರಾಯಣಸ್ವಾಮಿ ದೇವಲಯವರೆಗೆ ಬಳಿಕ ಸಂಜೆ ಮಾರುತಿ ವೃತ್ತದ ವರೆಗೆ ಎಳೆದು ನಿಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ರಥದ ಮೇಲೆ ಬಾಳೆಹಣ್ಣು, ಹೂವು ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ ಭಕ್ತಾದಿಗಳಿಗೆ  ಅನ್ನಸಂತರ್ಪಣೆ ಏರ್ಪಡಸಲಾಗಿತ್ತು. Read this also : ವಸ್ತುಗಳನ್ನು ಯಾರಿಗೂ ಕೊಡಬೇಡಿ, ಬೇರೆಯವರದ್ದನ್ನೂ ಬಳಸಬೇಡಿ – ವಾಸ್ತು ಶಾಸ್ತ್ರದ ಮಹತ್ವಪೂರ್ಣ ಸಲಹೆಗಳು!

Devotees pulling the decorated Brahma Rathotsava chariot of Sri Venkataramanaswamy Temple in Gudibande, Karnataka, during Shravan month festival 2025 - Local News

ಈ ಸಂದರ್ಭದಲ್ಲಿ ದೇವಾಲಯದ ಧರ್ಮದರ್ಶಿ ಶ್ರೀರಾಮಯ್ಯ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್, ರಾಜಸ್ವ ನಿರೀಕ್ಷಕ ಕುಮಾರ ಸ್ವಾಮಿ, ಸಬ್ ಇನ್ಸ್ ಪೆಕ್ಟರ್ ರಮೇಶ್, ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ಟ್ರಸ್ಟ್ ನ ನಿರ್ದೇಶಕರು, ಸದಸ್ಯರು, ಕಂದಾಯ ಇಲಾಖಾಧಿಕಾರಿಗಳು, ಪೊಲೀಸ್ ಸಿಬ್ಬಂದಿ ವಿವಿಧ ಇಲಾಖಾ ಅಧಿಕಾರಿಗಳು, ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular