ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (TAPCMS) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಬಣ ಭರ್ಜರಿ ಜಯಗಳಿಸುವ ಮೂಲಕ (Local News) ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದರೆ, 4 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Local News – ಚುನಾವಣೆ ಫಲಿತಾಂಶ ಘೊಷಣೆ
ಮುಂದಿನ 5 ವರ್ಷಗಳ ಆಡಳಿತ ಅವಧಿಗೆ ನಡೆದ ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ರೈತ ಸಂಘದ ಬೆಂಬಲಿತ ಅಭ್ಯರ್ಥಿಗಳು ಸೇರಿ ಒಟ್ಟು 3 ಗುಂಪುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 39 ಅಭ್ಯರ್ಥಿಗಳು ಕಣದಲ್ಲಿದ್ದರು. ಅಂತಿಮವಾಗಿ 14 ನಿರ್ದೇಶಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ.
ವಿವಿಧ ಮೀಸಲಾತಿ ಹಾಗೂ ಸಾಮಾನ್ಯ ಕ್ಷೇತ್ರಗಳಿಂದ ಆಯ್ಕೆಯಾದ ಅಭ್ಯರ್ಥಿಗಳ ವಿವರ:
- ಸಾಮಾನ್ಯ ವರ್ಗ: ಕೆ.ಜೆ. ಆನಂದರೆಡ್ಡಿ, ಆದಿನಾರಾಯಣಪ್ಪ, ಎನ್. ಗಂಗಿರೆಡ್ಡಿ.
- ಪರಿಶಿಷ್ಟ ಜಾತಿ (SC): ಕೊಂಡಾವಲಹಳ್ಳಿ ನಾರಾಯಣಸ್ವಾಮಿ.
- ಪರಿಶಿಷ್ಟ ಪಂಗಡ (ST): ಬೆಣ್ಣೆಪರ್ತಿ ನರಸಿಂಹಪ್ಪ.
- ಪ್ರವರ್ಗ-ಎ: ಗವಿಕುಂಟಹಳ್ಳಿ ಮನೋಜ್ ಕುಮಾರ್.
- ಪ್ರವರ್ಗ-ಬಿ: ಕೆ.ಸಿ. ವೆಂಕಟರೆಡ್ಡಿ.
- ಮಹಿಳಾ ಮೀಸಲಾತಿ: ಭಾಗ್ಯಮ್ಮ, ಸುಜಾತ.
- ಡೆಲಿಗೇಟ್ ಕ್ಷೇತ್ರ: ತಿರುಮಣಿ ಮಹದೇವಪ್ಪ, ಪೋಲಂಪಲ್ಲಿ ವೇಣುಗೋಪಾಲ, ಚಿಕ್ಕ ಕುರುಬರಹಳ್ಳಿ ವೆಂಕಟನರಸಪ್ಪ, ಪಸುಪಲೋಡು ಎಂ.ವಿ. ಶಿವಣ್ಣ ಹಾಗೂ ಸೋಮೇನಹಳ್ಳಿ ಶ್ರೀರಾಮಪ್ಪ. (Local News)
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, ಬಹುಮತ ಸಾಧಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವ (Local News) ಆಚರಿಸಿದರು. Read this also : ನಿಮ್ಮ ಆಧಾರ್ ಕಾರ್ಡ್ ಗೆ ಯಾವ ಮೊಬೈಲ್ ನಂಬರ್ ಲಿಂಕ್ ಆಗಿದೆ? ತಿಳಿಯುವುದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ!

ಮುಖಂಡ ಹರಿನಾಥರೆಡ್ಡಿ ಚುನಾವಣೆ ಫಲಿತಾಂಶ ಬಗ್ಗೆ ಹೇಳಿದ್ದು ಹೀಗೆ
ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ಮುಖಂಡ ಹರಿನಾಥರೆಡ್ಡಿ, ಇಂದು ಕಾಂಗ್ರೇಸ್ ಶಾಸಕರಿರುವ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ-ಜೆಡಿಎಸ್ ಬೆಂಬಲಿತರು ಜಯಭೇರಿ ಗಳಿಸುತ್ತಿದ್ದಾರೆ. ಗುಡಿಬಂಡೆಯ ಡಿ.ಸಿ.ಸಿ ಬ್ಯಾಂಕ್, ಪಿ.ಎಲ್.ಡಿ ಬ್ಯಾಂಕ್ ಇದೀಗ ಟಿ.ಎ.ಪಿ.ಸಿ.ಎಂ.ಎಸ್ ಸಹ ಎನ್.ಡಿ.ಎ. ಪಾಲಾಗಿದೆ. ಮುಂಬರುವಂತಹ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, (Local News) ಪಟ್ಟಣ ಪಂಚಾಯತಿ, ಚೀಮುಲ್ ಚುನಾವಣೆಗಳಲ್ಲೂ ಸಹ ಬಿಜೆಪಿ ಬೆಂಬಲಿತರೇ ಜಯ ಗಳಿಸಿ ಕ್ಷೇತ್ರವನ್ನು ಎನ್.ಡಿ.ಎ ತೆಕ್ಕೆಗೆ ತೆಗೆದುಕೊಳ್ಳುತ್ತದೆ ಎಂದರು.
ಈ ಸಮಯದಲ್ಲಿ ಬಿಜೆಪಿ ಮುಖಂಡ ಕೋನಪ್ಪರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥರೆಡ್ಡಿ, ಮುಖಂಡರಾದ ನಾಗರಾಜರೆಡ್ಡಿ, ಮಂಜುನಾಥರೆಡ್ಡಿ, ಮದ್ದಿರೆಡ್ಡಿ, ಅಶ್ತ್ಥರೆಡ್ಡಿ, ಮನೋಜ್, ಸೇರಿದಂತೆ ಹಲವರು ಇದ್ದರು.
