Local News – ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಕೆ.ವಿ.ನಾರಾಯಣಸ್ವಾಮಿಯವರು ಅವಿರೋಧವಾಗಿ ಆಯ್ಕೆಯಾಗಿದ್ದರೇ, ರಾಜ್ಯ ಪರಿಷತ್ ಸದಸ್ಯರಾಗಿ ತಾಲೂಕು ಪಂಚಾಯತಿಯ ರಾಮಾಂಜಿನಪ್ಪ, ಖಜಾಂಚಿಯಾಗಿ ಆರೋಗ್ಯ ಇಲಾಖೆಯ ಹೆಚ್.ನರಸಿಂಹಯ್ಯ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ. ಚುನಾವಣೆಯ ಫಲಿತಾಂಶದ ಬಳಿಕ ಪಟ್ಟಣದ ಮುಖ್ಯರಸ್ತೆಯಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕರು ಹಾಗೂ (Local News) ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಚುನಾವಣೆಯ (Local News) ನಿಮಿತ್ತ ನಿರ್ದೇಶಕರಾಗಿ 27 ಮಂದಿ ಆಯ್ಕೆಯಾಗಿದ್ದು, ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಕೆ.ವಿ.ನಾರಾಯಣಸ್ವಾಮಿಯವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವರ ವಿರುದ್ದ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಕಾರಣದಿಂದ ಅವಿರೋಧವಾಗಿ ಕೆ.ವಿ.ನಾರಾಯಣಸ್ವಾಮಿಯವರು ಆಯ್ಕೆಯಾದರು. ಈ ಮೂಲಕ ಸತತವಾಗಿ ನಾಲ್ಕನೇ ಬಾರಿಗೆ (Local News) ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಕೆ.ವಿ.ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ.
ಉಳಿದಂತೆ ಖಜಾಂಚಿ ಸ್ಥಾನಕ್ಕೆ (Local News) ಆರೋಗ್ಯ ಇಲಾಖೆಯ ಹೆಚ್.ನರಸಿಂಹಯ್ಯ ಹಾಗೂ ಪಶು ವೈದ್ಯ ಇಲಾಖೆಯ ಡಾ.ನಟರಾಜ್ ರವರುಗಳು ನಾಮಪತ್ರ ಸಲ್ಲಿಸಿದ್ದು, ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್.ನರಸಿಂಹಯ್ಯ 16 ಮತಗಳನ್ನು ಪಡೆದು ಖಜಾಂಚಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಡಾ.ನಟರಾಜ್ ರವರಿಗೆ 10 ಮತಗಳು ಬಂದಿದೆ. ಇನ್ನೂ ರಾಜ್ಯ ಪರಿಷತ್ ಸ್ಥಾನಕ್ಕೆ ತಾಲೂಕು ಪಂಚಾಯತಿಯಿಂದ ರಾಮಾಂಜಿನಪ್ಪ ಹಾಗೂ ಸರ್ವೆ ಇಲಾಖೆಯಿಂದ ರಘುಪತಿ ನಾಮಪತ್ರ ಸಲ್ಲಿಸಿದ್ದು, ರಾಮಾಂಜಿನಪ್ಪ 20 ಮತಗಳನ್ನು ಪಡೆದು ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ರಘುಪತಿಯವರಿಗೆ 6 ಮತಗಳು ಬಂದಿವೆ.
ಬಳಿಕ ಮಾತನಾಡಿದ (Local News) ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ನಾನು ಸುಮಾರು 15 ವರ್ಷಗಳಿಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನೌಕರರ ಪರ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ಸರ್ಕಾರಿ ನೌಕರರು ನನ್ನ ಮೇಲೆ ಮತ್ತೊಮ್ಮೆ ನಂಬಿಕೆಯಿಟ್ಟು ಅವರ ಸೇವೆ ಸಲ್ಲಿಸುವ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಕ್ಷೇತ್ರಕ್ಕೂ ಚುನಾವಣೆ ನಡೆದಿತ್ತು. (Local News) ಚುನಾವಣೆಯಲ್ಲೂ ಶಿಕ್ಷಕರು ನನಗೆ ಬೆಂಬಲ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವೇತನ ಆಯೋಗವನ್ನು ಜಾರಿ ಮಾಡಿಸುವ ಭರವಸೆ ನೀಡಿತ್ತು. ಅದರಂತೆ ವೇತನ ಆಯೋಗ ಜಾರಿ ಮಾಡಿಸಿದೆ. ಇದೀಗ ಎನ್.ಪಿ.ಎಸ್ ನೌಕರರ ಸಮಸ್ಯೆಯನ್ನು ಬಗೆಹರಿಸುವ ಭರವಸೆ ಸಹ ನೀಡಿದ್ದು, ಶೀಘ್ರದಲ್ಲೆ ಈ (Local News) ಕೆಲಸ ಸಹ ಆಗಲಿದೆ. ನಾನು ಕೇವಲ ನಾಮ ನಿರ್ದೇಶಿತ ಅಧ್ಯಕ್ಷನಾಗಿದ್ದೇನೆ. ನನ್ನ ಪ್ರಕಾರ ಎಲ್ಲರೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರೇ, ನೀವೆಲ್ಲಾ ನನ್ನ ಬೆನ್ನೆಲುಬಾಗಿ ನಿಂತು ಸಹಕಾರ ನೀಡಿದ್ದಕ್ಕೆ ನಾನು ಅಧ್ಯಕ್ಷನಾಗಿದ್ದೇನೆ. (Local News) ಎಲ್ಲರೂ ಒಗ್ಗಟ್ಟಿನಿಂದ ನೌಕರರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡೋಣ ಎಂದರು.
ಈ ವೇಳೆ (Local News) ಸರ್ಕಾರಿ ನೌಕರರ ಸಂಘದ ನೂತನ ನಿರ್ದೇಶಕರಾದ ಮುನಿಕೃಷ್ಣಪ್ಪ, ಬಿ.ಆರ್ ಮಂಜುನಾಥ್, ನಾಗರಾಜ್, ಕನಕರಾಜು, ರಾಜಶೇಖರ್, ಶಿವಶರಣಪ್ಪ, ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಹಂಪಸಂದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಕ್ಷಯ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀರಾಮರೆಡ್ಡಿ, ಜಿಪಿಟಿ ಸಂಘದ ರಾಮಕೃಷ್ಣ, ಶಿಕ್ಷಕರಾದ ಕೋಡಿ ನಾರಾಯಣಸ್ವಾಮಿ, ಸಿ.ವೈ.ನಾರಾಯಣಸ್ವಾಮಿ ಸೇರಿದಂತೆ ಹಲವರು ಇದ್ದರು.